ಸಿದ್ದಾಪುರ: ಎಲ್ಲ ಜನ್ಮಕಿಂತ ಮನುಷ್ಯಜನ್ಮ ದೊಡ್ಡದು. ನಮ್ಮ ಉನ್ನತ ಆಚಾರ-ವಿಚಾರಗಳನ್ನು ರಕ್ಷಿಸಿಕೊಂಡು ಬರವುದರ ಮೂಲಕ, ಸಮಾಜಕ್ಕೆ ಉಪಕೃತರಾಗಬೇಕು. ಅಧ್ಯಯನಮಾಡಿ ಮುಂದೆ ಬರಬೇಕು. ನಮ್ಮ ಸಂಸ್ಕೃತಿಯ ಉನ್ನತಿಯ ವಿಚಾರಗಳನ್ನು ಮರೆಯದೇ ರಕ್ಷಿಸಿಕೊಂಡು ಬರುವಲ್ಲಿ ಪ್ರೋತ್ಸಾಹ ಸಿಗಬೇಕು. ಮನುಷ್ಯ ಸತ್ಕಾರ್ಯಗಳ ಮೂಲಕ ತನ್ನ ಶ್ರೇಯಸ್ಸನ್ನು ಸಮಾಜಕ್ಕೆ ದೊರೆಯುವಂತೆ ಪ್ರಯತ್ನಿಸುವುದರ ಮೂಲಕ ಮಾನವ ಜನ್ಮದ ಸಾರ್ಥಕತೆ ಸಾಧ್ಯ ಎಂದು ನೆಲೆಮಾವು ಮಠದ ಪೀಠಾಧಿಪತಿಗಳಾದ ಶ್ರೀ ಮಾಧನಾನಂದ ಭಾರತೀ ಮಹಾಸ್ವಾಮಿಗಳು ನುಡಿದರು.
ತಾಲೂಕಿನ ಹೇರೂರಿನ ಸಿದ್ಧಿವಿನಾಯಕ ದೇವಸ್ಥಾನದ ಸಭಾಂಗಣದಲ್ಲಿ ಅಖಿಲ ಹವ್ಯಕ ಮಹಾಸಭೆ ಬೆಂಗಳೂರು ಇವರು ಆಯೋಜಿಸಿದ್ದ ಪ್ರತಿಬಿಂಬ ಕಾರ್ಯಕ್ರಮದ ಸಮಾರೋಪದ ಸಾನ್ನಿಧ್ಯವಹಿಸಿ ಅವರು ಆಶೀರ್ವಚನ ನೀಡಿದರು.
ಸಂಸ್ಕಾರ ಮತ್ತು ಸಂಸ್ಕೃತಿ ವಿಚಾರವಾಗಿ ವಿ. ವಿಶ್ವನಾಥ ಭಟ್ಟ ನೀರಗಾನ್, ಸನಾತನ ವೈದಿಕ ಧರ್ಮ ಕುರಿತು ವಿ. ಮಂಜುನಾಥ ಗ. ಭಟ್ಟ ಹೇರೂರು ಉಪನ್ಯಾಸ ನೀಡಿದರು. ಅಖಿಲ ಹವ್ಯಕ ಮಹಾಸಭಾದ ಉಪಾಧ್ಯಕ್ಷ ಆರ್. ಎಂ. ಹೆಗಡೆ ಬಾಳೇಸರ, ಬಾಳೇಸರ ಸೇವಾ ಸಹಕಾರಿ ಸಂಘ ಅಧ್ಯಕ್ಷ ಸಿ. ಎನ್ ಹೆಗಡೆ ತಂಗಾರಮನೆ, ಕಂಚಿಕೈ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ.ವಿ. ಹೆಗಡೆ, ನಿಲ್ಕುಂದ ಗ್ರಾಪಂ ಅಧ್ಯಕ್ಷ ರಾಜಾರಾಮ ಹೆಗಡೆ ಬಿಳೇಕಲ್ಲು, ಹವ್ಯಕ ಮಹಾಸಭಾದ ನಿರ್ದೇಶಕ ಜಿ. ಎಂ. ಭಟ್ಟ ಕಾಜಿನಮನೆ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಮಾಹಾಬಲೇಶ್ವರ ಭಟ್ಟ ಕೆರೆಹಿತ್ಲು, ಪರಮೇಶ್ವರ ಹೆಗಡೆ ನೇರಲಮನೆ, ಚಿದಂಬರ ಭಟ್ಟ ನೆಲೆಮಾವು, ವೆಂಕಟ್ರಮಣ ಭಟ್ಟ ಕೋಡಖಂಡ ಅವರನ್ನು ಸನ್ಮಾನಿಸಲಾಯಿತು. ಜಿ. ಆರ್. ಭಾಗ್ವತ್, ಕಲಾ ಹೆಗಡೆ, ಎಂ.ವಿ. ಹೆಗಡೆ, ನರಸಿಂಹ ಕುಳಿಮನೆ ಸನ್ಮಾನ ಪತ್ರ ವಾಚಿಸಿದರು.ಅಖಿಲ ಹವ್ಯಕ ಮಹಾಸಭಾದ ಕಾರ್ಯದರ್ಶಿ ಪ್ರಶಾಂತ ಭಟ್ಟ ಮಲವಳ್ಳಿ ಸ್ವಾಗತಿಸಿದರು.ವಿ.ಜಿ. ಹೆಗಡೆ ಕೆರೆಗದ್ದೆ ಎಂ.ಜಿ. ಹೆಗಡೆ ತ್ಯಾರ್‌ಗಲ್, ಜಿ.ಜಿ. ಹೆಗಡೆ ಬಾಳಗೋಡ ಕಾರ್ಯಕ್ರಮ ನಿರ್ವಹಿಸಿದರು.