ಯಲ್ಲಾಪುರ : ಪಟ್ಟಣದ ನಾಯ್ಕನಕೆರೆಯ ‘ದತ್ತಗಿರಿ’ಯಲ್ಲಿರುವ ದತ್ತಾತ್ರೇಯ ಸನ್ನಿಧಾನದಲ್ಲಿ ದತ್ತ ಜಯಂತಿ ಉತ್ಸವದ ಅಂಗವಾಗಿ ಗುರು ಚರಿತ್ರೆ ಪಾರಾಯಣದ ಸಪ್ತಾಹ ಬುಧವಾರ ಆರಂಭಗೊಂಡಿತು.
ಗುರುಚರಿತ್ರೆ ಪಾರಾಯಣ ಹಾಗೂ ಉತ್ಸವ ಆಚರಣೆಯ ಸಂಕಲ್ಪವನ್ನು ಶ್ರೀ ರಾಮಚಂದ್ರಾಪುರ ಮಠದ ಪ್ರತಿನಿಧಿ ಎಸ್.ವಿ.ಯಾಜಿ ದಂಪತಿ ಹಾಗೂ ಇತರರ ನೇತ್ರತ್ವದಲ್ಲಿ ವೈದಿಕರಾದ ವೆಂಕಟ್ರಮಣ ಭಟ್ಟ ನಡೆಸಿಕೊಟ್ಟರು. ದತ್ತ ಜಯಂತಿ ಸಪ್ತಾಹದ ಅಂಗವಾಗಿ ದತ್ತ ಭಿಕ್ಷೆಗೆ ಚಾಲನೆ ನೀಡಲಾಯಿತು. ಎಸ್.ವಿ. ಯಾಜಿ ದಂಪತಿಗಳು ಸಿ.ಜಿ.ಹೆಗಡೆ ಅವರಿಗೆ ದತ್ತ ಭಿಕ್ಷೆ ನೀಡುವ ಮೂಲಕ ಚಾಲನೆ ನೀಡಿದರು. ನಂತರ ಬಾಳಗಿಮನೆ ಪ್ರದೇಶದಲ್ಲಿ ಮನೆ ಮನೆಗೆ ತೆರಳಿ ದತ್ತ ಭಿಕ್ಷೆ ಸ್ವೀಕರಿಸಲಾಯಿತು.
ಉತ್ಸವ ಸಮಿತಿಯ ಪ್ರಸಾದ ಹೆಗಡೆ, ಶಾಂತಾರಾಮ ಹೆಗಡೆ, ನಾಗರಾಜ ಮದ್ಗುಣಿ, ಪ್ರಶಾಂತ ಹೆಗಡೆ, ರಮೇಶ ಹೆಗಡೆ, ಶಿವಾನಂದ ಹೆಗಡೆ, ಬಾಬು ಬಾಂದೇಕರ್, ನಾಗೇಶ ಯಲ್ಲಾಪುರಕರ್, ದತ್ತಾ ರೇವಣಕರ್, ಅನಂತ ಬಾಂದೇಕರ್, ಶ್ರೀನಿವಾಸ ಗಾಂವ್ಕರ್, ನಾಗಪತಿ ಭಟ್ಟ ಹಾಗೂ ದೇವಸ್ಥಾನ ಅರ್ಚಕ ಅಶೋಕ ಹೆಗಡೆ ಇತರರಿದ್ದರು.