Slide
Slide
Slide
previous arrow
next arrow

ಗ್ಯಾಸ್ ಏಜೆನ್ಸಿಯಲ್ಲಿ ಕಳ್ಳರ ಕೈಚಳಕ: ಲಕ್ಷಾಂತರ ರೂ.ನಗದು ದೋಚಿ ಪರಾರಿ

300x250 AD

ಭಟ್ಕಳ:ರಾಷ್ಟ್ರೀಯ ಹೆದ್ದಾರಿ 66ರ ಮಣ್ಕುಳಿ ಪುಷ್ಪಾಂಜಲಿ ಕ್ರಾಸ್ ಸಮೀಪದ ಶ್ರೀಮೂಕಾಂಬಿಕಾ ಭಾರತ್ ಗ್ಯಾಸ್ ಏಜೆನ್ಸಿಗೆ ನುಗ್ಗಿದ ಮೂವರು ಮುಸುಕುಧಾರಿ ಕಳ್ಳರು ಬಾಗಿಲು ಒಡೆದು 5 ಲಕ್ಷಕ್ಕೂ ಅಧಿಕ ನಗದು ದೋಚಿ ಪರಾರಿಯಾಗಿದ್ದು ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ದಿನಕರ ವಿಠಲ್ ಕಿಣಿ ಮಾಲೀಕತ್ವದ ಗ್ಯಾಸ್ ಏಜೆನ್ಸಿ ಇದಾಗಿದ್ದು, ಕಳೆದ ತಿಂಗಳು ಇದೆ ಭಾಗದಲ್ಲಿ ಗ್ಯಾರೇಜ್ ಒಂದರಲ್ಲಿ ಕಳ್ಳತನ ಘಟನೆಯಾದ ಬಳಿಕ ಏಜೆನ್ಸಿ ಮಾಲೀಕರು ತಮ್ಮ ದಿನ ನಿತ್ಯದ ವ್ಯವಹಾರದ ಹಣವನ್ನು ಮನೆಗೆ ತೆಗೆದುಕೊಂಡು ಹೋಗುತ್ತಿದ್ದರು ಆದರೆ ಮಂಗಳವಾರ ಅತಿಯಾದ ಕೆಲಸದ ಒತ್ತಡದಿಂದ ಹಣವನ್ನು ತಮ್ಮ ಗ್ಯಾಸ್ ಏಜೆನ್ಸಿ ಅಂಗಡಿಯಲ್ಲೇ ಇಟ್ಟು ಬಾಗಿಲು ಹಾಕಿ ತೆರಳಿದ್ದರು.

ಮಾಲೀಕರ ದುರಾದೃಷ್ಟವೆಂಬಂತೆ ಬುಧವಾರ ಬೆಳಗಿನ ಜಾವದ ವೇಳೆಯಲ್ಲಿ ಮೂವರು ಕಳ್ಳರು ಮುಸುಕು ಹಾಗೂ ಕೈಗೆ ಗ್ಲೌಜ್ ಧರಿಸಿ ಗ್ಯಾಸ್ ಏಜೆನ್ಸಿಯ ಬೀಗ ಮುರಿದು ಒಳ ನುಗ್ಗಿದ್ದಾರೆ. ಅದರಲ್ಲಿ ಓರ್ವ ಹೊರಗಡೆ ನಿಂತು ಕಾಯುತ್ತಿದ್ದರೆ, ಇನ್ನಿಬ್ಬರು ಒಳಗೆ ನುಗ್ಗಿ ನೇರವಾಗಿ ಏಜೆನ್ಸಿ ಮಾಲೀಕನ ಚೇಂಬರ್ ಬಾಗಿಲು ಮುರಿಯಲು ಪ್ರಯತ್ನಿಸಿದ್ದಾರೆ. ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗದೆ ಇರುವುದರಿಂದ ಕೊನೆಗೆ ಬಾಗಿಲಿಗೆ ಅಳವಡಿಸಿದ ಗ್ಲಾಸ್ ಒಡೆದು ಚೇಂಬರನಲ್ಲಿದ್ದ ಸುಮಾರು 5,11,742 ನಗದು ದೋಚಿ ಪರಾರಿಯಾಗಿದ್ದಾರೆ. ಮುಂಜಾನೆ ಗ್ಯಾಸ್ ಏಜೆನ್ಸಿಗೆ ಬಂದ ಮಾಲೀಕರಿಗೆ ಕಳ್ಳತನವಾಗಿರುವ ಬಗ್ಗೆ ತಿಳಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ನಗರ ಠಾಣೆ ಪಿ.ಎಸ್.ಐ ಯಲ್ಲಪ್ಪ ಪರಿಶೀಲನೆ ನಡೆಸಿದ್ದಾರೆ.

300x250 AD

ಬಳಿಕ ಸ್ಥಳಕ್ಕೆ ಕಾರವಾರದಿಂದ ಬೆರಳಚ್ಚು ತಜ್ಞ ದಂಡ ಹಾಗೂ ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳವು ಏಜೆನ್ಸಿಯಿಂದ ಮಣ್ಕುಳಿ ಸರ್ಕಲ್ ಮಾರ್ಗವಾಗಿ ನೇರ ಮೂಢಭಟ್ಕಳ ತನಕ ತೆರಳಿ ಪುನಃ ಗ್ಯಾಸ್ ಏಜೆನ್ಸಿಗೆ ಮರಳಿತು. ಈ ಕುರಿತು ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Share This
300x250 AD
300x250 AD
300x250 AD
Back to top