Slide
Slide
Slide
previous arrow
next arrow

ಚೇತನಾ ವಿಜ್ಞಾನ ಪಿಯು ಕಾಲೇಜ್ ವಾರ್ಷಿಕ ಸ್ನೇಹ ಸಮ್ಮೇಳನ ಯಶಸ್ವಿ

300x250 AD

ಸಿದ್ದಾಪುರ: ತಾಲೂಕಿನ ಚೇತನಾ ಪದವಿಪೂರ್ವ ಕಾಲೇಜಿನಲ್ಲಿ 2023-24 ನೆ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನವು ಅದ್ಧೂರಿಯಾಗಿ ತೆರೆ ಕಂಡಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಶಿಕ್ಷಣ ಪ್ರಸಾರಕ ಸಮಿತಿಯ ಅಧ್ಯಕ್ಷರಾದ ಡಾ|| ಶಶಿಭೂಷಣ ಹೆಗಡೆ ಮಾತನಾಡಿ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಎದುರಿಸುವ ಕುರಿತು ಅಭಿಪ್ರೇರಣೆ ನೀಡಿದರು. ಕಾರ್ಯಕ್ರಮದ ಮುಖ್ಯ ಆಹ್ವಾನಿತರಾಗಿ ಆಗಮಿಸಿದ ಎಂ.ಜಿ.ಸಿ ಪದವಿ ಕಾಲೇಜಿನ ಪ್ರೊ. ಕಿರಣ್ ಕುಮಾರ್ ಸಭೆಯನ್ನು ಉದ್ದೇಶಿಸಿ ಮಾತನಾಡಿ ಜೀವನ ಎಂಬುದು ಸುಂದರ ಪಯಣ ಎನ್ನುವ ಮೂಲಕ ಅಂತಹ ಜೀವನವನ್ನು ರೂಪಿಸಿಕೊಳ್ಳಲು ಪ್ರೇರಣೆ ನೀಡಿದರು ಹಾಗೆ ಫಲಿತಾಂಶ ಅಷ್ಟೇ ಅಲ್ಲದೆ ಕೌಶಲ್ಯವು ಮುಖ್ಯ ಎಂದು ತಿಳಿಸಿದರು.

300x250 AD

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚೇತನಾ ವಿಜ್ಞಾನ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ರಾಮದಾಸ್ ಗಾಂವಕರ ಅವರು ವಹಿಸಿದ್ದರು. ಉಪನ್ಯಾಸಕರಾದ ಮಹಾಬಲೇಶ್ವರ ನಾಯ್ಕ್ ವರದಿ ವಾಚಿಸಿದರು. ವಿಘ್ನೇಶ್ವರ ಭಟ್ ಸ್ವಾಗತಿಸಿದರು. ಉಪನ್ಯಾಸಕರಾದ ಶಬನೂರ್ ಖಾನ್ ವಂದಿಸಿದರು.ಮೇಘನಾ ನಿರ್ವಹಣೆ ಮಾಡಿದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮವು ರಾಮಕೃಷ್ಣ ಸಭಾ ಮಂಟಪದಲ್ಲಿ ಯಶಸ್ವಿಯಾಗಿ ಜರುಗಿತು.

Share This
300x250 AD
300x250 AD
300x250 AD
Back to top