Slide
Slide
Slide
previous arrow
next arrow

ರಾಜ್ಯದ ಅಗ್ರ ಮಾನ್ಯ ಶ್ರೇಷ್ಠ ಕವಿ ಕುವೆಂಪು: ಪ್ರಕಾಶ್ ರಜಪೂತ್

300x250 AD

ಕಾರವಾರ: ಕುವೆಂಪು ಅವರು ರಾಜ್ಯದ ಅಗ್ರಮಾನ್ಯ ಮತ್ತು ಶ್ರೇಷ್ಠ ಕವಿಯಾಗಿದ್ದರು, ಕನ್ನಡ ಭಾಷೆಯ ಬೆಳವಣಿಗೆ ಅವರ ಕೊಡುಗೆ ಅಪಾರವಾದುದು ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ್ ಹೇಳಿದರು.

ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಸಂಸ್ಕೃತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ, ಜಿಲ್ಲಾ ಮಟ್ಟದ ವಿಶ್ವ ಮಾನವ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕುವೆಂಪು ಅವರ ಬಗ್ಗೆ ತಿಳಿಯಬೇಕಿದ್ದಲ್ಲಿ ಅವರ ಕಾದಂಬರಿಗಳನ್ನು ಓದಬೇಕು, ವರಕವಿ ಬೇಂದ್ರೆ, ಯುಗದ ಜಗದ ಕವಿ ಎಂದು ನುಡಿದಿರುವ ವಾಕ್ಯ ಕುವೆಂಪು ಅವರ ಶ್ರೇಷ್ಠತೆಯನ್ನು ಸಾರುತ್ತದೆ. ಕುವೆಂಪು ಅವರು ನೀಡಿರುವ ವಿಶ್ವ ಮಾನವ ಸಂದೇಶ ಎಲ್ಲಾ ಕಾಲಕ್ಕೂ, ಎಲ್ಲಾ ದೇಶಕ್ಕೂ ಸಲ್ಲುವಂತದ್ದು. ಅವರ ಆದರ್ಶ ತತ್ವ ಚಿಂತನೆಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ನಿವೃತ್ತ ಪ್ರಾಂಶುಪಾಲ ಮಾನೇಶ್ವರ ನಾಯಕ್ ಮಾತನಾಡಿ, ದೇಶ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡವನ್ನು ಪ್ರಸಿದ್ದಗೊಳಿಸಿದ ಕೀರ್ತಿ ಕುವೆಂಪು ಅವರಿಗೆ ಸಲ್ಲುತ್ತದೆ. ಅವರ ವಿಶ್ವ ಮಾನವ ಸಂದೇಶ ಇಂದಿನ ಜಗತ್ತಿಗೆ ಅತ್ಯಂತ ಅಗತ್ಯವಿದೆ. ಈ ಸಂದೇಶವನ್ನು ಅಳವಡಿಸಿಕೊಳ್ಳುವುದರಿಂದ ಇಡೀ ಜಗತ್ತು ಶಾಂತಿಯಿಂದ ಇರಲು ಸಾಧ್ಯವಾಗಲಿದೆ. ಹುಟ್ಟಿದಾಗ ವಿಶ್ವ ಮಾನವನಾದ ವ್ಯಕ್ತಿಯನ್ನು ಸಮಾಜ ಮತ್ತು ವಿವಿಧ ಆಚರಣೆಗಳು ಅವನನ್ನು ಅಲ್ಪ ಮಾನವನಾಗಿ ಮಾಡುತ್ತವೆ. ಪ್ರತಿಯೊಬ್ಬ ವ್ಯಕ್ತಿಯೂ ವಿಶಾಲ ದೃಷ್ಠಿಕೋನ, ವಿಶಾಲ ಮನೋಭಾವ, ವಿಶ್ವ ಭ್ರಾತೃತ್ವವನ್ನು ಬೆಳೆಸಿಕೊಂಡು ಜಾತ್ಯಾತೀತ ಭಾವನೆ ಹೊಂದಿರಬೇಕು ಎನ್ನುವುದು ಕುವೆಂಪು ಅವರ ವಿಶ್ವ ಮಾನವ ಸಂದೇಶದ ಪ್ರಮುಖ ಅಂಶವಾಗಿದೆ. ಕುವೆಂಪು ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ನಿತ್ಯ ಜೀವನದಲ್ಲಿ ಅಳವಡಿಕೊಳ್ಳಬೇಕು ಎಂದರು.

300x250 AD

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಡಾ.ಗಣೇಶ ಬಿಷ್ಠಣ್ಣನವರ್ ಮಾತನಾಡಿ, ಶ್ರೇಷ್ಠ ಅಧ್ಯಾಪಕರಾಗಿದ್ದ ಕುವೆಂಪು ತಮ್ಮ ವಿದ್ಯಾರ್ಥಿಗಳ ಶ್ರೇಯೋಭಿವೃದ್ದಿಗಾಗಿ ಶ್ರಮಿಸಿದವರು. ಯಾವುದೇ ಒತ್ತಡದ ಸಂದರ್ಭದಲ್ಲೂ ತಮ್ಮ ಆದರ್ಶ ತತ್ವಗಳಿಂದ ಹಿಂದೆ ಸರಿಯದೇ ನೇರ ನಿಷ್ಠುರವಾದಿಯಾಗಿದ್ದರು. ಮೈಸೂರಿನ ಮಾನಸ ಗಂಗೋತ್ರಿಯನ್ನು ಆದರ್ಶ ಸಂಸ್ಥೆಯನ್ನಾಗಿ ರೂಪಿಸಿದವರು ಎಂದರು.

ಶಿಕ್ಷಕಿ ಮಂಜುಳಾ ಗೌಡ ಕುವೆಂಪು ಅವರ ಕುರಿತ ಸ್ವರಚಿತ ಕವನ ವಾಚನ ಮಾಡಿದರು. ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಅರ್ಚನಾ ನಾಯ್ಕ್ ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಕೆ. ರಾಮಚಂದ್ರ ಸ್ವಾಗತಿಸಿ, ವಂದಿಸಿದರು.

Share This
300x250 AD
300x250 AD
300x250 AD
Back to top