ಸಿದ್ದಾಪುರ: 2024ನೇ ಸಾಲಿನ ಸಿದ್ದಾಪುರ ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ನೀಡುವ ಸಾವಿತ್ರಿಬಾಯಿ ಫುಲೆ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ತಾಲೂಕಿನ ಹದಿನೆಂಟು ಶಿಕ್ಷಕಿಯರು ಆಯ್ಕೆಯಾಗಿದ್ದಾರೆ.
• ಶ್ರೀಮತಿ ಲಕ್ಷ್ಮಿ ನಾಯ್ಕ, ಸ.ಹಿ.ಪ್ರಾ. ಶಾಲೆ ನಿಲ್ಕುಂದ.
• ಶ್ರೀಮತಿ ಮಮತಾ ಹೆಗಡೆ, ಸ.ಹಿ.ಪ್ರಾ. ಶಾಲೆ ಹೆಗ್ಗರಣಿ.
• ಶ್ರೀಮತಿ ಸೆಲಿನಾ ಡಯಾಸ್, ಸ.ಹಿ.ಪ್ರಾ. ಉರ್ದು ಶಾಲೆ ಹೇರೂರು.
• ಶ್ರೀಮತಿ ಮಾಲಿನಿ ಹೆಗಡೆ, ಸ.ಹಿ.ಪ್ರಾ. ಶಾಲೆ ಹೊಸಗದ್ದೆ.
• ಶ್ರೀಮತಿ ವನಿತಾ ಹೆಗಡೆ, ಸ.ಹಿ.ಪ್ರಾ. ಶಾಲೆ ಕೋಡ್ಸಿಂಗೆ.
• ಶ್ರೀಮತಿ ನಾಗರತ್ನ ಭಂಡಾರಿ, ಸ.ಹಿ.ಪ್ರಾ. ಶಾಲೆ ನಿಡಗೋಡ.
• ಶ್ರೀಮತಿ ವಿಜಯಾ ನಾಯ್ಕ, ಸ.ಹಿ.ಪ್ರಾ. ಶಾಲೆ ಹಾರ್ಸಿಕಟ್ಟಾ.
• ಶ್ರೀಮತಿ ಸವಿತಾ ಹೆಗಡೆ, ಸ.ಹಿ.ಪ್ರಾ. ಶಾಲೆ ಕೋಲಸಿರ್ಸಿ.
• ಶ್ರೀಮತಿ ಗೀತಾ ಶೇಟ, ಸ.ಕಿ.ಪ್ರಾ. ಶಾಲೆ ಕನ್ನಳ್ಳಿ.
• ಶ್ರೀಮತಿ ರಜನಿ ನಾಯ್ಕ, ಸ.ಕಿ.ಪ್ರಾ. ಶಾಲೆ ಬಳ್ಳಟ್ಟೆ.
• ಶ್ರೀಮತಿ ವೀಣಾ ಹೆದ್ದಾರಿಮನೆ, ಸ.ಹಿ.ಪ್ರಾ. ಶಾಲೆ ಶಿರಳಗಿ.
• ಶ್ರೀಮತಿ ಸಾವಿತ್ರಿ ಗೌಡ, ಸ.ಕಿ.ಪ್ರಾ. ಉರ್ದು ಶಾಲೆ ಇಟಗಿ.
• ಶ್ರೀಮತಿ ಸುಮಿತ್ರಾ ನಾಯ್ಕ, ಸ.ಹಿ.ಪ್ರಾ. ಶಾಲೆ ಬಿಳಗಿ.
• ಶ್ರೀಮತಿ ಮಹಾದೇವಿ ಹಳದಿಪುರ, ಸ.ಹಿ.ಪ್ರಾ. ಶಾಲೆ ಬಳೂರು.
• ಶ್ರೀಮತಿ ನರ್ಮದಾ ಶೇಟ, ಸ.ಕಿ.ಪ್ರಾ.ಶಾಲೆ ಮಾಸ್ತಿಹಕ್ಲು.
• ಶ್ರೀಮತಿ ಕಮಲಾ ನಾಯ್ಕ, ಸ.ಹಿ.ಪ್ರಾ. ಶಾಲೆ ಹಸುವಂತೆ.
• ಶ್ರೀಮತಿ ಸ್ಮಿತಾ ಪಾತರಪೇಕರ್, ಸ.ಹಿ.ಪ್ರಾ. ಶಾಲೆ ಅರೆಂದೂರು.
• ಶ್ರೀಮತಿ ಭವಾನಿ ಹೊಸೂರು, ಸ.ಹಿ.ಪ್ರಾ. ಶಾಲೆ ಹುಸೂರು.
ಜ. 4, ಗುರುವಾರದಂದು ಸರ್ಕಾರಿ ನೌಕರರ ಭವನ ಸಿದ್ದಾಪುರದಲ್ಲಿ ನಡೆಯುವ ಸಾವಿತ್ರಿಬಾಯಿ ಫುಲೆ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕರಾದ ಪಿ. ಬಸವರಾಜ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಆಯ್.ನಾಯ್ಕ ಅಧ್ಯಕ್ಷತೆ ವಹಿಸಲಿದ್ದು,ಇತರ ಆಧಿಕಾರಿಗಳು ಹಾಗೂ ಸಂಘದ ಪದಾಧಿಕಾರಿಗಳು ಮುಖ್ಯ ಅತಿಥಿಗಳಾಗಿ ಬರಲಿದ್ದಾರೆ. ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕಿಯರಿಗೆ ಸಿದ್ದಾಪುರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಅಭಿನಂದನೆ ತಿಳಿಸಿದೆ.