ಜೋಯಿಡಾ : ತಾಲೂಕಿನ ಶೇವಾಳಿ ಗ್ರಾಮದ ಕಾರೇಮನೆ , ಗೊಡಪಾಲ ರಸ್ತೆಯನ್ನು ಸ್ವತಃ ಗ್ರಾಮಸ್ಥರೇ ದುರಸ್ತಿ ಮಾಡುವ ಮೂಲಕ ರಸ್ತೆ ಸಮಸ್ಯೆಗೆ ತಕ್ಕಮಟ್ಟಿಗೆ ಪರಿಹಾರವನ್ನು ಕಂಡುಕೊಂಡಿದ್ದಾರೆ.
ಕಾರೇಮನೆ, ಗೊಡಪಾಲ ರಸ್ತೆಗೆ ಜಿ.ಪಂ ಇಲಾಖೆಯು ರಸ್ತೆಗೆ ಖಡೀಕರಣ ಮಾಡಿದ್ದು, ರಸ್ತೆ ನಿರ್ವಹಣೆ ಮಾಡಿರಲಿಲ್ಲ. ತಾಲೂಕಿನಲ್ಲಿ ಜಿ.ಪಂ. ಇಲಾಖೆ ರಸ್ತೆ ನಿರ್ಮಿಸಿ ಕೈ ತೊಳೆದುಕೊಳ್ಳುತ್ತಿರುವುದು ಮಾಮುಲಿ ಎಂಬಾಂತಾಗಿದೆ. ಈ ನಿಟ್ಟಿನಲ್ಲಿ ಅವರಿವರ ಕಡೆ ಬೆರಳು ತೋರಿಸುವುದಕ್ಕಿಂತ ಸ್ಥಳೀಯ ಗ್ರಾಮಸ್ಥರೇ ಸೇರಿಕೊಂಡು ಇದೀಗ ತಾತ್ಕಲಿಕವಾಗಿ ರಸ್ತೆ ದುರಸ್ತಿಗೆ ಮುಂದಾಗಿದ್ದಾರೆ.