Slide
Slide
Slide
previous arrow
next arrow

ವ್ಯವಹಾರ ಜ್ಞಾನವೃದ್ಧಿಗಾಗಿ ಕೇಣಿ ಶಾಲೆಯಲ್ಲಿ ನಡೆದ ಮಕ್ಕಳ ಸಂತೆ

300x250 AD

ಅಂಕೋಲಾ : ಆಧುನಿಕ ಶಿಕ್ಷಣದ ಜೊತೆಗೆ ವ್ಯಾವಹಾರಿಕ ಜ್ಞಾನವನ್ನು ವೃದ್ಧಿಸುವ ಸದುದ್ದೇಶದಿಂದ ಕೇಣಿಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂತೆಯನ್ನು ಹಮ್ಮಿಕೊಳ್ಳಲಾಯಿತು. ಮಕ್ಕಳೇ ವ್ಯಾಪಾರ ವಹಿವಾಟು ನಡೆಸುವ ಪರಿಕಲ್ಪನೆಯ ಮಕ್ಕಳ ಸಂತೆಯನ್ನು ಕೇಣಿಯ ಪ್ರಮುಖ ಹಾಗೂ ಸಮಾಜ ಸೇವಕರಾದ ಸಂದೀಪ ಬಂಟ ಉದ್ಘಾಟಿಸಿದರು.

ಈ ವೇಳೆ ಅವರು ಮಾತನಾಡಿ ಬದುಕಿನಲ್ಲಿ ವ್ಯವಹಾರ ಜ್ಞಾನ ತುಂಬಾ ಅವಶ್ಯ. ವ್ಯವಹಾರ ನಡೆಸುವ ಕೌಶಲ್ಯದ ಜೊತೆಗೆ ಗ್ರಾಹಕರೊಂದಿಗೆ ಹೇಗೆ ನಡೆದುಕೊಳ್ಳಬೇಕು ಎನ್ನುವ ಕಲೆಯನ್ನೂ ಕಲಿಯಬೇಕಾಗುತ್ತದೆ. ಶಾಲಾ ದಿನಗಳಲ್ಲೇ ವ್ಯಾವಹಾರಿಕ ಜ್ಞಾನವನ್ನು ಕಲಿತರೆ ಮುಂದೆ ಯಾವುದೇ ಉದ್ಯಮ ವ್ಯವಹಾರಗಳನ್ನು ಯಶಸ್ವಿಯಾಗಿ ನಡೆಸಬಹುದು ಎಂದರು. ಹಾಗೂ ಶಾಲೆಯ ಮುಂದೆ ಒಂದು ಗಾರ್ಡನ್ ಅವಶ್ಯಕತೆ ಇದೆ ಅದನ್ನು ನಿರ್ಮಿಸಲು ಸಹಾಯ ಮಾಡುತ್ತೇನೆ ಅದೇ ರೀತಿ ಹಳೆಯ ವಿದ್ಯಾರ್ಥಿಗಳು, ಎಸ್ ಡಿ ಎಮ್ ಸಿ ಸದಸ್ಯರು, ಸಾರ್ವಜನಿಕರು ಕೂಡ ಸಹಾಯ ಮಾಡಬೇಕು ಎಂದರು.

ಭಾವಿಕೇರಿ ಗ್ರಾ.ಪಂ. ಅಧ್ಯಕ್ಷೆ ದೀಪಾ ನಾಯಕ ಮಾತನಾಡಿ ಕೇಣಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಈ ಶಾಲೆಗೆ ರಂಗಮಂದಿರ ನಿರ್ಮಿಸುವ ಕುರಿತು ಶಾಸಕರ ಬಳಿ ಚರ್ಚಿಸಿದ್ದೇನೆ. ಶಾಸಕರು ಕೂಡ ಸ್ಪಂದಿಸಿದ್ದಾರೆ ಮುಂದಿನ ದಿನಗಳಲ್ಲಿ ರಂಗಮಂದಿರ ನಿರ್ಮಾಣಕ್ಕೂ ಕಾಲ ಕೂಡಿ ಬರಲಿದೆ ಎಂದರು. ಸ್ಥಳೀಯರೂ ಶಾಲೆಯ ಹಳೆಯ ವಿದ್ಯಾರ್ಥಿಯೂ ಆಗಿರುವ ಎಮ್ ಎ ಶೇಖ (ಶಫಿ) ಮಾತನಾಡಿ ಈ ಶಾಲೆಯಲ್ಲಿ ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡಲಾಗುತ್ತಿದೆ. ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ ಎಂದರು. ಪತ್ರಕರ್ತ ನಾಗರಾಜ ಜಾಂಬಳೇಕರ ಮಾತನಾಡಿದರು. ಮುಖ್ಯ ಶಿಕ್ಷಕಿ ಭಾರತಿ ಬಂಟ ಸ್ವಾಗತಿಸಿದರು. ಶಿಕ್ಷಕ ಬಾಬು ಎಂ ಗೌಡ ವಂದಿಸಿದರು.

300x250 AD

ಈ ಸಂದರ್ಭದಲ್ಲಿ ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷ ಪ್ರಸನ್ನ ಬಂಟ, ಉಪಾಧ್ಯಕ್ಷೆ ಇಂಚರಾ ನಾಯ್ಕ, ಸದಸ್ಯರಾದ ಪ್ರಸನ್ನ ಕೇಣಿಕರ, ದಿನೇಶ ಎಚ್ ನಾಯ್ಕ, ಗ್ರಾಹಕರ ಸಹಕಾರಿ ಸಂಘದ ನಿರ್ದೇಶಕರಾದ ಮುರಳೀಧರ ಬಂಟ, ಊರಿನ ಪ್ರಮುಖರಾದ ಗುರು ನಾಯ್ಕ, ಶಾರದಾ ಗಾಂವಕರ, ಸವಿತಾ ವಿ ನಾಯಕ, ರೇಖಾ ವಿ ಚಿಕ್ಮನೆ, ಶಾರದಾ ಎಲ್ ನಾಯಕ, ಸವಿತಾ ಬಿ ನಾಯಕ, ನಾಗರತ್ನಾ ಪಿ ನಾಯ್ಕ, ಅತಿಥಿ ಶಿಕ್ಷಕಿಯರು ಉಪಸ್ಥಿತರಿದ್ದರು. ಸಂತೆಯಲ್ಲಿ ಸಾರ್ವಜನಿಕರು, ಮಕ್ಕಳ ಪಾಲಕರು ಖರೀದಿ ನಡೆಸಿದರೆ ಶಿಕ್ಷಕ ಶಿಕ್ಷಕಿಯರು ಮಾರ್ಗದರ್ಶನ ನೀಡಿದರು. ಸಂತೆಯಲ್ಲಿ ಸ್ಥಳೀಯ ತರಕಾರಿ, ಗಡ್ಡೆಗೆಣಸುಗಳು ನೈಸರ್ಗಿಕ ವಸ್ತುಗಳು ಗಮನ ಸೆಳೆದವು.

Share This
300x250 AD
300x250 AD
300x250 AD
Back to top