Slide
Slide
Slide
previous arrow
next arrow

ಪಿಕಪ್ ವಾಹನ, ಟ್ರ್ಯಾಕ್ಟರ್ ನಡುವೆ ಅಪಘಾತ

300x250 AD

ಹಳಿಯಾಳ: ಕಿತ್ತೂರಿನಿಂದ ಕೋಳಿಗಳನ್ನು ತುಂಬಿಕೊಂಡು‌ ಹೋಗುತ್ತಿದ್ದ ಪಿಕಪ್ ವಾಹನ‌ ಮತ್ತು ಟ್ರ್ಯಾಕ್ಟರ್‌ ನಡುವೆ ಅಪಘಾತವಾದ ಘಟನೆ ಹಳಿಯಾಳ ಪಟ್ಟಣದ ಬಸರಿಕಟ್ಟಿ ಪೆಟ್ರೋಲ್ ಪಂಪ್ ಬಳಿ ನಡೆದಿದೆ.

ಕಿತ್ತೂರಿನಿಂದ ಕೋಳಿಗಳನ್ನು ತುಂಬಿಕೊಂಡು ಹೊನ್ನಾವರಕ್ಕೆ ಹೋಗುತ್ತಿದ್ದ ಪಿಕಪ್ ವಾಹನ‌ ಮತ್ತು ಕಬ್ಬು ಸಾಗಾಟ ಮಾಡಿ ಪ್ಯಾರಿ ಸಕ್ಕರೆ ಕಾರ್ಖಾನೆಯಿಂದ ಹಿಂದುರುಗಿ ಬರುತ್ತಿದ್ದ ಟ್ರ್ಯಾಕ್ಟರ್ ನಡುವೆ ಬಸರಿಕಟ್ಟಿ ಪೆಟ್ರೋಲ್ ಪಂಪ್ ಹತ್ತಿರ ಅಪಘಾತವಾಗಿದೆ. ಅಪಘಾತದಿಂದ ಪಿಕಪ್ ವಾಹನದ ಮುಂಭಾಗ ನಜ್ಜುಗುಜ್ಜಾಗಿದೆ.

300x250 AD

ಪ್ಯಾರಿ ಸಕ್ಕರೆ ಕಾರ್ಖಾನೆಗೆ ಕಬ್ಬನ್ನು ಹೇರಿಕೊಂಡು ಟ್ರ್ಯಾಕ್ಟರ್ ಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುವ ನಿಟ್ಟಿನಲ್ಲಿ ಅಪಘಾತಗಳು ನಡೆಯದಂತೆ ಮತ್ತು ಸುಗಮ ಸಂಚಾರಕ್ಕಾಗಿ ಕಳೆದ ವರ್ಷ ಪ್ಯಾರಿ ಸಕ್ಕರೆ ಕಾರ್ಖಾನೆಯವರು ಕಾರ್ಖಾನೆಯ ವತಿಯಿಂದ ಸುರಕ್ಷತಾ ಸಿಬ್ಬಂದಿಗಳನ್ನು‌ ನಿಯೋಜಿಸುತ್ತಿದ್ದರು. ಆದರೆ ಈ‌ ವರ್ಷ ಅಪಘಾತ ನಡೆದ ಸ್ಥಳದಲ್ಲಿ ಸುರಕ್ಷತಾ ಸಿಬ್ಬಂದಿಯನ್ನು ನಿಯೋಜನೆ ಮಾಡದಿರುವುದರಿಂದ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

Share This
300x250 AD
300x250 AD
300x250 AD
Back to top