Slide
Slide
Slide
previous arrow
next arrow

ಕಾನಗೋಡು ಸೊಸೈಟಿ ಚುನಾವಣೆ; ಹಳೇ ಮಂಡಳಿಗೆ ಬಹುಮತ; ಜಲಜಾಕ್ಷಿ ಹೆಗಡೆಗೆ ಗೆಲುವು

300x250 AD

ಶಿರಸಿ: ತಾಲೂಕಿನ ಯಡಹಳ್ಳಿಯಲ್ಲಿರುವ ಕಾನಗೋಡ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಹಳೆ ಆಡಳಿತ ಮಂಡಳಿಗೇ ಸದಸ್ಯರು‌ ಬಹುಮತ ಚಲಾಯಿಸಿದ್ದಾರೆ.

834 ಮತಗಳಲ್ಲಿ 721 ಮತಗಳು ಚಲಾವಣೆಗೊಂಡಿದ್ದು, ಗಣಪತಿ ಹೆಗಡೆ ಬೆಳ್ಳೇಕೇರಿ, ಅನಂತ ಭಟ್ಟ ಕರಸುಳ್ಳಿ, ಜಿ.ಎಸ್.ಹೆಗಡೆ ಕಾನಗೋಡ, ಎಂ.ಸಿ.ಹೆಗಡೆ‌ ಕಬ್ನಳ್ಳಿ, ಆರ್.ಕೆ.ಭಟ್ಟ ಬೆಟ್ಟಕೊಪ್ಪ, ಶ್ರೀಪತಿ ಭಟ್ಟ ಬೂದಿಮುರ್ಡು ಸಾಮಾನ್ಯ ವಿಭಾಗದಲ್ಲಿ ಆಯ್ಕೆ ಆಗಿದ್ದಾರೆ.
ಮಹಿಳಾ ವಿಭಾಗದಲ್ಲಿ ವಿಜಯಶ್ರೀ ಹೆಗಡೆ ಸಣ್ಣಕೇರಿ ಹಾಗೂ ನೂತನವಾಗಿ ಜಲಜಾಕ್ಷಿ ಹೆಗಡೆ ಆಲ್ಮನೆ ಆಯ್ಕೆ ಆಗಿದ್ದಾರೆ. ಹಿಂದುಳಿದ ವರ್ಗ ‘ಅ’ದಲ್ಲಿ ಎಂ.ಟಿ.ಮಡಿವಾಳ ಆಯ್ಕೆ ಆದರೆ, ರಂಗನಾಥ ಮಡಗಾಂವಕರ್ ಅವಿರೋಧವಾಗಿ ಪರಿಶಿಷ್ಟ ಜಾತಿ‌ ಮೀಸಲು ಕ್ಷೇತ್ರದಿಂದ‌ ಆಯ್ಕೆಯಾಗಿದ್ದಾರೆ.

300x250 AD
Share This
300x250 AD
300x250 AD
300x250 AD
Back to top