ಯಲ್ಲಾಪುರ: ಯಲ್ಲಾಪುರದ ತಾಲೂಕಾ ಆಸ್ಪತ್ರೆಯಲ್ಲಿ ವಿಶ್ವ ಸೇವಾ ಸಮಿತಿ ಪಿಡಿಜಿ ರೋ. ಸುಬ್ರಾವ್ ಕಾಸರಕೋಡ ಮೆಮೋರಿಯಲ್ ರೋಟರಿ ಚಾರಿಟೇಬಲ್ ಆಸ್ಪತ್ರೆ ಶಿರಸಿ, ಜಿಲ್ಲಾ ಅಂಧತ್ವ ನಿವಾರಣ ಸಂಸ್ಥೆ ಕಾರವಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರವಾರ, ತಾಲೂಕ ಆಸ್ಪತ್ರೆ ಯಲ್ಲಾಪುರ, ಗ್ರೀನ್ ಕೇರ್ (ರಿ.) ಶಿರಸಿ ಮತ್ತು ಲೈಫ್ ಲೈನ್ ಲ್ಯಾಬೋರೇಟರಿ ಯಲ್ಲಾಪುರ ಇವರ ಸಂಯುಕ್ತ ಆಶ್ರಯದಲ್ಲಿಡಿ.15ರಂದು ಉಚಿತ ಕಣ್ಣಿನ ಪೊರೆ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆಯ ಶಿಬಿರವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮವನ್ನು ರೋಟರಿ ಆಸ್ಪತ್ರೆಯ ನೇತ್ರ ತಜ್ಞರಾದ ಡಾ. ಎ. ಜಿ. ವಸ್ತ್ರದ, ಯಲ್ಲಾಪುರ ಸರ್ಕಾರಿ ಆಸ್ಪತ್ರೆಯ ನೇತ್ರ ತಜ್ಞರಾದ ಡಾ॥ ಸೌಮ್ಯ ಕೆ. ವಿ. ಮತ್ತು ಎಲ್ಲಾ ಗಣ್ಯರು ಸೇರಿ ದೀಪ ಬೆಳಗಿಸಿ ಉದ್ಘಾಟಿಸಿದರು. ಡಾ|| ಎ. ಜಿ. ವಸ್ತ್ರದ ಮಾತನಾಡಿ ಶಿಬಿರದ ಉಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕಾಗಿ ವಿನಂತಿಸಿದರು. ಡಾ॥ ಸೌಮ್ಯ ಕೆ. ವಿ. ಮಾತನಾಡಿ ಕಣ್ಣಿನ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು.
ಗ್ರೀನ್ ಕೇರ್ (ರಿ.) ಶಿರಸಿ ಸಂಸ್ಥೆಯ ಕಾರ್ಯದರ್ಶಿಗಳಾದ ಜಿತೇಂದ್ರ ಕುಮಾರ ತೋನ್ಸೆ ಮಾತನಾಡಿ ಆರೋಗ್ಯ ಸಂಬಂಧಿ ಯಾವುದೇ ಶಿಬಿರಗಳಲ್ಲಿ ನಾವು ಕೈಜೋಡಿಸುವುದಾಗಿ ತಿಳಿಸಿದರು. ರೋಟರಿ ಆಸ್ಪತ್ರೆಯ ಕಾರ್ಯಕ್ರಮ ಅಧಿಕಾರಿಗಳಾದ ಗಿರೀಶ್ ಧಾರೇಶ್ವರ ಕಣ್ಣಿನ ಪೊರೆ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರದ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಗ್ರೀನ್ ಕೇರ್ ಸಂಸ್ಥೆಯ ನಿರ್ದೇಶಕರಾದ ಮತ್ತು ಲೈಫ್ ಲೈನ್ ಲ್ಯಾಬೋರೇಟರಿ ಯಲ್ಲಾಪುರದ ಮಾಲಕರಾದ ಶ್ರೀಮತಿ ಆಶಾ ಡಿಸೋಜ ಮಾತನಾಡಿ ಯಲ್ಲಾಪುರದ ಸಂಕಲ್ಪ ಹೋಟೆಲಿನ ಎದುರುಗಡೆ ಇರುವ ಲೈಫ್ ಲೈನ್ ಲ್ಯಾಬೋರೇಟರಿಯಲ್ಲಿ ಪ್ರತಿ ತಿಂಗಳ ನಾಲ್ಕನೇ ಶನಿವಾರದಂದು ಬೆಳಿಗ್ಗೆ 9 ಗಂಟೆಯಿAದ ಮಧ್ಯಾಹ್ನ 12 ಗಂಟೆಯವರೆಗೂ ಹಿರಿಯ ನಾಗರಿಕರಿಗೆ ಉಚಿತ ರಕ್ತದೊತ್ತಡ ಮತ್ತು ಮಧುಮೇಹ ಪರೀಕ್ಷೆಯನ್ನು ನಡೆಸುವುದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ತಾಲೂಕಾ ಆಸ್ಪತ್ರೆಯ ನೇತ್ರಾಧಿಕಾರಿಗಳಾದ ಶ್ರೀಮತಿ ಪರ್ವೀನ್ ಬಾನು, ಸರಕಾರಿ ಆಸ್ಪತ್ರೆಯ ಆರ್.ಬಿ.ಎಸ್.ಕೆ ನೇತ್ರಾಧಿಕಾರಿಗಳಾದ ರವಿಚಂದ್ರ ಮನ್ನೂರ್, ಸಂತೋಷ್, ರೋಟರಿ ಆಸ್ಪತ್ರೆಯ ಕಾರ್ಯಕ್ರಮ ಸಂಯೋಜಕ ಕುಮಾರ್ ಆರ್. ಬಿ. , ಜೆ.ಕೆ. ಎಂಟರ್ಪ್ರೈಸಸ್ ವ್ಯವಸ್ಥಾಪಕರಾದ ಮಹಾಂತೇಶ್ ಪ್ರಭು, ರೋಟರಿ ಆಸ್ಪತ್ರೆಯ ಸಿಬ್ಬಂದಿಗಳು ಮತ್ತು ಸರಕಾರಿ ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ತಾಲೂಕಾ ಆಸ್ಪತ್ರೆಯ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಮಹೇಶ್ ತಾಳಿಕೋಟೆ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು. ಶಿಬಿರದಲ್ಲಿ 165 ಶಿಬಿರಾರ್ಥಿಗಳನ್ನು ತಪಾಸಣೆ ನಡೆಸಿ 75 ಶಿಬಿರಾರ್ಥಿಗಳನ್ನು ಆಯ್ಕೆ ಮಾಡಿ ಶಸ್ತ್ರಚಿಕಿತ್ಸೆಗಾಗಿ ರೋಟರಿ ಆಸ್ಪತ್ರೆಗೆ ಆಸ್ಪತ್ರೆಯ ಬಸ್ಸಿನಲ್ಲಿ ಕರೆದುಕೊಂಡು ಹೋಗಲಾಯಿತು. ಕಾರ್ಯಕ್ರಮಕ್ಕೆ ತಾಲೂಕಾ ಆರೋಗ್ಯ ಅಧಿಕಾರಿಗಳಾದ ಡಾ॥ ನರೇಂದ್ರ ಪವರ್ ಅವರು ಹಾಗೂ ಆಸ್ಪತ್ರೆಯ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಎಸ್. ಟಿ. ಭಟ್ ಸಹಕರಿಸಿದರು.