Slide
Slide
Slide
previous arrow
next arrow

ಲೋಕಸಭಾ ಚುನಾವಣೆ: 28 ಸ್ಥಾನಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಕೆ.ಆರ್.ಎಸ್. ಸಿದ್ಧ

300x250 AD

ಕಾರವಾರ: ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಎಲ್ಲಾ 28 ಸ್ಥಾನಗಳಲ್ಲೂ ಸ್ಪರ್ಧೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿದೆ ಎಂದು ಜಿಲ್ಲಾ ಅಧ್ಯಕ್ಷ ನೀಲಕಂಠ ತಿಳಿಸಿದರು.

ಅವರು ಇಲ್ಲಿನ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆಸಕ್ತ ಚುನಾವಣಾ ಸ್ಪರ್ಧಾಕಾಂಕ್ಷಿಗಳನ್ನು ಸಂದರ್ಶನಕ್ಕೆ ಆಹ್ವಾನಿಸುತ್ತಿದೆ. ಸಂದರ್ಶನವು ಜ. 6 ಮತ್ತು 7 ರಂದು ಪಕ್ಷದ ಬೆಂಗಳೂರಿನ ಕೇಂದ್ರ ಕಛೇರಿಯಲ್ಲಿ ನಡೆಯಲಿದೆ. ಪಕ್ಷದ ಹಾಲಿ ಸದಸ್ಯರಾಗಿರುವವರಿಗೆ 5 ಸಾವಿರ ಹಾಗೂ ಹೊಸದಾಗಿ ಪಕ್ಷ ಸೇರಿ ಸಂದರ್ಶನಕ್ಕೆ ಹಾಜರಾಗುವವರಿಗೆ 10 ಸಾವಿರ ರೂ. ಸಂದರ್ಶನ ಶುಲ್ಕವಿರುತ್ತದೆ. ಸಂದರ್ಶನದ ನಂತರ ರಾಜ್ಯ ಸಮಿತಿಯು ಸಂಭಾವ್ಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಸಂಭಾವ್ಯ ಅಭ್ಯರ್ಥಿಗಳು ಎಂದು ಘೋಷಿಸುತ್ತದೆ. ಈ ವಿಚಾರವಾಗಿ ಹೆಚ್ಚಿನ ಮಾಹಿತಿಗಾಗಿ TEL:+919611720802 ನಂಬರ್ ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು. ಕೆಆರ್‌ಎಸ್ ಪಕ್ಷವು ಆರಂಭದಿಂದದಲೂ ಎಲ್ಲಾ ಚುನಾವಣೆಗಳಲ್ಲಿ ಸ್ಪರ್ಧಿಸಿದೆ. ನಿರಂತರವಾಗಿ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುತ್ತಾ, ವ್ಯವಸ್ಥೆಯಲ್ಲಿನ ಅಕ್ರಮ, ಅನ್ಯಾಯ, ದುರಾಡಳಿತ, ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಾ, ನಾಡಿನ ನೆಲ, ಜಲ, ಭಾಷೆಯ ಸಂರಕ್ಷಣೆಗಾಗಿ ಮತ್ತು ರಾಜ್ಯದ ಸಮಗ್ರ ಅಭಿವೃದ್ಧಿಗೆ ಕೆಲಸ ಮಾಡುತ್ತಾ ಬಂದಿದೆ. ಉತ್ತಮ ಹಾಗೂ ಜನಪರ ಕಾಳಜಿ ಉಳ್ಳ ಪ್ರಾಮಾಣಿಕ ರಾಜಕಾರಣಕ್ಕೆ ರಾಜ್ಯದಲ್ಲಿರುವ ಏಕೈಕ ವೇದಿಕೆಯಾಗಿದೆ. ರಾಜಕೀಯ ಪಕ್ಷಗಳನ್ನು ಕೇವಲ ಭ್ರಷ್ಟಾಚಾರ, ದುರಾಚಾರ ಹಾಗೂ ಸುಳ್ಳು ಭರವಸೆಗಳಿಂದ ಕೂಡಿರುವುದು ಎಂಬ ಎಂದು ಬಲವಾದ ನಂಬಿಕೆ ಬೇರೂರಿರುವ ಕಾಲಘಟ್ಟದಲ್ಲಿ, ನಿರಂತರವಾಗಿ ತನ್ನ ಧೈಯ ಮತ್ತು ಸಿದ್ಧಾಂತಗಳಿಗೆ ಬದ್ಧವಾಗಿ, ಅದರಂತೆ ನಡೆಯುತ್ತಿರುವ ಪಕ್ಷ ಕೇವಲ ಕರ್ನಾಟಕ ರಾಜ್ಯ ಸಮಿತಿ ಪಕ್ಷ ಮಾತ್ರವಾಗಿದೆ. ದೇಶದಲ್ಲಿ ಇಂದು ವಿಚಿತ್ರ ಹಾಗೂ ಸಂದಿಗ್ಧ ಸಂದರ್ಭದಲ್ಲಿದ್ದು, ಪ್ರಾಮಾಣಿಕ ಹಾಗೂ ಜನಪರ ರಾಜಕಾರಣವು ಎಂದಿಗಿಂತ ತೀವ್ರವಾಗಿ ಆಗತ್ಯವಾಗಿದೆ. ಇಂತಹ ಸಂದರ್ಭದಲ್ಲಿ ಪ್ರಾಮಾಣಿಕರು, ಕನ್ನಡಪರ ಕಾಳಜಿ, ರಾಜ್ಯದ ಅಭಿವೃದ್ಧಿ ಬಗ್ಗೆ ಚಿಂತಿಸುವವರು, ಅಕ್ರಮ ನಡೆಸದೆ ಚುನಾವಣೆ ಎದುರಿಸುವ, ದೇಣಿಗೆ ಮೂಲಕ ಚುನಾವಣಾ ಖರ್ಚು ವೆಚ್ಚವನ್ನು ಎದುರಿಸುವ ಮನಸ್ಥಿತಿ ಇರುವವರು, ಜನಪರ ಕಾಳಜಿ ಉಳ್ಳವರು, ಪ್ರಾದೇಶಿಕತೆ, ಒಕ್ಕೂಟ ವ್ಯವಸ್ಥೆಯಲ್ಲಿ ಹಾಗು ಪ್ರಮುಖವಾಗಿ ದೇಶದ ಸಂವಿಧಾನದಲ್ಲಿ ನಂಬಿಕೆ ಉಳ್ಳವರು ಕೆ.ಆರ್.ಎಸ್ ಪಕ್ಷ ಸೇರಿ, ರಾಜ್ಯದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಕೋರಿದರು.

300x250 AD

ರಾಜ್ಯ ಸಮಿತಿಯು ಲೋಕಸಭಾ ಚುನಾವಣೆಗೆ ತಯಾರಿ ಮಾಡುವ ಹಾಗೂ ಪ್ರಚಾರದ ಬಗ್ಗೆಯೂ ದೀರ್ಘವಾಗಿ ಚರ್ಚಿಸಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದೆ. ಪಕ್ಷಕ್ಕೆ ಅಗತ್ಯವಿರುವ ನಿಧಿಯನ್ನು ದೇಣಿಗೆ ಮೂಲಕ ಸಂಗ್ರಹಿಸುವ ಯೋಜನೆಯನ್ನು, ಯುವಜನತೆಯನ್ನು ಒಳಗೊಳ್ಳುವ ಬಗ್ಗೆಯೂ ಕೂಡ ಚರ್ಚೆಯಾಗಿ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಈ ನಿಟ್ಟಿನಲ್ಲಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವ ಕೆಲಸ ನಡೆಯುತ್ತಿದ್ದು ಜಿಲ್ಲಾ ಹಾಗೂ ತಾಲೂಕು ನಮಿತಿಗಳ ಪುನರ್ ರಚನೆ ಕಾರ್ಯ ಪ್ರಗತಿಯಲ್ಲಿದ್ದು, ಸದ್ಯದಲ್ಲಿಯೆ ಈ ಕಾರ್ಯ ಪೂರ್ಣಗೊಳ್ಳಲಿದೆ. ಹೊಸದಾಗಿ ನೇಮಕವಾದ ಪದಾಧಿಕಾರಿಗಳಿಗೆ ನಿರಂತರ ತರಬೇತಿ ಕಾರ್ಯಕ್ರಮಗಳನ್ನು ಕೂಡ ಆಯೋಜಿಸಲಾಗುತ್ತಿದೆ ಎಂದರು.
ಬೇಬಿ ಆಯಿಷಾ ಸಯ್ಯದ್, ವಿನಾಯಕ ನಾಯ್ಕ, ರವಿ ನಾಯ್ಕ, ಗಣಪತಿ ನಾಯ್ಕ, ಉಲ್ಲಾಸ ನಾಯ್ಕ ಪತ್ರಿಕಾಗೋಷ್ಟಿಯಲ್ಲಿದ್ದರು.

Share This
300x250 AD
300x250 AD
300x250 AD
Back to top