Slide
Slide
Slide
previous arrow
next arrow

ಸೆಂಟ್ ಮೈಕಲ್ ಕಾನ್ವೆಂಟ್ ಪ್ರೌಢಶಾಲೆಯಲ್ಲಿ ವಾರ್ಷಿಕ ಕ್ರೀಡೋತ್ಸವ

300x250 AD

ದಾಂಡೇಲಿ : ನಗರದ ಸೆಂಟ್‌ ಮೈಕಲ್ ಕಾನ್ವೆಂಟ್ ಪ್ರೌಢಶಾಲೆಯಲ್ಲಿ ವಾರ್ಷಿಕ ಕ್ರೀಡೋತ್ಸವ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆಯನ್ನು ನೀಡಲಾಯಿತು.

ಕ್ರೀಡೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಪತ್ರಕರ್ತ ಸಂದೇಶ್.ಎಸ್.ಜೈನ್ ಅವರು ಪರಸ್ಪರ ಶಾಂತಿ, ಸೌಹಾರ್ದತೆಯನ್ನು ಸಾರಲು ಕ್ರೀಡೆ ಪರಿಣಾಮಕಾರಿಯಾಗಿದೆ. ಕ್ರೀಡೆಯಲ್ಲಿ ಸೋಲು – ಗೆಲುವನ್ನು ಸಮಾನಚಿತ್ತದಿಂದ ಸ್ವೀಕರಿಸಿ‌ ಮುನ್ನಡೆದಾಗ ಯಶಸ್ಸಿನ ಗುರಿಯನ್ನು ಮುಟ್ಟಲು ಸಾಧ್ಯ. ಸೋಲನ್ನು ಸವಾಲಾಗಿ ಸ್ವೀಕರಿಸಿ ಸತತ ಪರಿಶ್ರಮಿಗಳಾದಾಗ ಮಹತ್ವಕಾಂಕ್ಷಿ ಬದಲಾವಣೆಯನ್ನು ಕಾಣಲು ಸಾಧ್ಯವಿದೆ ಎಂದು ಹೇಳಿ ಕ್ರೀಡೋತ್ಸವಕ್ಕೆ ಶುಭವನ್ನು ಕೋರಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಹಳೆ ವಿದ್ಯಾರ್ಥಿ ಅಲ್ಲಂ‌ ಪ್ರಭು ಪಾಟೀಲ್ ಅವರು ಕಲಿತ ಶಾಲೆಗೆ ಗೌರವವನ್ನು ತಂದುಕೊಡುವ ಕಾರ್ಯ ವಿದ್ಯಾರ್ಥಿಗಳಿಂದಾಗಬೇಕು. ಕಲಿತ ಶಾಲೆ ಮತ್ತು ಕಲಿಸಿದ ಗುರುಗಳನ್ನು ಸದಾ ಗೌರವಿಸಿ, ಮುನ್ನಡೆಯಬೇಕೆಂದರು.ಸಿ.ಆರ್.ಪಿ ಶ್ರೀದೇವಿ, ಮಾತನಾಡಿ ಕ್ರೀಡೆಯ ಜೊತೆಗೆ ಕಲಿಕೆಯಲ್ಲಿಯೂ ಪರಿಣಾಮಕಾರಿಯಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದರು.

300x250 AD

ನಗರ ಸಭೆಯ ಲೆಕ್ಕಾಧಿಕಾರಿ ಮೈಕಲ್ ಫರ್ನಾಂಡೀಸ್ ಮತ್ತು ಪಾಲಕರ ಸಂಘದ ನೇಹಾ ಕಾಮತ್ ಅವರು ಸಂದರ್ಭೋಚಿತವಾಗಿ ಮಾತನಾಡಿ ಕ್ರೀಡಾಕೂಟಕ್ಕೆ ಶುಭವನ್ನು ಹಾರೈಸಿದರು. ಅಧ್ಯಕ್ಷತೆಯನ್ನು ವಹಿಸಿ‌‌ ಮಾತನಾಡಿದ ಶಾಲಾ‌ ಮುಖ್ಯೋಪಾಧ್ಯಯಿನಿ ಸಿಸ್ಟರ್ ಸೆಲ್ವಿ ಶಾಲೆಯ ಪ್ರತಿಯೊಂದು ಕಾರ್ಯಚಟುವಟಿಕೆಗಳಿಗೆ ವಿದ್ಯಾರ್ಥಿಗಳ‌ ಪಾಲಕರು ತುಂಬು ಹೃದಯದ ಸಹಕಾರವನ್ನು‌ ನೀಡುತ್ತಿದ್ದಾರೆ. ಸರ್ವರ ಸಹಕಾರವಿದ್ದಾಗ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲು ಸಾಧ್ಯ ಎಂದರು.

ರಾಜ್ಯಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದ ವಿದ್ಯಾರ್ಥಿನಿ ನಿಶ್ಚಿತಾ ಕಾಮತ್ ಇವಳನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಪಾಲಕರ ಸಂಘದ ಉಪಾಧ್ಯಕ್ಷರಾದ ರಿಯಾಜ್ ಬಾಬು ಸೈಯದ್, ಪಾಲಕರ ಸಂಘದ ಪ್ರಮುಖರುಗಳಾದ ಜಾಕ್ ಫೆರ್ನಾಂಡೀಸ್, ರೇಷ್ಮಾ ಬಾವಾಜಿ, ರಾಹುಲ್ ಬಾವಾಜಿ, ಶಿಲ್ಪಾ ಕೋಡೆ, ಫಿಲೋಮಿನಾ ಫೆರ್ನಾಂಡೀಸ್, ಶೋಭಾ, ಡಯಾನಾ ಬೋರ್ಜಸ್, ನಿರ್ಮಲ, ಮುಶ್ರಾತ್‌ ಮೊದಲಾದವರು ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ಶಿಕ್ಷಕರಾದ ಡೇವಿಡ್ ದಾನಂ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮಕ್ಕೆ ಗುರು ಮಠಪತಿ ಸ್ವಾಗತಿಸಿದರು. ಜಾಮ್ ಕುಟಿನ್ಹೋ‌ ವಂದಿಸಿದರು. ನಯನಾ ನಿರೂಪಿಸಿದರು.

Share This
300x250 AD
300x250 AD
300x250 AD
Back to top