ಶಿರಸಿ: ತಾಲೂಕಿನ ಮೂಡಗಾರಿನ ಶ್ರೀಮತಿ ಪಾರ್ವತಿ ರಾಮಚಂದ್ರ ಭಟ್ಟ ಇವರು ಡಿ.27ರಂದು ತಮ್ಮ ಸ್ವಗೃಹದಲ್ಲಿ ವಯೋಸಹಜ ಕಾಯಿಲೆಯಿಂದ 79ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.
ಶಾಂತಪುರ ಸೀಮೆಯ ಹೆಸರಾಂತ ವೈದಿಕ ಕುಟುಂಬದ ಶಿವಗಾಮೆ ಮಠದ ವೈದಿಕ ಶ್ರೀ ಸೀತಾರಾಮ ಭಟ್ಟ ಇವರ ಸೊಸೆಯೂ, ಶಿರಸಿಯ ಪ್ರಸಿದ್ಧ ಅಡಿಕೆ ವರ್ತಕ ಭೈರಿ ಕುಟುಂಬದ ಮಗಳು ಆಗಿದ್ದಳು. ಇವಳು ಇಬ್ಬರು ಪುತ್ರಿ ಮೂವರು ಪುತ್ರರನ್ನು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇವರ ಪುತ್ರರ ಪೈಕಿ ಶ್ರೀಪಾದ ಭಟ್ಟ ಮೂಡಗಾರರವರು ಪ್ರತಿಭಾವಂತ ಮದ್ದಲೆಗಾರರಾಗಿದ್ದಾರೆ.