Slide
Slide
Slide
previous arrow
next arrow

ಅತಿಕ್ರಮಣ‌ ಜಾಗ ಸಕ್ರಮಗೊಳಿಸುವಂತೆ ಪೌರಾಯುಕ್ತರಿಗೆ ಮನವಿ

300x250 AD

ದಾಂಡೇಲಿ: ನಗರಸಭೆಯ ವ್ಯಾಪ್ತಿಯಲ್ಲಿ ಬರುವ ಪ್ರದೇಶದಲ್ಲಿ ಅತಿಕ್ರಮಣ ಮಾಡಿ ಮನೆ ನಿರ್ಮಿಸಿಕೊಂಡ ಜಾಗವನ್ನು ಸಕ್ರಮಗೊಳಿಸುವಂತೆ ಭೀಮ್ ಆರ್ಮಿ ಸಂಘಟನೆಯ ವತಿಯಿಂದ ನಗರ ಸಭೆಯಲ್ಲಿ ಪೌರಾಯುಕ್ತರಾದ ಆರ್.ಎಸ್.ಪವಾರ್ ಅವರಿಗೆ ಲಿಖಿತ‌ ಮನವಿ ನೀಡಲಾಯಿತು.

ಪೌರಾಯುಕ್ತರಿಗೆ ನೀಡಿದ ಮನವಿಯಲ್ಲಿ ಕಳೆದ 50-60 ವರ್ಷಗಳಿಂದ ಅತಿಕ್ರಮಿಸಿ ಮನೆ ನಿರ್ಮಿಸಿಕೊಂಡು, ಮನೆ ತೆರಿಗೆ, ನೀರಿನ ಕರ, ವಿದ್ಯುತ್ ಕರವನ್ನು ಪಾವತಿ ಮಾಡುತ್ತಾ ಬಂದಿರುವ ನಗರದ ಅನೇಕ ಬಡ ಕುಟುಂಬಗಳು ಇಂದಿಗೂ ಕೂಡ ಆ ಕುಟುಂಬಗಳ ಮನೆಗಳು ಆಯಾಯ ಕುಟುಂಬದವರ ಹೆಸರಿಗೆ ಆಗದೆ ಸಂಕಷ್ಟಕ್ಕೆ ಒಳಗಾಗಿವೆ. ಅವರವರ ಹೆಸರಿಗೆ ಸಕ್ರಮಗೊಳಿಸುವ ಯಾವುದೇ ಕ್ರಮಕ್ಕೂ ಸರಕಾರವು ಈವರೆಗೆ ಮುಂದಾಗದಿರುವುದು ವಿಷಾದನೀಯ.

ಅಜ್ಜ ಅಜ್ಜಿಯ ಕಾಲದಿಂದಲೂ ವಾಸ ಮಾಡುತ್ತಿರುವ ವಾಸದ ಮನೆಯ ಭೂಮಿಯ ಹಕ್ಕು ಮೂರನೇ ತಲೆಮಾರಿಗೆ ಬಂದರೂ ಕೂಡ ಈವರೆಗೆ ಭೂಮಿಯ ಹಕ್ಕು ಸಿಗದೇ ಇರುವುದರಿಂದ ಸರಕಾರದಿಂದ ಈ ಬಗ್ಗೆ ಅಗತ್ಯ ಕ್ರಮ ಕೈಗೊಂಡಲ್ಲಿ ಬಡ ಜನರಿಗೆ ಸಾಮಾಜಿಕ ನ್ಯಾಯವನ್ನು ದೊರಕಿಸಿಕೊಟ್ಟಂತಾಗುತ್ತದೆ.

ಸರಕಾರ ಈಗಾಗಲೇ ಕರ್ನಾಟಕ ಭೂ ಕಂದಾಯ ಕಾಯ್ದೆಯ ಸೆಕ್ಷನ್ 94 ಸಿ ಹಾಗೂ 94 ಸಿಸಿ ತಿದ್ದುಪಡಿ ಮಾಡಿ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಕಂದಾಯ ಭೂಮಿಯ ಮೇಲೆ ಅತಿಕ್ರಮಿಸಿ ನಿರ್ಮಿಸಿಕೊಂಡ ಮನೆಗಳನ್ನು ಸಕ್ರಮಗೊಳಿಸಿರುವುದರಿಂದ ಸರಕಾರದ ಬೊಕ್ಕಸಕ್ಕೆ ಸಾಕಷ್ಟು ಆದಾಯ ಬಂದಿದೆ. ಇದೇ ಮಾದರಿಯಲ್ಲಿ ನಗರಸಭೆ/ಪುರಸಭೆ ಕಾಯ್ದೆಗೆ ತಿದ್ದುಪಡಿ ಮಾಡಿ ನಗರ ಸ್ಥಳೀಯ ಸಂಸ್ಥೆಗಳ ಅಧೀನದ ಅತಿಕ್ರಮಿತ ಜಾಗದಲ್ಲಿ ಮನೆ ನಿರ್ಮಿಸಿಕೊಂಡಿರುವ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಹಾಗೂ ಬಿಪಿಎಲ್ ಕುಟುಂಬದವರು ಮತ್ತು ಸಮಾಜದ ವಿವಿಧ ಆರ್ಥಿಕ ಮಟ್ಟವನ್ನು ಗಣನೆಗೆ ತೆಗೆದುಕೊಂಡು ಸದರಿ ಭೂಮಿಗೆ ದರವನ್ನು ನಿಗದಿಪಡಿಸಿ ಖಂಡಿತ ಕ್ರಯಕ್ಕೆ ಕೊಟ್ಟು ಸಕ್ರಮಗೊಳಿಸಿದ್ದಲ್ಲಿ ಸರಕಾರಕ್ಕೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಗೆ ಸಾವಿರಾರು ಕೋಟಿ ಆದಾಯ ಬರುತ್ತದೆ.

300x250 AD

ಈ ನಿಟ್ಟಿನಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ದುರ್ಬಲ ವರ್ಗದ ಜನರು ಅತಿಕ್ರಮಿಸಿ ಮನೆ ನಿರ್ಮಿಸಿಕೊಂಡ ಜಾಗವನ್ನು ಅವರವರ ಹೆಸರಿಗೆ ಸಕ್ರಮಗೊಳಿಸಲು ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ಮನವಿಯಲ್ಲಿ ವಿನಂತಿಸಲಾಗಿದೆ.

ಈ ಸಂದರ್ಭದಲ್ಲಿ ಭೀಮ್ ಆರ್ಮಿ ಸಂಘಟನೆಯ ತಾಲೂಕು ಅಧ್ಯಕ್ಷರಾದ ಸತೀಶ್.ಬಿ.ನಾಯ್ಕ, ಪದಾಧಿಕಾರಿಗಳಾದ ದುರ್ಗಾನಂದ ನೇತ್ರೇಕರ್, ಅಶೋಕ್ ಕುಮಾರ್ ಲಮಾಣಿ, ನೀಲಾ ಮಾದರ್, ವಿಜಯ್ ಚೌವ್ಹಾಣ್, ಪೊಮಣ್ಣ ಸವದತ್ತಿ, ಪ್ರಮುಖರಾದ ಶ್ಯಾಮ್ ಬೆಂಗಳೂರು, ಮುಜಿಬಾ ಚಬ್ಬಿ, ಕರ್ಣಮ್ಮಾ ತೋಡೇಟ್ಟಿ ವೀಣಾ ಗಜಾಕೋಶ, ಸಂಗೀತಾ ಅಮ್ರೇ, ಮಂಜುಳಾ ಕಾಂಬಳೆ, ಮಂಜುಳಾ ಆಲೂರ, ರಮೇಶ ಚಂದಾವರ, ರಾಜಶೇಖರ್ ನಿಂಬಾಳಕರ, ಉಮೇಶ್ ಮೇಲಗಿರಿ, ರೋಹಿತ್ ತಳವಾರ, ಪರಶುರಾಮ ಸೂರನಾಯ್ಕ, ಪ್ರಮೋದ ರೇವಣಕರ ಮೊದಲಾದವರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top