Slide
Slide
Slide
previous arrow
next arrow

ಅಂಬಿಕಾನಗರದಲ್ಲಿ ಅಪರಾಧ ತಡೆ ಜಾಗೃತಿ ಕಾರ್ಯಕ್ರಮ

300x250 AD

ದಾಂಡೇಲಿ: ತಾಲೂಕಿನ ಅಂಬಿಕಾನಗರದ ಕೆಪಿಸಿಯ ನಾಗಝರಿಯಲ್ಲಿ ಪೊಲೀಸ್ ಇಲಾಖೆಯ ಆಶ್ರಯದಡಿ ಕೆಪಿಸಿ ನಿಗಮದ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಹಾಗೂ ಕಾರ್ಮಿಕ ವರ್ಗದವರಿಗೆ ಅಪರಾಧ ತಡೆ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅಂಬಿಕಾನಗರ ಠಾಣೆಯ ಪಿಎಸ್ಐ ಹುಸೇನಸಾಬ್.ಕೆ.ಚೆಪ್ಪರಕರ್ ಸಮಾಜದಲ್ಲಿ ಅಪರಾಧ ಚಟುವಟಿಕೆ ತಡೆಯಲು ಸಾರ್ವಜನಿಕರು ಪೊಲೀಸ್ ಇಲಾಖೆಗೆ ಸಹಕಾರ ನೀಡಿದ್ದಲ್ಲಿ ಅಪರಾಧ ಚಟುವಟಿಕೆಗಳ ನಿಯಂತ್ರಣ ಸುಲಭ ಸಾಧ್ಯ. ವಾಹನ ಚಲಾಯಿಸುವ ವೇಳೆ ರಸ್ತೆ ಸುರಕ್ಷತಾ ನಿಯಮವನ್ನು ಪಾಲಿಸದೆ ಇರುವುದು ನಿಮಗೆ ನೀವೇ ದ್ರೋಹ ಮಾಡಿದ ಹಾಗೆ. ರಸ್ತೆ ಸುರಕ್ಷತಾ‌ ನಿಯಮವನ್ನು ಯುವಜನತೆ ಪಾಲಿಸದೇ ಇರುವುದರಿಂದ ಹೆಚ್ಚಿನ ವಾಹನ ಅಪಘಾತಗಳಾಗಿ ಸಾವು ಸಂಭವಿಸುತ್ತದೆ. ಈ ನಿಟ್ಟಿನಲ್ಲಿ ವಾಹನ ಚಲಾಯಿಸವವರು ಜಾಗರೂಕರಾಗಬೇಕು ಮತ್ತು ಸುರಕ್ಷತಾ ನಿಯಮಗಳನ್ನು ಪಾಲಿಸಬೇಕೆಂದು ಕರೆ ನೀಡಿದರು. ಘಟನೆಗಳು ಹಾಗೂ ಅಪರಾಧ ಚಟುವಟಿಕೆಗಳು ಗಮನಕ್ಕೆ ಬಂದ ತಕ್ಷಣವೇ ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡಬೇಕೆಂದು ವಿನಂತಿಸಿ, 112 ಸಹಾಯವಾಣಿಯ ಕರ್ತವ್ಯಗಳ ಬಗ್ಗೆ ವಿವರಣೆ ನೀಡಿದರು.

ಮುಖ್ಯ ಅತಿಥಿಗಳಾಗಿ ಕೆಪಿಸಿಯ ಮುಖ್ಯ ಅಭಿಯಂತರರಾದ ರವಿಚಂದ್ರನ್ ಶಿರಾಲಿ, ಅಧೀಕ್ಷಕ ಅಭಿಯಂತರರಾದ ವಜ್ರಮುನಿ ಎಕ್ಬೋಟೆ, ಕೆಪಿಸಿಯ ಎ.ಜಿ.ಎಂ ಶಾಂತಾಕುಮಾರಿ, ಕಾರ್ಯನಿರ್ವಾಹಕ ಅಭಿಯಂತರರಾದ ಶಂಕರ ಲಮಾಣಿ‌ ಮೊದಲಾದವರು ಭಾಗವಹಿಸಿ ನಾವು ನಮ್ಮ ಜೀವನದಲ್ಲಿ ಉತ್ತಮ ಸಂಸ್ಕಾರ ಆದರ್ಶ ನಡುವಳಿಕೆಗಳನ್ನು ಮೈಗೂಡಿಸಿಕೊಳ್ಳಬೇಕು. ಸಂಸ್ಕಾರ ಇದ್ದಲ್ಲಿ ಅಪರಾಧ ಕೃತ್ಯಗಳು ನಡೆಯುವುದಿಲ್ಲ. ಈ ನಿಟ್ಟಿನಲ್ಲಿ ಕಾನೂನನ್ನು ಗೌರವಿಸಿ ಅದರಂತೆ ಬದುಕನ್ನು ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು.

300x250 AD

ಕಾರ್ಯಕ್ರಮದಲ್ಲಿ ಕೆಪಿಸಿಯ ಅಧಿಕಾರಿಗಳು, ಸಿಬ್ಬಂದಿಗಳು, ಕಾರ್ಮಿಕರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top