Slide
Slide
Slide
previous arrow
next arrow

ವಿಷ್ಣುಮೂರ್ತಿ ದೇವಸ್ಥಾನದ ದರ್ಶನಪಾತ್ರಿ ನಿಧನ

300x250 AD

ಹೊನ್ನಾವರ: ತಾಲ್ಲೂಕಿನ ಬಳ್ಕೂರ ಗ್ರಾಮದ ಕೋಡ್ಲಮನೆ ವಿಷ್ಣುಮೂರ್ತಿ ದೇವಸ್ಥಾನದ ದರ್ಶನಪಾತ್ರಿಗಳಾದ ಪಾಂಡುರಂಗ ಭಂಡಾರಕರ್ (63) ನಿಧನರಾದರು.

ಈ ಹಿಂದೆ ಬಳ್ಕೂರ ವಿ.ಎಸ್.ಎಸ್ ಸಂಘದ ನಿರ್ದೇಶಕರಾಗಿ, ದೇವಸ್ಥಾನದ ಆಡಳಿತ ಮಂಡಳಿಯ ಹಾಲಿ ಅಧ್ಯಕ್ಷರಾಗಿ, ಕಳೆದ ಮೂರು ತಲೆಮಾರುಗಳಿಂದ ಕೊಡ್ಲುಮನೆ ವಿಷ್ಣುಮೂರ್ತಿ ದೇವಸ್ಥಾನದ ವಂಶ ಪಾರಂಪರ್ಯವಾಗಿ ದರ್ಶನ ಪಾತ್ರಿಯಾಗಿ, ವಿವಿಧ ಸಂಘ ಸಂಸ್ಥೆಯಲ್ಲಿ ಸಕ್ರಿಯರಾಗಿ ಸೇವೆ ಸಲ್ಲಿಸಿದ್ದರು. ಬುಧವಾರ ಬಳ್ಕೂರ ರಥಬೀದಿಯಲ್ಲಿ ನಡೆಯುತ್ತಿದ್ದ ಅಯ್ಯಪ್ಪ ಸ್ವಾಮಿ ದೀಪೋತ್ಸವಕ್ಕೆ ಪೂಜೆ ಸಲ್ಲಿಸಲು ಆಗಮಿಸಿ ಪೂಜೆ ಸಲ್ಲಿಸುತ್ತಿರುವ ಸಂಧರ್ಭದಲ್ಲಿ ದಿಡೀರ್ ಕುಸಿದು ಬಿದ್ದರು. ತಕ್ಷಣ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ನಿಧನರಾದರು. ನಿಧನದ ಹಿನ್ನಲೆಯಲ್ಲಿ ಸನ್ನಿದಾನದಲ್ಲಿ ನಿಗಧಿಯಾದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಮಿತಿಯವರು ರದ್ದುಗೊಳಿಸಿದರು.

300x250 AD

ಸನ್ನಿದಾನದ ಗುರು ಸ್ವಾಮಿ ನೀಲಗೋಡ ಯಕ್ಷಚೌಡೇಶ್ವರಿ ದೇವಾಲಯದ ಅರ್ಚಕರಾದ ಮಾದೇವ ಸ್ವಾಮಿ, ಯಕ್ಷಗಾನ ಕಲಾವಿದ ಬಳ್ಕೂರ ಕೃಷ್ಣ ಯಾಜಿ ಗಣಪತಿ ನಾಯ್ಕ ಕುಮಟಾ, ರಾಘು ಕಾಮನಮಕ್ಕಿ, ಮುಗ್ವಾ ಗಣೇಶ ನಾಯ್ಕ, ವೆಂಕಟೇಶ ಪೈ ಹೆಗ್ಗಾರ, ಮಂಗೇಶ ಶ್ಯಾನಭಾಗ, ಗಣಪತಿ ನಾಯ್ಕ ಬಿಟಿ‌, ಕೊಡ್ಲಮನೆ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು, ಗ್ರಾಮಸ್ಥರು ಸಂತಾಪ ಸೂಚಿಸಿದ್ದಾರೆ.

Share This
300x250 AD
300x250 AD
300x250 AD
Back to top