ಕುಮಟಾ: ಪಟ್ಟಣದ ಹೊಸ ಬಸ್ ನಿಲ್ದಾಣ ಹಿಂದಿರುವ ಹೊಟೇಲ್ ತ್ಯಾಜ್ಯ ಬಿಡುವ ಇಂಗು ಗುಂಡಿಯಲ್ಲಿ ಬಿದ್ದು ಯುವಕನೊರ್ವ ಮೃತಪಟ್ಟ ಘಟನೆ ನಡೆದಿದೆ.
ಚಿದಾನಂದ ತಿಮ್ಮಪ್ಪ ಪಟಗಾರ (30)ಮೃತಪಟ್ಟ ಯುವಕನಾಗಿದ್ದು, ಮೃತ ವ್ಯಕ್ತಿ ಕಳೆದ ನಾಲ್ಕು ದಿನಗಳಿಂದ ಮನೆಯಿಂದ ನಾಪತ್ತೆಯಾಗಿದ್ದ. ಸೋಮವಾರ ಹೊಟೇಲ್ ತ್ಯಾಜ್ಯದ ಇಂಗು ಗುಂಡಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಈ ಘಟನೆಯಿಂದ ಇಂಗುಗುಂಡಿಯನ್ನು ಏಕೆ ಮುಚ್ಚಿಲ್ಲ ಎನ್ನುವ ಪ್ರಶ್ನೆ ಜನರನ್ನು ಕಾಡುವಂತಾಗಿದ್ದು, ಇಂತಹ ಅವಘಡಗಳು ಇನ್ನೂ ನಡೆಯದಂತೆ ಕ್ರಮ ಕೈಗೊಳ್ಳಲು ಆಗ್ರಹ ಕೇಳಿಬಂದಿದೆ.