Slide
Slide
Slide
previous arrow
next arrow

ಜ.7ಕ್ಕೆ ಬೆಳ್ಳೆಕೇರಿ ಮಾಸ್ತರ್ ನೆನಪಿನ ‘ಗುರುಸ್ಮರಣೆ’ ಕಾರ್ಯಕ್ರಮ

300x250 AD

ಶಿರಸಿ: ఆಘ್ರಾ ಘರಾನಾವನ್ನು ಜಿಲ್ಲೆಯಲ್ಲಿ ಪಸರಿಸಿದ, ಸುಮಾರು 7 ದಶಕಗಳ ಕಾಲ ಸಂಗೀತ ಸೇವೆ ಸಲ್ಲಿಸಿದ್ದ, ಸಂಗೀತವನ್ನೇ ಜೀವನವಾಗಿಸಿಕೊಂಡಿದ್ದ ರಾಷ್ಟ್ರದ ಹೆಮ್ಮೆಯ ಕಲಾವಿದರಾಗಿದ್ದ ತಾಲೂಕಿನ ಬೆಳ್ಳೆಕೇರಿಯ ಜಿ.ಎಸ್.ಹೆಗಡೆ ನೆನಪಿನಲ್ಲಿ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದೆ ಎಂದು ಆಗ್ರಾ ಗಾಯಕಿ ಕಲಾವೃಂದದ ಅಧ್ಯಕ್ಷ, ನಿವೃತ್ತ ಪ್ರಾಚಾರ್ಯ ಆರ್.ಎಸ್.ಹೆಗಡೆ ಮಾಹಿತಿ ನೀಡಿದ್ದಾರೆ.

1958 ರಿಂದ ತಮ್ಮ ಜೀವನದ ಕೊನೆಯವರೆಗೂ ಸಾವಿರಾರು ಜನರಿಗೆ ಸಂಗೀತ ಕಲಿಸಿದ್ದ, ಹಾಡುಗಾರಿಕೆ, ಜಲ ತರಂಗ, ವೀಣೆ, ಹಾರ್ಮೋನಿಯಂ ಎಲ್ಲವನ್ನೂ ಕಲಿಸುತ್ತಿದ್ದ, ಜಿ.ಎಸ್.ಹೆಗಡೆ ಬೆಳ್ಳೆಕೇರಿಯವರ ನೆನಪಿನ ‘ಗುರುಸ್ಮರಣೆ’ ಕಾರ್ಯಕ್ರಮವು ಜ.7, ರವಿವಾರದಂದು ಮಧ್ಯಾಹ್ನ 3 ಗಂಟೆಯಿಂದ ನಗರದ ನೆಮ್ಮದಿಯ ರಂಗಧಾಮದಲ್ಲಿ ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆರ್.ಎಸ್.ಹೆಗಡೆ ಬೆಳ್ಳೆಕೇರಿ ವಹಿಸಲಿದ್ದು, ವಿ.ಭಾರತೀ ಪ್ರತಾಪ್ ಬೆಂಗಳೂರು ಇವರು ಅತಿಥಿ ಕಲಾವಿದರಾಗಿ ಆಗಮಿಸಿ ಗಾಯನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.   ಕರ್ನಾಟಕ ಕಲಾತಿಲಕರಾದ ಬೆಳ್ಳೆಕೇರಿ ಮಾಸ್ತರರ ನೆನಪಿನ ಸಂಗೀತ ಪ್ರಶಸ್ತಿಯನ್ನು ಖ್ಯಾತ ಹಿಂದೂಸ್ತಾನಿ ವಿ.ಭಾರತೀ ಪ್ರತಾಪ್ ಬೆಂಗಳೂರು ಇವರಿಗೆ ನೀಡಿ ಗೌರವಿಸಲಾಗುತ್ತಿದ್ದು, ಇದೇ ವೇಳೆ ಕುಮಾರಿ ಯಶೋಧಾ ಹೆಗಡೆ, ಶ್ರೀಮತಿ ವತ್ಸಲಾ ಮಾಪಾರಿ, ಡಾ.ಶೈಲಾ ಮಂಗಳೂರು ಇವರಿಗೆ ಸನ್ಮಾನ ನಡೆಯಲಿದೆ.

300x250 AD

ನಂತರದಲ್ಲಿ ಬಳಿಕ ಯಶೋಧಾ ಹೆಗಡೆ, ವತ್ಸಲಾ ಶೇಟ್, ಡಾ. ಶೈಲಾ ಮಂಗಳೂರು ಅವರನ್ನು ಸನ್ಮಾನಿಸಲಾಗುತ್ತದೆ. ಬಳಿಕ ಡಾ. ಶೈಲಾ ಮಂಗಳೂರು ಅವರ ಗಾಯನ, ಭಾರತಿ ಹೆಗಡೆ ವಾಯಲಿನ್, ಕಿರಣ್ ಕಮಲಾಕರ ಭಟ್ಟ ಗಾಯನ, ರೇಖಾ ಹೆಗಡೆ ಹುಬ್ಬಳ್ಳಿ ಹಾಗೂ ಸ್ಮಿತಾ ಹೆಗಡೆ ಶಿರಸಿ ಜುಗಲ್‌ಬಂದಿ, ಶ್ರೀಧರ ಹೆಗಡೆ ಗಾಯನ, ಅರುಣ ಭಟ್, ಮಂಜುನಾಥ ಮೋಟಿನಸರ, ವಿಜಯೇಂದ್ರ ಹೆಗಡೆ ತಬಲಾ, ಅಜಯ ಹೆಗಡೆ ವರ್ಗಾಸರ ಸಂವಾದಿನಿಯಲ್ಲಿ ಸಹಕರಿಸಲಿದ್ದಾರೆ. ಕಾರ್ಯಕ್ರಮಕ್ಕೆ ಸರ್ವ ಸಂಗೀತಾಸಕ್ತರು, ಅಭಿಮಾನಿಗಳು ಆಗಮಿಸಿ ಚಂದಗಾಣಿಸಲು ಕೋರಲಾಗಿದೆ.

Share This
300x250 AD
300x250 AD
300x250 AD
Back to top