Slide
Slide
Slide
previous arrow
next arrow

ಹವ್ಯಕರ ಪ್ರತಿಭಾ ಅನಾವರಣಕ್ಕೆ ‘ಪ್ರತಿಬಿಂಬ’ ಉತ್ತಮ ವೇದಿಕೆ: ಆರ್.ಎಂ. ಹೆಗಡೆ ಬಾಳೇಸರ

300x250 AD

ಸಿದ್ದಾಪುರ: ಹವ್ಯಕರು ತಮ್ಮ ಪ್ರತಿಭಾಶಕ್ತಿಯನ್ನು ಗುರುತಿಸಿಕೊಳ್ಳಬೇಕು. ಅದಕ್ಕಾಗಿ ಬೆಂಗಳೂರಿನ ಅಖಿಲ ಹವ್ಯಕ ಮಹಾಸಭೆ ರಾಜ್ಯಾದಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಿ ಅವರಲ್ಲಿರುವ ಅಗಾಧವಾದ ಪ್ರತಿಭೆ ಹೊರಹಾಕಲು “ಪ್ರತಿಬಿಂಬ” ಎಂಬ ಯೋಜನೆ ಮೂಲಕ ಅಭಿವ್ಯಕ್ತಗೊಳಿಸಲಾಗುತ್ತಿದೆ ಎಂದು ಅಖಿಲ ಹವ್ಯಕ ಮಹಾಸಭೆ ಬೆಂಗಳೂರು ಇದರ ಉಪಾಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ ಹೇಳಿದರು.

ತಾಲೂಕಿನ ಹೇರೂರಿನ ಸಿದ್ಧಿವಿನಾಯಕ ದೇವಾಲಯದ ಸಭಾಂಗಣದಲ್ಲಿ ಅಖಿಲ ಹವ್ಯಕ ಮಹಾಸಭೆ ಆಯೋಜಿಸಿದ್ದ ಹೇರೂರು ಪ್ರಾಂತ್ಯದ ಪ್ರತಿಬಿಂಬ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಸೋಮವಾರ ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿದ್ದಾಪುರ ಶಿಕ್ಷಣ ಪ್ರಸಾರಕ ಸಮಿತಿ ಉಪಾಧ್ಯಕ್ಷ ಡಾ. ಶಶಿಭೂಷಣ ಹೆಗಡೆ ದೊಡ್ಮನೆ ಹವ್ಯಕರ ಸಂಪ್ರದಾಯ, ಸಹನೆ, ತಾಳ್ಮೆ, ಅಧ್ಯಯನ ಕಲೆ, ಇವೆಲ್ಲ ಉನ್ನತವಾದದ್ದು. ಅವರು ಹೊಂದಿರುವ ಸಾಂಸ್ಕೃತಿಕ ಶ್ರೀಮಂತಿಕೆ ಅನನ್ಯವಾದುದು. ಅದನ್ನು ಪೋಷಿಸಿಕೊಂಡು ಬರಬೇಕು ಎಂದರು.

300x250 AD

ಕೆಡಿಸಿಸಿ ಬ್ಯಾಂಕ್ ಶಿರಸಿ ಇದರ ನಿರ್ದೇಶಕ ರಾಘವೇಂದ್ರ ಶಾಸ್ತ್ರೀ ಬಿಳಗಿ, ನೆಲೆಮಾವು ಮಠದ ಅಧ್ಯಕ್ಷ ಜಿ.ಎಂ. ಹೆಗಡೆ ಹೆಗ್ನೂರು, ಹೆಗ್ಗರ್ಣಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ.ಎಲ್.ಭಟ್ಟ ಉಂಚಳ್ಳಿ, ನಾಗಪತಿ ಹೆಗಡೆ ಶಿರಸಿ ಮಾತನಾಡಿದರು. ಗಣಪತಿ ಈಶ್ವರ ಹೆಗಡೆ ಉಂಬಳಮನೆ, ನರಸಿಂಹಮೂರ್ತಿ ಹೆಗಡೆ ತ್ಯಾರಗಲ್, ಎಂ.ಜಿ. ಹೆಗಡೆ ತ್ಯಾರ್‌ಗಲ್, ಅಖಿಲ ಹವ್ಯಕ ಮಹಾಸಭೆಯ ಕಾರ್ಯದರ್ಶಿ ಪ್ರಶಾಂತ ಭಟ್ಟ ಮಲವಳ್ಳಿ ಹಾಗೂ ಹವ್ಯಕ ನಿರ್ದೇಶಕ ಶಶಾಂಕ ಶಿರಸಿ ಉಪಸ್ಥಿತರಿದ್ದರು. ಅಖಿಲ ಹವ್ಯಕ ಮಹಾಸಭಾದ ನಿರ್ದೇಶಕ ಗಣೇಶ ಭಟ್ಟ ಕಾಜಿನಮನೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ನರಹರಿ ಕುಳಿಮನೆ ವಂದಿಸಿದರು.ಜಿ.ಜಿ ಹೆಗಡೆ ಬಾಳಗೋಡ, ಜಿ.ಆರ್. ಭಾಗ್ವತ್ ತ್ಯಾರಗಲ್ ಕಾರ್ಯಕ್ರಮ ನಿರ್ವಹಿಸಿದರು.

Share This
300x250 AD
300x250 AD
300x250 AD
Back to top