ಶಿರಸಿ: ಶ್ರೀ ನಂದಿಕೇಶ್ವರ ಪ್ರಸಾದಿತ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಮೇಕ್ಕೆಕಟ್ಟು ಅರ್ಪಿಸುವ ‘ಪಾಪಣ್ಣ ವಿಜಯ ಗುಣಸುಂದರಿ’ ಎಂಬ ಸುಂದರ ಪೌರಾಣಿಕ ಯಕ್ಷಗಾನ ಪ್ರದರ್ಶನವು ಡಿ.19 ಮಂಗಳವಾರದಂದು ದೇವದಕೆರೆ ಶಾಲಾ ಹತ್ತಿರ ರಾತ್ರಿ 9.00 ಘಂಟೆಯಿಂದ ಪ್ರದರ್ಶನಗೊಳ್ಳಲಿದೆ.
ಭಾಗವತರಾಗಿ ಶಂಕರ ಭಟ್ಟ, ಬ್ರಹ್ಮೂರು, ಸಂತೋಷ ಕುಮಾರ್ ಆರ್ಡಿ, ಸಂಗೀತ ಸತೀಶ್ ಪಟಗಾರ್, ಬ್ರಹ್ಮೂರ್, ಮದ್ದಳೆ ಶಶಾಂಕ್ ಆಚಾರ್ಯ ಕಿರಿಮಂಜೇಶ್ವರ, ವಿಶ್ವಂಭರ ಅಲ್ಸೆ, ಚಂಡೆ ಸುಜನ್ ಕುಮಾರ್ ಹಾಲಾಡಿ, ಅಜಿತ್ ಆಚಾರ್ಯ ಕಾಲ್ತೋಡು, ಹಾಸ್ಯ ಮೂರೂರು ರಮೇಶ್ ಭಂಡಾರಿ, ಗುಂಡು ಪೂಜಾರಿ, ಬಾಣಿಗ, ಸ್ತ್ರೀವೇಷ ನೀಲ್ಕೋಡು ಶಂಕರ ಹೆಗಡೆ, ಮಂಜುನಾಥ ಕೆರವಳ್ಳಿ, ರಟ್ಟಾಡಿ ಶ್ರೀಕಾಂತ ಪೂಜಾರಿ, ವಸುಂಧರ, ಕಲಾವಿದರು ಚಿಟ್ಟಾಣಿ ಸುಬ್ರಹ್ಮಣ್ಯ ಹೆಗಡೆ, ಜಲವಳ್ಳಿ ವಿದ್ಯಾದರ ರಾವ್, ಆನಂದ ಭಟ್ ಕೆಕ್ಕಾರು, ನರಸಿಂಹ ಗಾಂವಕರ ಯಲ್ಲಾಪುರ, ಕಾರ್ತಿಕ ಭಟ್ ಕಣ್ಣಿಮನೆ, ಮಾಷಲ್ ಫರ್ನಾಂಡಿಸ್, ದಿನೇಶ್ ಪೂಜಾರಿ ಆವರ್ಸಾ, ದಾಮೋದರ ಮರಾಠಿ ನಾಗೂರು, ಕೆ.ಜಿ. ಕಾರ್ತಿಕ್, ಮಾ.ರಂಜಿತ್ ಭಾಗವಹಿಸಲಿದ್ದಾರೆ.
ಈ ಯಕ್ಷಗಾನಕ್ಕೆ ಕಲಾಭಿಮಾನಿಗಳು, ಕಲಾಪೋಷಕರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಗ್ರಾಮಸ್ಥರು ದೇವದಕೇರಿ ಇವರು ಕೋರಿರುತ್ತಾರೆ.