Slide
Slide
Slide
previous arrow
next arrow

ಪತ್ರಕರ್ತ ವೆಂಕಟೇಶ ಮೇಸ್ತ ಆತ್ಮಹತ್ಯೆಗೆ ಶರಣು: ಬದುಕು ಮುಗಿಸಿದ ದುಡುಕಿನ ನಿರ್ಧಾರ

300x250 AD

ಹೊನ್ನಾವರ : ತಾಲೂಕಿನ ಕ್ರಿಯಾಶೀಲ ಪತ್ರಕರ್ತರಾಗಿ, ಉತ್ತಮ ಛಾಯಾಚಿತ್ರ ಗ್ರಾಹಕರಾಗಿ ಕೊಂಕಣ ಖಾರ್ವಿ ಸಮಾಜ ಸಂಘಟನೆಯಲ್ಲಿ, ಧಾರ್ಮಿಕ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಮಂಕಿ ಹಳೆಮಠದ ವೆಂಕಟೇಶ ಮೇಸ್ತ (48) ಮಂಗಳವಾರ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪತ್ನಿ, ಚಿಕ್ಕ ಮಗಳೊಂದಿಗೆ ಪಟ್ಟಣದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಇವರು ಬಾಡಿಗೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಳ್ಳುವುದರೊಂದಿಗೆ ಅವರನ್ನೇ ನಂಬಿದ್ದ ಹೆಂಡತಿ ಮಗಳನ್ನು ತಬ್ಬಲಿ ಮಾಡಿ ಇಹಲೋಕ ತ್ಯಜಿಸಿದ್ದಾರೆ.

ಕಾಲೇಜು ದಿನದಿಂದಲೇ ಕ್ರಿಯಾಶೀಲರಾಗಿದ್ದ ಇವರು ಬಿಎ ಮತ್ತು ಜರ್ನಲಿಸಂ ವ್ಯಾಸಂಗ ಮಾಡಿದ್ದರು. ಪ್ರಾರಂಭದಲ್ಲಿ ಮಂಕಿಯ ಸ್ಟುಡಿಯೋದಲ್ಲಿ ಫೋಟೋ ಗ್ರಾಪರ್ ಆಗಿ ಕೆಲಸ ಮಾಡಿ, ನಂತರ ಫೋಟೋ ಮತ್ತು ವಿಡಿಯೋ ದಲ್ಲಿ ಪರಿಣಿತಿ ಪಡೆದು ಗೋಲ್ಡನ್ ಕ್ರಿಯೆಸನ್ಸ್ ಎಂಬ ಹೆಸರಿನಲ್ಲಿ ವಿಡಿಯೋ ಮಿಕ್ಸಿಂಗ್ ಕೆಲಸ ಮಾಡಿಕೊಡುತ್ತಿದ್ದರು. ವಿವಿಧ ದೃಶ್ಯ ಮಾದ್ಯಮದಲ್ಲಿ ನಿರೂಪಕರಾಗಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ಕನ್ನಡ ಜನಾಂತರಂಗ, ಕರಾವಳಿ ಮುಂಜಾವು, ಸಂಯುಕ್ತ ಕರ್ನಾಟಕ ಮತ್ತು ವಿಜಯ ಸಂಕೇಶ್ವರರ ಪತ್ರಿಕೆ ಒಂದರಲ್ಲಿ ವರದಿಗಾರರಾಗಿ ಕೆಲಸ ಮಾಡಿದ್ದರು.

ಕರಾವಳಿ ವಿದ್ಯಾವರ್ಧಕ ಸಂಘ ಮಂಕಿ ಇದರ ಸ್ಥಾಪಕ ಅಧ್ಯಕ್ಷರಾಗಿ, ಉತ್ತರ ಕನ್ನಡ ಶೃಂಗೇರಿ ಗುರುವಂದನಾ ಸಮಿತಿಯಲ್ಲಿ ಸಕ್ರಿಯರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಕೊಂಕಣಿ ಖಾರ್ವಿ ಸಮಾಜದ ಮಾತೃಸಂಸ್ಥೆ ಅಖಿಲ ಭಾರತ ಕೊಂಕಣಿ ಖಾರ್ವಿ ಸಭಾದ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ, ಭಟ್ಕಳ ಮತ್ತು ಹೊನ್ನಾವರ ಭಾಗದಲ್ಲಿ ನೂತನ ಟಿವಿ ಮತ್ತು ಭಾವನಾ ಟಿವಿ ವರದಿಗಾರರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು.

ವಿಶೇಷವಾಗಿ ತನ್ನ ಊರಿನ ಯುವಕರ ಶಿಕ್ಷಣದ ಬಗ್ಗೆ, ಬಡ ಮೀನುಗಾರ ಕುಟುಂಬದ ಸೂರು ನಿರ್ಮಿಸಲು ಅಗತ್ಯ ಇರುವ ಕೆಲವು ದಾಖಲೆ ಸರಿಪಡಿಸಿ ಕೊಡುವುದು, ಬಡ ವಿದ್ಯಾರ್ಥಿಗಳಿಗೆ ದಾನಿಗಳಿಂದ ನೋಟ್ ಬುಕ್ ಇನ್ನಿತರ ಸೌಲಭ್ಯ ಒದಗಿಸಿ ಕೊಡುತ್ತಿದ್ದರು. ಸಾಮಾಜಿಕ ಧಾರ್ಮಿಕವಾಗಿ ತೊಡಗಿಕೊಂಡಿದ್ದದ್ದರು. ಶ್ರ0ಗೇರಿ ಗುರುದರ್ಶನ ಸಮಿತಿಯ ರಚನೆಯಲ್ಲಿ ಪ್ರಮುಖರಾಗಿದ್ದರು. ಯಕ್ಷಗಾನದ ಬಗ್ಗೆ ವಿಶೇಷ ಆಸಕ್ತಿ ಇದ್ದ ಇವರು ಕೋವಿಡ್ ಸಮಯದಲ್ಲಿ ಯೂಟ್ಯೂಬ್ ಮೂಲಕ ಯಕ್ಷಗಾನ ಪ್ರಿಯರಿಗೆ ಒದಗಿಸಿ ಕೊಟ್ಟಿದ್ದರು. ಮಂಕಿಯ ವಿದ್ಯಾವಂತರ ಒಂದು ಟೀಮ್ ನಲ್ಲಿ ಕ್ರಿಯಾಶೀಲ ವ್ಯಕ್ತಿ ಆಗಿದ್ದರು. ಕೊಂಕಣಿ ಖಾರ್ವಿ ಸಮಾಜದ ಬಗ್ಗೆ ಚಿಂತನೆ ಮಾಡುತ್ತಿದ್ದರು. ತನ್ನ ಜೊತೆ ಇದ್ದವರಿಗೆ ಸಹಾಯ ಸಹಕಾರ ನೀಡುವುದರ ಜೊತೆಗೆ ಮಾರ್ಗದರ್ಶನ ನೀಡುತ್ತಿದ್ದರು. ಎಲ್ಲದರಲ್ಲೂ ಮಾದರಿ ಆಗಿದ್ದ ಇವರ ಒಂದು ಕ್ಷಣದ ದುಡುಕಿನ ನಿರ್ಧಾರ ಬದುಕಿನ ಪಯಣ ಮುಗಿಸಿಬಿಟ್ಟಿದೆ. ಅವರನ್ನೇ ನಂಬಿದ್ದ ವಿದ್ಯಾವಂತ ಹೆಂಡತಿ ಮತ್ತು ಮಗಳು ತಬ್ಬಲಿಯಾಗಿದ್ದಾರೆ. ಪ್ರತಿದಿನ ಶಾಲೆಗೆ, ಭರತನಾಟ್ಯ ಕ್ಲಾಸ್ ಗೆ ಕರೆದುಕೊಂಡು ಹೋಗುತ್ತಿದ್ದ ಅಪ್ಪನನ್ನು ಕಳೆದುಕೊಂಡ ಮಗಳು ಕಣ್ಣೀರು ಸುರಿಸುವಂತಾಗಿದೆ.

ತಾಲೂಕಿನ ವೈದ್ಯರು, ವಿವಿಧ ಕ್ಷೇತ್ರದ ಗಣ್ಯರು ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಅಕಾಲಿಕ ಮರಣಕ್ಕೆ ಕಂಬನಿ ಮಿಡಿದಿದ್ದಾರೆ. ಅವರ ಸಾವು ಸಮಾಜಕ್ಕೆ ತುಂಬಲಾರದ ನಷ್ಟವಾಗಿದ್ದು, ಅವರ ಆತ್ಮಕ್ಕೆ ಪರಮಾತ್ಮನು ಚಿರಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.

300x250 AD

ಬದುಕು ಮುಗಿಸಿದ ದುಡುಕಿನ ನಿರ್ಧಾರ:
ಇವರು ಬೇರೆಯವರಿಗೆ ಬುದ್ದಿ ಹೇಳುವ ಜಾಗದಲ್ಲಿ ಇದ್ದವರು ಅನೇಕರಿಗೆ ಬದುಕಿನ ಮಾರ್ಗದರ್ಶನ ನೀಡಿದ್ದಾರೆ. ಅನೇಕ ಕಷ್ಟದ ಸಮಯದಲ್ಲಿ ಪಾರು ಕೂಡ ಮಾಡಿದ್ದಾರೆ. ಅನೇಕ ರೀತಿಯ ನೆರವು ಕೂಡ ಪಡೆದವರಿದ್ದಾರೆ. ಸಾಯುವ ಯೋಚನೆ ಇವರ ಹತ್ತಿರವು ಸುಳಿಯುವ ಸಾಧ್ಯತೆ ಇರಲಿಲ್ಲ.

ಇವರಿಗೆ ಅಂತಹ ನಿರ್ಧಾರ ಯಾಕೆ ಬಂತು ಅನ್ನುವುದೇ ಯಕ್ಷ ಪ್ರಶ್ನೆಯಾಗಿ ಕಾಡುತ್ತಿದೆ. ವಿದ್ಯಾವಂತ ಹೆಂಡತಿ, ಮುದ್ದಾದ ಮಗಳು ಇವರನ್ನು ಪ್ರೀತಿಸುವ ಕುಟುಂಬ ಇಷ್ಟೆಲ್ಲ ಬಿಟ್ಟು ನೇಣಿಗೆ ಕೊರಳು ಒಟ್ಟಿದ್ದು ಯಾಕೆ ಎನ್ನುವುದೇ ತಿಳಿಯದಾಗಿದೆ. ವ್ಯವಹಾರಿಕ ವಯಕ್ತಿಕ ಕಾರಣ ಅನ್ನುವ ವರ್ತಮಾನ ಸಿಗುತ್ತಿದ್ದರು ಕೂಡ ಅದು ಅಂತಹ ದೊಡ್ಡ ಸಮಸ್ಯೆ ಆಗಿರಲಿಲ್ಲ. ಮನಸ್ಸು ಬಿಚ್ಚಿ ಹೇಳಿಕೊಂಡಿದ್ದರೆ ಅವರ ಆಪ್ತರ ಬಳಗ ಅವರ ಕೈ ಬಿಡುತ್ತಿರಲಿಲ್ಲ.. ಏನು ಹೇಳದೆ ಮನಸ್ಸಲ್ಲೇ ಇಟ್ಟುಕೊಂಡು, ಏಕಾಂಕಿಯಾಗಿ ಸಮಸ್ಯೆ ಎದುರಿಸಲು ಹೋಗಿ ಗುರಿ ತಲುಪಲು ಆಗದೆ ಇಂತಹ ನಿರ್ಧಾರ ಮಾಡಿ ಬಿಟ್ಟರೆ..? ಅಥವಾ ಎಲ್ಲಿಯೋ ಒಂದು ಕಡೆ ನಿರೀಕ್ಷೆ ಇಟ್ಟುಕೊಂಡು ಸಹಕಾರ ಸಿಗದೇ ಅಸಹಾಯಕರಾಗಿ ನೇಣಿಗೆ ಕೊರಳು ಒಡ್ಡಿ ಬಿಟ್ಟರೆ. ಹಿರಿಯರು ಹೇಳಿದಂತೆ ನಮಗೆ ನಾವೇ ಗೋಡೆಗೆ ಮಣ್ಣೆ ಅನ್ನುವಂತೆ, ನಾವು ದುಡಿದರೆ ಮಾತ್ರ ನಮಗೆ ಅನ್ನುವುದು ಉಳಿದವರಿಗು ಸಾಬೀತು ಮಾಡುವಂತಿದೆ. ಇವರ ಸಾವಿನ ದುಡುಕಿನ ನಿರ್ಧಾರ.

ಅಂತಿಮ ದರ್ಶನಕ್ಕೆ ಬರದ ಪ್ರಮುಖ ರಾಜಕೀಯ ಮುಖಂಡರು :

ಕಳೆದ 20ವರ್ಷದಿಂದ ಪತ್ರಿಕೆ ಹಾಗೂ ದೃಶ್ಯ ಮಾಧ್ಯಮದಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಪತ್ರಕರ್ತ ಸಂಕಷ್ಟದ ಸಮಯದಲ್ಲಿ ಯಾರೆಲ್ಲ ನಿಲ್ಲುತ್ತಾರೆ ಎಂದು ನೋಡಿದಾಗ ವೆಂಕಟೇಶ ಮೇಸ್ತ ಸಾವಿನ ಸಮಯದಲ್ಲಿ ಗೋಚರಿಸಿತು. ಸಂಬಧಿಕರು ಕುಟುಂಬದವರ ಜೊತೆ ಪತ್ರಿಕಾ ರಂಗದವರು ವೈದ್ಯರು, ವಿವಿಧ ಸಂಘಟನೆಯವರು ಬಿಟ್ಟರೆ ಬೆರೆಳೆಣಿಕೆಯಷ್ಟು ಜನಪ್ರತಿನಿಧಿಗಳು ಇದ್ದರು. ವರ್ಷವಿಡೀ ತಾಲೂಕಿನ ವಿವಿಧಡೆ ಜನಪ್ರತಿನಿಧಿಗಳ ಕಾರ್ಯಕ್ರಮಕ್ಕೆ ಭಾಗವಹಿಸುವವರು ಪತ್ರಕರ್ತರು. ಆದರೆ ಅವರಿಂದ ಆಕಸ್ಮಿಕ ದುರಂತ ಸಂಭವಿಸಿ ಪತ್ರಕರ್ತ ಅಥವಾ ಅವರ ಕುಟುಂಬ ಸಂಕಷ್ಟದಲ್ಲಿದ್ದಾಗ ಜೊತೆಗಿದ್ದೇವೆ ಎಂದು ಧೈರ್ಯ ತುಂಬುವ ಕಾರ್ಯವಾಗಲಿಲ್ಲ. ಮೃತದೇಹದ ಅಂತಿಮ ದರ್ಶನ ಪಡೆಯಲು ಹಾಲಿ ಮಾಜಿ ಜನಪ್ರತಿನಿಧಿಗಳು ಆಗಮಿಸದೆ ಇರುವುದು ಬೇಸರ ಮೂಡಿಸಿದೆ. ಪತ್ರಕರ್ತರು ಅಥವಾ ಅವರ ಕುಟುಂಬದವರಿಗೆ ಅನಾರೋಗ್ಯವಾದರೆ ಸಲಹೆ ಕೇಳಲು ಕರೆ ಮಾಡಿದರು ಸ್ಪಂದನೆ ನೀಡದಷ್ಟು ಕಾರ್ಯದ ಒತ್ತಡದಲ್ಲಿರುವುದು ನಂಬಿದವರಿಗೆ ದಾರಿ ತೋಚದಂತಾಗುತ್ತಿದೆ. ಕನಿಷ್ಟ ಪಕ್ಷ ಅವರ ಮನೆಗಾದರೂ ತೆರಳಿ ಸಾಂತ್ವನ ಹೇಳುವ ಕಾರ್ಯವಾದರೂ ನಡೆಯಲಿ ಎಂಬ ಆಶಯ ವ್ಯಕ್ತವಾಗಿದೆ‌.

Share This
300x250 AD
300x250 AD
300x250 AD
Back to top