ಸಿದ್ದಾಪುರ: ಎಪ್ಪತ್ತೇಳು ವರ್ಷಗಳಿಂದ ಸಹಕಾರಿ ತತ್ವದಡಿಯಲ್ಲಿ ಕೃಷಿಕರಿಗೆ, ಸದಸ್ಯರಿಗೆ ವಿವಿಧ ರೀತಿಯಲ್ಲಿ ನೆರವಾಗುತ್ತಿರುವ ಸಿದ್ದಾಪುರ ತಾಲೂಕಾ ವ್ಯವಸಾಯ ಹುಟ್ಟುವಳಿಗಳ ಸಹಕಾರಿ ಮಾರಾಟ ಸಂಘ (ಟಿಎಮ್‌ಎಸ್ ಸಿದ್ದಾಪುರ)ದ ಕಾನಸೂರು ಶಾಖಾ ಕಚೇರಿಯ ನವೀಕರಣಗೊಂಡ ಗೋದಾಮು ಹಾಗೂ ವ್ಯಾಪಾರಂಗಣದ ಉದ್ಘಾಟನೆ ಮತ್ತು ಸಹಕಾರಿಗಳ ಸನ್ಮಾನ ಕಾರ್ಯಕ್ರಮ ಜ.7ರಂದು ಮಧ್ಯಾಹ್ನ 3ಕ್ಕೆ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ ಹೇಳಿದರು.
ಪಟ್ಟಣದ ಟಿಎಂಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು ಕಾನಸೂರು ಶಾಖೆಯಲ್ಲಿ ಪ್ರತಿ ವರ್ಷ 12ಸಾವಿರಕ್ಕೂ ಹೆಚ್ಚು ಕ್ವಿಂಟಲ್ ಅಡಕೆ ವಿಕ್ರಿ ಆಗುತ್ತಿದೆ. ಆಧುನಿಕ ಯಂತ್ರಗಳನ್ನೊಳಗೊಂಡ ಅಕ್ಕಿ ಗಿರಣಿ ಇದೆ. ಇಲ್ಲಿ ವ್ಯವಸ್ಥಿತವಾದ ವ್ಯಾಪಾರಾಂಗಣ ಹಾಗೂ ಗೋದಾಮು ಅವಶ್ಯ ಇರುವುದರಿಂದ ಗೋದಾಮನ್ನು ಎಪಿಎಂಸಿಯವರು ನಿರ್ಮಿಸಿಕೊಟ್ಟಿದ್ದಾರೆ. ವ್ಯಾಪಾರಾಂಗಣವನ್ನು ಸುಮಾರು 28.50ಲಕ್ಷ ರೂಗಳಲ್ಲಿ ಸಂಘ ನವೀಕರಣಗೊಳಿಸಿದೆ. ಮುಂದಿನ 20ವರ್ಷಗಳಿಗೆ ಯಾವುದೇ ತೊಂದರೆ ಆಗದಂತೆ ಮುಂದಾಲೋಚನೆ ಇಟ್ಟುಕೊಂಡು ನವೀಕರಣಗೊಳಿಸಲಾಗಿದೆ. ಸಹಕಾರ ಸಚಿವ ಕೆ.ಎನ್.ರಾಜಣ್ಣ, ಕಾನೂನು ಹಾಗೂ ಸಂಸದೀಯ ಸಚಿವ ಎಚ್.ಕೆ.ಪಾಟೀಲ್, ಉಸ್ತುವಾರಿ ಸಚಿವ ಮಂಕಾಳ ಎಸ್.ವೈದ್ಯ, ಶಿಕ್ಷಣ ಸಚಿವ ಮಧು ಬಂಗಾರಪ್ಪ, ಶಾಸಕ ಆರ್.ವಿ.ದೇಶಪಾಂಡೆ ಕಟ್ಟಡ ಉದ್ಘಾಟಿಸುವರು. ಶಾಸಕ ಭೀಮಣ್ಣ ನಾಯ್ಕ ಅಧ್ಯಕ್ಷತೆವಹಿಸುವರು. ಸಂಸದ ಅನಂತಕುಮಾರ ಹೆಗಡೆ, ಶಾಸಕ ಶಿವರಾಮ ಹೆಬ್ಬಾರ, ಮಾಜಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ,ಶಾಸಕ ಡಿ.ಜಿ.ಶಾಂತನಗೌಡ್ರು, ಡಾ.ಎಂ.ಎನ್. ರಾಜೇಂದ್ರಕುಮಾರ್,ಶಿವಕುಮಾರ ಎಸ್.ಪಾಟೀಲ್, ಎಚ್.ಎಸ್.ಮಂಜಪ್ಪ, ಡಾ.ಕೆ.ರಾಜೇಂದ್ರ, ವಿ.ಎನ್.ಭಟ್ಟ ಅಳ್ಳಂಕಿ, ರಾಘವೇಂದ್ರ ಶಾಸ್ತ್ರೀ ಉಪಸ್ಥಿತರಿರುತ್ತಾರೆ.
ಪ್ರಸಕ್ತ ಸಾಲಿನ ಸಹಕಾರ ರತ್ನಪ್ರಶಸ್ತಿ ಪುರಸ್ಕೃತರಾದ ಎನ್.ಪಿ..ಗಾಂವಕರ, ವಿನೋದ ನಾಯಕ ಅಂಕೋಲಾ, ತಾಲೂಕಿನ 23 ಪ್ರಾಥಮಿಕ ಸಹಕಾರಿ ಸಂಘದ ಹಾಗೂ ಶಿರಸಿ ತಾಲೂಕಿನ ಅಜ್ಜಿಬಳ ಮತ್ತು ಸೊರಬ ತಾಲೂಕಿನ ಹರೀಶಿ ಪ್ರಾಥಮಿಕ ಸಹಕಾರ ಸಂಘದ ಅಧ್ಯಕ್ಷರನ್ನು ಸನ್ಮಾನಿಸಲಾಗುತ್ತದೆ. ನಂತರ ಕೃಷ್ಣಯಾಜಿ ಬಳ್ಕೂರು ತಂಡದವರಿಂದ ಕನಕಾಂಗಿ ಕಲ್ಯಾಣ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದು ಹೇಳಿದರು. ಉಪಾಧ್ಯಕ್ಷ ಎಂ.ಜಿ.ನಾಯ್ಕ ಹಾದ್ರಿಮನೆ, ನಿರ್ದೇಶಕರಾದ ಜಿ.ಆರ್.ಹೆಗಡೆ ಹಳದೋಟ, ಸಿ.ಎನ್.ಹೆಗಡೆ ತಂಗಾರಮನೆ, ಸುಬ್ರಾಯ ಹೆಗಡೆ ಸಾಯಿಮನೆ, ಸುಬ್ರಹ್ಮಣ್ಯ ಭಟ್ಟ ಚಟ್ನಳ್ಳಿ, ಲಕ್ಷ್ಮಿನಾರಾಯಣ ಹೆಗಡೆ ಬಾಳೇಕುಳಿ, ಕೆ.ಕೆ.ನಾಯ್ಕ ಸುಂಕತ್ತಿ, ಜಿ.ಜಿ.ಹೆಗಡೆ ಬಾಳಗೋಡ ಹಾಗೂ ವ್ಯವಸ್ಥಾಪಕ ಸತೀಶ ಎಸ್.ಹೆಗಡೆ ಹೆಗ್ಗಾರಕೈ ಉಪಸ್ಥಿತರಿದ್ದರು.