Slide
Slide
Slide
previous arrow
next arrow

ಶಾಸಕ ಭೀಮಣ್ಣ ನಾಯ್ಕ ಜನ್ಮದಿನ: ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ

300x250 AD

ಶಿರಸಿ: ಶಿರಸಿ-ಸಿದ್ದಾಪುರ ಕ್ಚೇತ್ರದ ಶಾಸಕ ಭೀಮಣ್ಣ ನಾಯ್ಕ ಅವರ ಜನ್ಮ ದಿನದ ಪ್ರಯುಕ್ತ ಗುರುವಾರ ಕಾಂಗ್ರೆಸ್ ಪಕ್ಷದ ಪ್ರಮುಖರು, ಕಾರ್ಯಕರ್ತರು ಹಾಗೂ ಅವರ ಅಭಿಮಾನಿಗಳಿಂದ ಪಂಡಿತ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.

ಪ್ರಾರಂಭದಲ್ಲಿ ಶ್ರೀ ಮಾರಿಕಾಂಬಾ ಸನ್ನಿಧಿಯಲ್ಲಿ ಭೀಮಣ್ಣ ನಾಯ್ಕ ಅವರ ಆಯುರಾರೋಗ್ಯ ಹಾಗೂ ಅಧಿಕಾರ ವೃದ್ಧಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಪಕ್ಷದ ಪ್ರಮುಖರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪಂಡಿತ್ ಆಸ್ಪತ್ರೆಗೆ ತೆರಳಿ, ಅಲ್ಲಿ ನೂರಕ್ಕೂ ಅಧಿಕ ಒಳ ಮತ್ತು‌ ಹೊರ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು.

ಪಕ್ಷದ ಪ್ರಮುಖ ಎಸ್.ಕೆ.ಭಾಗ್ವತ ಮಾತನಾಡಿ, ರಾಜ್ಯ ಮತ್ತು ನಮ್ಮ ಕ್ಷೇತ್ರದಲ್ಲಿ ತೀವ್ರ ಬರಗಾಲದ ಪರಿಸ್ಥಿತಿ ಉದ್ಭವವಾಗಿರುವುದರಿಂದ ನಮ್ಮ ನೆಚ್ಚಿನ ಶಾಸಕರು ಆಡಂಬರದ ಜನ್ಮ ದಿನ ಆಚರಣೆಗೆ ಸಮ್ಮತಿಸಿಲ್ಲ. ಆದ್ದರಿಂದ ವಿಶೇಷ ಸಂಭ್ರಮಾಚರಣೆ ನಡೆಸುವುದನ್ನು ಕೈಬಿಟ್ಟು, ಶಾಸಕರಿಗೆ ಆರೊಗ್ಯ, ಆಯಸ್ಸು ಹಾಗೂ ಇನ್ನೂ ಹೆಚ್ಚಿನ ಅಧಿಕಾರ ದೊರೆಯುವಂತೆ ಶ್ರೀಮಾರಿಕಾಂಬೆಗೆ ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥಿಸಿದ್ದೇವೆ. ಅಲ್ಲದೇ, ಪಂಡಿತ್ ಸರ್ಕಾರಿ ಆಸ್ಪತ್ರೆಯ ಹೊರ ಮತ್ತು ಒಳ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದ್ದೇವೆ ಎಂದರು.

300x250 AD

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ ಗೌಡ, ಕಿಸಾನ್ ಕಾಂಗ್ರೆಸ್ ಸಮಿತಿಯ ರಾಜ್ಯ ಕಾರ್ಯದರ್ಶಿ ಶ್ರೀಪಾದ ಹೆಗಡೆ ಕಡವೆ, ಕೆಪಿಸಿಸಿ ಸದಸ್ಯ ದೀಪಕ ದೊಡ್ಡೂರು, ಕಾಂಗ್ರೆಸ್ ಯುವ ಮುಖಂಡ ಪ್ರವೀಣ ಪಾಟೀಲ ತೆಪ್ಪಾರ ಸೇರಿದಂತೆ ಅನೇಕರಿದ್ದರು.

Share This
300x250 AD
300x250 AD
300x250 AD
Back to top