Slide
Slide
Slide
previous arrow
next arrow

ಬರಗಾಲವನ್ನು ಸಮರ್ಥವಾಗಿ ಎದುರಿಸಲು ಶಾಸಕ ಭೀಮಣ್ಣ ಸೂಚನೆ

300x250 AD

ಸಿದ್ದಾಪುರ: ಬರಗಾಲವನ್ನು ಸಮರ್ಥವಾಗಿ ಎದುರಿಸಲು ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕಿದೆ ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಕರೆ ನೀಡಿದರು.

ತಾಲೂಕಿನ ಸೋವಿನಕೊಪ್ಪ ಗ್ರಾಮ ಪಂಚಾಯ್ತಿ ಸಭಾಭವನದಲ್ಲಿ ಕುಡಿಯುವ ನೀರು ಹಾಗೂ ಮೇವಿನ ಪರಿಸ್ಥಿತಿ ಕುರಿತು ತಾಲೂಕಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿ, ಪ್ರತಿ ಪಂಚಾಯ್ತಿ ವ್ಯಾಪ್ತಿಯ ಸಾರ್ವಜನಿಕರ ಸಹಕಾರ ಪಡೆದು ನೀರಿನ ಸಮಸ್ಯೆ ನೀಗಿಸಬೇಕಿದೆ. ಕುಡಿಯುವ ನೀರಿನ ವಿಷಯದಲ್ಲಿ ಯಾರೇ ಉದಾಸೀನತೆ ತೋರಿದರೂ ಯಾವ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಒಂದೇ ನೀರಿನ ಮೂಲವನ್ನು ನಂಬಿಕೊಂಡರೆ ದಿನ ಕಳೆದಂತೆ ಸಮಸ್ಯೆಯಾಗಲಿದೆ. ಬದಲಿ ವ್ಯವಸ್ಥೆ ಮಾಡಿಟ್ಟುಕೊಳ್ಳಿ. ನೀರಿನ ಮೂಲವನ್ನು ತಕ್ಷಣ ಕಂಡುಕೊಂಡು ಕುಡಿಯುವ ನೀರನ್ನು ಸಮರ್ಪಕವಾಗಿ ಪೂರೈಸಬೇಕು. ಕುಡಿಯುವ ನೀರಿನ ವಿಚಾರದಲ್ಲಿ ಹಣದ ಕೊರತೆಯಾಗದಂತೆ ತಾಲೂಕಾ ಆಡಳಿತ ನೋಡಿಕೊಳ್ಳಲಿದೆ ಎಂದರು.

300x250 AD

ತಾಲೂಕಾ ಪಂಚಾಯ್ತಿ ಇಓ ದೇವರಾಜ ಹಿತ್ತಲಕೊಪ್ಪ ಮಾಹಿತಿ ನೀಡಿ, ತಾಲೂಕಿನ 97 ಮಜರೆಗಳಲ್ಲಿ ಕುಡಿಯುವ ನೀರಿನ ಕೊರತೆಯಾಗುವುದನ್ನು ಪಟ್ಟಿ ಮಾಡಿಕೊಳ್ಳಲಾಗದೆ. ಪಂಚಾಯ್ತಿಯಲ್ಲಿ 15ನೇ ಹಣಕಾಸು ಯೋಜನೆಯಡಿ 2 ಲಕ್ಷ ಹಣ ಕಾಯ್ದಿರಿಸಲಾಗಿದೆ ಎಂದರು.
ತಾಲೂಕಾ ದಂಡಾಧಿಕಾರಿ ಎಂ.ಆರ್.ಕುಲಕರ್ಣಿ ಮಾಹಿತಿ ನೀಡಿ, ಅರೆಂದೂರು ಹೊಳೆಯ ನೀರನ್ನು ಕೃಷಿಗೆ ಬಳಸುವ ರೈತರೊಂದಿಗೆ ಕಾವಂಚೂರು ಗ್ರಾಮ ಪಂಚಾಯ್ತಿಯಲ್ಲಿ ಸಭೆ ನಡೆಸಿ ಮನವೊಲಿಸಲಾಗಿದೆ ಎಂದರು.
ಈ ವೇಳೆ ಸೋವಿನಕೊಪ್ಪ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸುಮಾ ಗೌಡ ಹಾಗೂ ತಾಲೂಕಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

Share This
300x250 AD
300x250 AD
300x250 AD
Back to top