Slide
Slide
Slide
previous arrow
next arrow

ಹೊನ್ನಾವರದಲ್ಲಿ ಮುಂದುವರಿದ ಕಳ್ಳರ ಕೈಚಳಕ : ಡೋರ್ ಮುರಿದು ನಗದು ಕಳ್ಳತನ

300x250 AD

ಹೊನ್ನಾವರ : ಕಳೆದ ಸೋಮವಾರ ರಾತ್ರಿ ಕವಲಕ್ಕಿಯಲ್ಲಿ ಬಂಗಾರದ ಅಂಗಡಿ ಕಳುವು ಮಾಡುವ ಪ್ರಯತ್ನ ನಡಿಸಿದ ಕಳ್ಳರು ಡೋರ್ ಎತ್ತಲಾಗದೆ ಹಾಗೆ ಹೋಗಿದ್ದರು. ಮಂಗಳವಾರ ರಾತ್ರಿ ಪಟ್ಟಣದ ಕರ್ಕಿ ನಾಕಾ ಹತ್ತಿರ ಇರುವ ಎರಡು ಅಂಗಡಿಗೆ ಸೆಟರ್ ಮುರಿದು ಕನ್ನ ಹಾಕಿದ್ದು ನಗದು ದೋಚಿ ಪರಾರಿ ಆಗಿದ್ದಾರೆ.

ಕರ್ಕಿ ನಾಕಾದಲ್ಲಿರುವ ನ್ಯೂಟೆಕ್ ಎಜನ್ಸೀಸ್ ಸೆಟರ್ ಎತ್ತಿ ಐದು ಸಾವಿರ ನಗದು ಕಳುವು ಮಾಡಿದ್ದಾರೆ. ಅಲ್ಲೇ ಸ್ವಲ್ಪ ದೂರದ ಮತ್ತೊಂದು ಅಂಗಡಿಯಲ್ಲಿ ಎರಡು ಲಕ್ಷ ರೂಪಾಯಿ ಕಳ್ಳತನ ಮಾಡಿ ಪರಾರಿ ಆಗಿದ್ದಾರೆ. ಕಳ್ಳರು ಕಳ್ಳತನ ಮಾಡುತ್ತಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ.

300x250 AD

ಪೊಲೀಸರಿಗೆ ತಲೆ ನೋವಾದ ಕಳ್ಳರು :
ಸರಣಿ ಕಳ್ಳತನ ಪೊಲೀಸರಿಗೆ ತಲೆ ನೋವು ತಂದಿಟ್ಟಿದೆ. ಸೋಮವಾರ ಕವಲಕ್ಕಿಯಲ್ಲಿ ಕಳ್ಳತನಕ್ಕೆ ಪ್ರಯತ್ನ ನಡೆಸಿದರೆ, ಮಂಗಳವಾರ ಕಳ್ಳತನ ಮಾಡಿದ್ದಾರೆ. ಹೆದ್ದಾರಿ ಪಕ್ಕದಲ್ಲೇ ಅದರಲ್ಲೂ ಸಿ ಸಿ ಕ್ಯಾಮರಾ ಇದ್ದರು ಕೂಡ ಭಯವೇ ಇಲ್ಲದೆ ಮಾಸ್ಕ್ ಧರಿಸಿ ಕಳ್ಳತನ ಮಾಡುತ್ತಿರುವುದು ಅಂಗಡಿಕಾರರಿಗೆ ಭಯ ಹುಟ್ಟಿಸಿದೆ. ಪೊಲೀಸರು ಇಂತಹ ಕಳ್ಳರ ಹೆಡೆಮುರಿ ಕಟ್ಟಬೇಕಿದೆ.

Share This
300x250 AD
300x250 AD
300x250 AD
Back to top