Slide
Slide
Slide
previous arrow
next arrow

ಡಿ.30,31ಕ್ಕೆ ಹೊದ್ಕೆ-ಶಿರೂರು ಕಡ್ನೀರು ಪ್ರೌಢಶಾಲೆಯ ‘ರಜತ ಮಹೋತ್ಸವ’

300x250 AD

ಹೊನ್ನಾವರ: ತಾಲೂಕಿನ ಹೊದ್ಕೆ ಶಿರೂರು ಕಡ್ನೀರು ಪ್ರೌಢಶಾಲೆಯು 25ವರ್ಷಗಳ ಸಂಭ್ರಮದಲ್ಲಿದ್ದು, ಇದರ ಪ್ರಯುಕ್ತ ಡಿಸೆಂಬರ್ 30 ಹಾಗೂ 31 ರಂದು ರಜತಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ತನ್ನಿಮಿತ್ತ ಬುಧವಾರ ಶಾಸಕ ದಿನಕರ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಹೊದ್ಕೆ- ಶಿರೂರು ಕಡ್ನೀರು ಪ್ರೌಢಶಾಲೆಯಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ಪತ್ರಿಕಾಗೋಷ್ಠಿ ನಡೆಯಿತು.

ರಜತಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದ ನಂತರ ಮಾತನಾಡಿದ ಶಾಸಕ ದಿನಕರ ಶೆಟ್ಟಿ, ಹೊದ್ಕೆ- ಶಿರೂರು ಕಡ್ನೀರು ಪ್ರೌಢಶಾಲೆಯು ಸ್ಥಾಪನೆಯಾಗಿ 25ವರ್ಷಗಳನ್ನು ಪೂರೈಸಿದ್ದು ಇದರ ಸವಿನೆನಪಿಗಾಗಿ ರಜತಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಿದ್ದೇವೆ. ಡಿ. 30 ಹಾಗೂ 31 ರಂದು ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಹಳೆಯ ವಿದ್ಯಾರ್ಥಿಗಳಿಂದ ನಾಟಕ, ಯಕ್ಷಗಾನ ಸೇರಿದಂತೆ ಇತರ ಮನೋರಂಜನಾ ಕಾರ್ಯಕ್ರಮಗಳು ನಡೆಯಲಿವೆ. ಈ ಕಾರ್ಯಕ್ರಮವನ್ನು ಸಂಘಟಿಸಲು ಎಸ್. ಡಿ. ಎಂ. ಸಿ. ಯವರು, ಹಳೆ ವಿದ್ಯಾರ್ಥಿ ಸಂಘದವರು, ಶಿಕ್ಷಕವೃಂದದವರು ಹಾಗೂ ರಜತಮಹೋತ್ಸವ ಸಮಿತಿಯ ಸರ್ವ ಸದಸ್ಯರು ವಿಶೇಷ ತಯಾರಿ ನಡೆಸಿದ್ದಾರೆ. ರಜತ ಮಹೋತ್ಸವದ ಸವಿನೆನಪು ಹಚ್ಚಹಸಿರಾಗಿರಲು ಒಳ್ಳೆಯ ಕಾರ್ಯಕ್ರಮವನ್ನು ರೂಪಿಸಬೇಕೆನ್ನುವ ನಿಟ್ಟಿನಲ್ಲಿ ನಾವೆಲ್ಲರೂ ಸೇರಿ ಪ್ರಯತ್ನಿಸುತ್ತಿದ್ದೇವೆ. ಇದಕ್ಕೆ ಸಾರ್ವಜನಿಕರೆಲ್ಲರ ಸಹಕಾರವನ್ನು ಅಪೇಕ್ಷಿಸುತ್ತೇವೆ. ಹೊದ್ಕೆ- ಶಿರೂರು ಕಡ್ನೀರು ಗ್ರಾಮವು ಹಿಂದುಳಿದ ಹಳ್ಳಿಯಾಗಿದ್ದು ಇಂತಹ ಪ್ರದೇಶದಲ್ಲಿ ಕಾರ್ಯಕ್ರಮವನ್ನು ಸಂಘಟಿಸುವುದು ಸುಲಭದ ಕೆಲಸವಲ್ಲ. ಆದರೆ ಇಲ್ಲಿನ ಜನರ ಉತ್ಸಾಹವನ್ನು ನೋಡಿದರೆ ಎಲ್ಲ ಸವಾಲುಗಳನ್ನು ಎದುರಿಸಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನೆರವೇರಿಸುವ ವಿಶ್ವಾಸ ಇದೆ. ಉಸ್ತುವಾರಿ ಸಚಿವ ಮಂಕಾಳು ವೈದ್ಯ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದ ಹಿನ್ನೆಲೆಯಲ್ಲಿ ಎಸ್. ಡಿ. ಎಂ. ಸಿ. ಸದಸ್ಯರು, ಶಿಕ್ಷಕರು, ಹಳೆವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ನಿರಂತರವಾಗಿ ಸಭೆಗಳನ್ನು ನಡೆಸಿ, ಹಲವಾರು ತಿಂಗಳುಗಳಿಂದ ಸಿದ್ಧತೆ ನಡೆಸಿದ್ದೇವೆ. ಶಾಸಕರು ಸದಾಕಾಲ ಸಲಹೆ ಸೂಚನೆಗಳನ್ನು ನೀಡುತ್ತಾ ಬಂದಿದ್ದಾರೆ. ನಮ್ಮ ಗ್ರಾಮದ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ದಿನಕರ ಶೆಟ್ಟಿ ಅವರು ಸರ್ವರೀತಿಯಲ್ಲಿ ನಮಗೆ ಸಹಕರಿಸುತ್ತಾ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ನಮ್ಮೊಡನೆ ಶ್ರಮಿಸುತ್ತಿದ್ದಾರೆ ಎಂದು ರಜತ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಕೆ. ವಿ. ನಾಯ್ಕ್ ಹೇಳಿದರು.

300x250 AD

ಚಂದಾವರ ಗ್ರಾ. ಪಂ. ಅಧ್ಯಕ್ಷೆ ಪ್ರೇಮಾ ಮೋಹನ ನಾಯ್ಕ, S.D.M.C. ಉಪಾಧ್ಯಕ್ಷ ಮಾರುತಿ ಪ್ರಭು, ಮುಖ್ಯ ಶಿಕ್ಷಕ ವಿ. ಜಿ. ಅವಧಾನಿ, ಗ್ರಾಮದ ಪ್ರಮುಖರಾದ ಜಿ. ಪಿ. ನಾಯ್ಕ, ಗಣೇಶ ನಾಯ್ಕ, ಗುರು ಐಗಳ, ಎಮ್. ಎಸ್. ನಾಯ್ಕ, ಎಸ್. ಡಿ. ಎಮ್. ಸಿ. ಹಾಗೂ ಹಳೆವಿದ್ಯಾರ್ಥಿ ಸಂಘದವರು, ಶಿಕ್ಷಕರು ಹಾಜರಿದ್ದರು.

Share This
300x250 AD
300x250 AD
300x250 AD
Back to top