Slide
Slide
Slide
previous arrow
next arrow

ಶಿರಸಿಯಲ್ಲಿ ಸೇವಾದಳ ಶತಮಾನೋತ್ಸವ ಕಾರ್ಯಕ್ರಮ

300x250 AD

ಶಿರಸಿ: ಭಾರತ ಸೇವಾದಳ ಜಿಲ್ಲಾ ಕಛೇರಿ ಶಿರಸಿಯಲ್ಲಿ ಸೇವಾದಳ ಶತಮಾನೋತ್ಸವ ಕಾರ್ಯಕ್ರಮವು ಭಾರತ ಸೇವಾದಳ ಜಿಲ್ಲಾ ಹಾಗೂ ತಾಲೂಕಾ ಸಮಿತಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಶಿರಸಿ ಇವರ ಸಹಯೋಗದೊಂದಿಗೆ ಡಿ.೨೮, ಗುರುವಾರದಂದು ಜರುಗಿತು.

ಬೆಳಗ್ಗೆ 9.30 ಘಂಟೆಗೆ ಸರಿಯಾಗಿ ಭಾರತ ಸೇವಾದಳ ಜಿಲ್ಲಾ ಸಮಿತಿ ಅಧ್ಯಕ್ಷ ವಿ.ಎಸ್.ನಾಯಕ ಇವರು ರಾಷ್ಟ್ರಧ್ವಜಾರೋಹಣ ಮಾಡುವುದರ ಮೂಲಕ ಉದ್ಘಾಟಿಸಿದರು. ತದನಂತರದಲ್ಲಿ ಧ್ವಜಕ್ಷೇತ್ರದಲ್ಲಿ ಪಥ ಸಂಚಲನದೊಂದಿಗೆ ಗೌರವ ಸ್ವೀಕಾರ ಕಾರ್ಯಕ್ರಮವು ಜರುಗಿತು. 10.00 ಗಂಟೆಗೆ ಸರಿಯಾಗಿ ನಗರದ ವಿವಿಧ ಶಾಲೆಗಳಿಂದ ಆಗಮಿಸಿದ ತಂಡಗಳು, ಹಾಗೂ ಕಲಾತಂಡಗಳು, ವಾದ್ಯತಂಡದೊಂದಿಗೆ ಡಾ|| ನಾ.ಸು. ಹರ್ಡೀಕರ ಭಾವಚಿತ್ರವನ್ನು ಅಲಂಕೃತ ತೆರೆದ ಜೀಪಿನಲ್ಲಿ ಪೂರ್ಣಕುಂಭದೊಂದಿಗೆ ಜಾಥಾ ನಡೆಸಲು ಅಣಿಗೊಳಿಸಲಾಯಿತು.

ಜಾಥಾದ ಮಂಚೂಣಿಯಲ್ಲಿ ಶಾಸಕರ ಮಾದರಿ ಶಾಲೆ ಶಿರಸಿ ಇಲ್ಲಿನ ವಾದ್ಯತಂಡ ನಂತರದಲ್ಲಿ ತೇಲಂಗ ಪ್ರೌಢಶಾಲೆಯ ಪೂರ್ಣಕುಂಭ ತಂಡ, ಹಾಗೂ ಶಾಸಕರ ಮಾದರಿ ಶಾಲೆ ಫ್ಲಾಗ್ ತಂಡ ಅನುಕರಿಸುತ್ತಾ ಹಿ.ಪ್ರಾ. ಶಾಲೆ ಗಾಂಧಿನಗರದ ವೀರವನಿತೆಯರ ತಂಡ, ಹಿ.ಪ್ರಾ. ಮಾರಿಗುಡಿ ವೀರನಾಯಕರ ತಂಡ, ರಾಯಪ್ಪ ಹುಲೇಕಲ್ ಶಾಲೆಯ ದಂಡಿ ಸತ್ಯಾಗ್ರಹ ತಂಡ, ಅಲ್ಲದೆ ಹಿ.ಪ್ರಾ. ಶಾಲೆ ಕಸ್ತೂರಬಾ ನಗರ ಕನ್ನಡ ಹಾಗೂ ಉರ್ದುಶಾಲಾ ತಂಡ, ಭೂಮಾ ಪ್ರೌಢಾಶಾಲಾ ಬಾಲಕಿಯರ ತಂಡ, ಹಿ.ಪ್ರಾ ಉರ್ದು ನೆಹರುನಗರ ತಂಡ ಆಝಾಧನಗರ ಶಾಲಾ ತಂಡ, ಹಿ.ಪ್ರಾ ಶಾಲೆ ನಂ-5 ತಂಡ, ಎಲ್ಲಾ ತಂಡಗಳು ನಗರದಲ್ಲಿ ಬಿಡಕಿ ಬೈಲಿನಿಂದ ಸುತ್ತುವರಿದು ಶ್ರದ್ಧಾನಂದ ಗಲ್ಲಿಯ ಮೂಲಕ ಘೋಷಣೆ ಹಾಡುಗಳ ಮೂಲಕ ಸಂಚಲನ ಮೂಡಿಸಿ ಪುನಃ ಜಿಲ್ಲಾ ಕಛೇರಿಯಲ್ಲಿ ಸಮಾವೇಶಗೊಂಡಿತು. ದಣಿದ ವಿದ್ಯಾರ್ಥಿಗಳಿಗೆ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಸುರೇಶ್ಚಂದ್ರ ಹೆಗಡೆ ತಂಪಾದ ಮಜ್ಜಿಗೆ ವ್ಯವಸ್ಥೆ ಮಾಡಿದ್ದರು. 350 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ 50 ಶಿಕ್ಷಕರು ಭಾಗವಹಿಸಿದ್ದರು, ಪೋಲಿಸ್ ಇಲಾಖೆಯವರು ಸಹಕಾರ ನೀಡಿದರು.

300x250 AD

11:00 ಘಂಟೆಗೆ ಸಭಾ ಕಾರ್ಯಕ್ರಮ ಆರಂಭಗೊ೦ಡು ಜಿಲ್ಲಾ ಸಂಘಟಕ ರಾಮಚಂದ್ರ ಹೆಗಡೆ ಇವರು ಗೌರವ ರಕ್ಷೆ ನೀಡಿ ಸರ್ವಧರ್ಮ ಪ್ರಾರ್ಥನೆಯೊಂದಿಗೆ ಸಭೆ ಪ್ರಾರಂಭವಾಯಿತು. ತಾಲೂಕಾ ಸಮಿತಿ ಭಾರತ ಸೇವಾದಳ ಅಧ್ಯಕ್ಷ ಅಶೋಕ ಭಜಂತ್ರಿ ಇವರು ಸ್ವಾಗತಿಸಿದರು. ರಾಮಚಂದ್ರ ಹೆಗಡೆ ಪ್ರಾಸ್ತಾವಿಕ ಮಾತನಾಡಿದರು. ಡಿ.ವೈ.ಎಸ್.ಪಿ. ಗಣೇಶ ಕೆ. ಎಲ್. ಇವರು ನಾನೂ ಸಹ ಶಾಲಾ ಬಾಲಕನಾಗಿದ್ದಾಗ ಸೇವಾದಳದ ಸ್ವಯಂಸೇವಕನಾಗಿದ್ದು ಸೇವಾದಳದ ಭದ್ರ ಬುನಾದಿ ಶಿಸ್ತು, ಸಮಯ ಪಾಲನೆ, ತತ್ವಗಳ ಆಧಾರದಲ್ಲಿ ಈ ವೃತ್ತಿ ನನಗೆ ದೊರತಿದೆ. ಮಕ್ಕಳೇ ನಿಮಗೆ ಇದು ಅತ್ಯಗತ್ಯ ಶಿಕ್ಷಣ ಇದನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿರಿ ಎಂದರು. ಉಪನಿರ್ದೇಶಕ ಪಿ.ಬಸವರಾಜ ಮಾತನಾಡುತ್ತಾ ಫಲಾಪೇಕ್ಷೆ ಇಲ್ಲದೆ ಕಾರ್ಯವನ್ನು ಮಾಡಿರಿ, ಸೇವೆಯಿಂದ ಆತ್ಮಗೌರವ ಹೆಚ್ಚುವುದು ಎಂದರು ಇದೇ ಸಂದರ್ಭದಲ್ಲಿ ಭಾರತ ಸೇವಾದಳದ ಹಿರಿಯರಾದ ಶ್ರೀಮತಿ ಲೀಲಾವತಿ ರಾಯ್ಕರ, ಶ್ರೀಮತಿ ಜುಲ್ಯಾನಾ ಮಚಾಡೊ, ಎನ್.ಎನ್. ನಾಯ್ಕ, ಎನ್.ವಿ. ಹೆಗಡೆ, ಪದ್ಮನಾಭ, ಪಿ.ಎನ್ ಜೋಗಳೆಕರ, ಜೆ.ಎಸ್. ನಾಯ್ಕ (ವಿಶ್ರಾಂತ ದಳಪತಿ), ಇವರುಗಳನ್ನು ಗೌರವಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿಗಳು ನಾಗರಾಜ ನಾಯ್ಕ ಇವರು ಸೇವಾ ಮನೋಭಾವನೆ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಇದು ನಮ್ಮ ಜೀವನ ಪರ್ಯಂತ ನಿರಂತರವಾಗಿ ಇರಬೇಕು ಎಂದರು. ಇದೇ ಸಂದರ್ಭದಲ್ಲಿ ಆಟೋಟ ಸ್ಪರ್ಧೆ ಹಾಗೂ ಪ್ರಬಂಧ, ಗಾಯನ ಸ್ಪರ್ಧೆಯಲ್ಲಿ ಭಾಗಗೊಂಡು ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ವಿಶ್ರಾಂತ ದಳಪತಿ ಜೆ. ಎಸ್. ನಾಯ್ಕ, ಭಾರತ ಸೇವಾದಳ ಕೋಶಾಧ್ಯಕ್ಷ ಕುಮಾರ ನಾಯ್ಕ, ಸದಸ್ಯ ಕೆ.ಎನ್.ನಾಯ್ಕ ಉಪಸ್ಥಿತರಿದ್ದರು. ಭಾಗವಹಿಸಿದ ಎಲ್ಲಾ ಕಲಾ ತಂಡಗಳಿಗೆ ಹಾಗೂ ಮಾರ್ಚಿಂಗ್ ತಂಡಗಳಿಗೆ ನೆನಪಿನ ಕಾಣಿಕೆ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷರಾದ ವಿ.ಎಸ್. ನಾಯಕ ಇವರು ನನ್ನ ಜೀವನದಲ್ಲಿ ಪ್ರಭಾವ ಬೀರಿದ ಒಂದು ಅಂಶವೆಂದರೆ, ಅದು ಸೇವಾದಳ ನೀ ಅಳಿದರೂ ನೀ ಮಾಡಿದ ಕರ್ಮ ಉಳಿಯುವುದು ಎಂಬಂತೆ, ನಾಲ್ಕಾರು ಉತ್ತಮ ಕಾರ್ಯವನ್ನು ಮಾಡಲು ಹೇಳಿ ಮಾಡಿಸಿದ ವೇದಿಕೆ ಇದಾಗಿದೆ. ಸೇವಾದಳವನ್ನು ಉಪೇಕ್ಷೆ ಮಾಡಬೇಡಿ, ಸೇವೆಗಾಗಿ ಕೆಲಸ ಮಾಡಬೇಕು. ಹೆಸರಿಗಾಗಿ ಕೆಲಸ ಮಾಡಬಾರದು ಸೇವಾದಳ ಶಿಕ್ಷಣದಿಂದ ಪರಿಪೂರ್ಣತೆ ಕಂಡುಕೊಳ್ಳಲು ಸಾಧ್ಯ ಎಂದರು
ಎಮ್.ಎನ್. ಹೆಗಡೆ ನಿರೂಪಿಸಿದರು, ಶ್ರೀಮತಿ ದಾಕ್ಷಾಯಿಣಿ ಕೊಡಿಯಾ ವಂದಿಸಿದರು, ತಾಲೂಕಾ ಸಂಘಟಕ ಸರ್ವೆಶ್ವರ ಶೆಟ್ಟಿ ಅಚ್ಚುಕಟ್ಟಾಗಿ ಸಂಘಟಿಸಿದರು. ಕುಮಾರ ನಾಯ್ಕ ಸನ್ಮಾನ ಕಾರ್ಯಕ್ರವನ್ನು ನಿರ್ವಹಿಸಿದರು.

Share This
300x250 AD
300x250 AD
300x250 AD
Back to top