Slide
Slide
Slide
previous arrow
next arrow

ಡಿ.16ಕ್ಕೆ ಖರ್ವಾ-ನಾಥಗೇರಿ ಶಾಲೆಯ ಶತಮಾನೋತ್ಸವ

300x250 AD

ಹೊನ್ನಾವರ:ತಾಲೂಕಿನ ಖರ್ವಾ ಗ್ರಾಮ ಪಂಚಾಯತ ವ್ಯಾಪ್ತಿಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಖರ್ವಾ -ನಾಥಗೇರಿ ಇದರ ಶತಮಾನೋತ್ಸವ ಕಾರ್ಯಕ್ರಮ ಡಿ. 16ರಂದು ಅದ್ದೂರಿಯಾಗಿ ನಡೆಯಲಿದೆ ಎಂದು ಶತಮಾನೋತ್ಸವ ಸಮಿತಿ ಅಧ್ಯಕ್ಷ ರಾಮಪ್ಪ ನಾಯ್ಕ ಹೇಳಿದರು‌.

ಖರ್ವಾ -ನಾಥಗೇರಿಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಆವಾರದಲ್ಲಿ ಮಾಧ್ಯಮದವರಿಗೆ ಅವರು ಮಾಹಿತಿ ನೀಡಿದ ಅವರು, ನಾಥಗೇರಿಯ ನಾಗಪ್ಪ ನಾಯ್ಕರ ಮನೆಯ ಮಹಡಿಯ ಮೇಲೆ ಸುಮಾರು 28 ವರ್ಷಗಳ ಕಾಲ ಶಾಲೆ ನಡೆದಿತ್ತು‌. ತದನಂತರ ಅವರದೇ ಮಾಲ್ಕಿ ಜಾಗದ ಬಯಲು ಪ್ರದೇಶದಲ್ಲಿ 1956ರಲ್ಲಿ ಶಾಲೆ ನಿರ್ಮಾಣವಾಗಿ ಆರಂಭವಾಯಿತು. ಇದೀಗ ಶಾಲೆ ಶತಮಾನೋತ್ಸವ ಆಚರಿಸಿಕೊಳ್ಳುತ್ತಿದ್ದು ಕಾರ್ಯಕ್ರಮಕ್ಕೆ ಎಲ್ಲಾ ದಾನಿಗಳು,ಶಿಕ್ಷಣ ಪ್ರೇಮಿಗಳು,ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಸೇರಿದಂತೆ ಗ್ರಾಮದ ಸುತ್ತಮುತ್ತಲಿನ ಎಲ್ಲಾ ಧರ್ಮದವರು ಸಹಕರಿಸುತ್ತಿದ್ದಾರೆ ಎಂದರು

ಶಾಲಾ ಎಸ್ ಡಿ ಎಮ್ ಸಿ ಅಧ್ಯಕ್ಷ ವೆಂಕಟೇಶ ನಾಯ್ಕ ಮಾತನಾಡಿ, ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿ ಅವರು ಘನ ಉಪಸ್ಥಿತಿ ವಹಿಸಲಿದ್ದಾರೆ. ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳ ವೈದ್ಯ ಅವರು ವಸ್ತು ಪ್ರದರ್ಶನ ಸ್ಮಾರ್ಟ್ ಕ್ಲಾಸ್ ಹಾಗೂ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪನವರಿಂದ ಧ್ವಜಸ್ತಂಭ ಉದ್ಘಾಟನೆ ಮತ್ತು ಸ್ಮರಣ ಸಂಚಿಕೆ ಹಾಗೂ ಹಸ್ತಪತ್ರಿಕೆ ಬಿಡುಗಡೆ ನಡೆಯಲಿದೆ. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಧರ್ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲೆಯ ಸಂಸದರು,ಶಾಸಕರು,ವಿಧಾನ ಪರಿಷತ್ ಸದಸ್ಯರು,ಖರ್ವಾ ಗ್ರಾಮ ಪಂಚಾಯತನ ಜನಪ್ರತಿನಿಧಿಗಳು ಅಧಿಕಾರಿ ವರ್ಗದವರು ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ ಎಂದರು.

300x250 AD

ಶತಮಾನೋತ್ಸವ ಸಮಿತಿ ಕಾರ್ಯದರ್ಶಿ ಮೋಹನ್ ನಾಯ್ಕ ಮಾತನಾಡಿ, ಡಿಸೆಂಬರ್ 16ರ ಬೆಳಿಗ್ಗೆ 10 ಗಂಟೆಗೆ ಮೆರವಣಿಗೆ, ಪೂರ್ಣಕುಂಭ ಸ್ವಾಗತ,ಶಾಲಾ ಮಕ್ಕಳಿಂದ ಸ್ವಾಗತ ನೃತ್ಯ ಸಭಾ ಕಾರ್ಯಕ್ರಮ ನಡೆಯಲಿದೆ. ಸ್ಥಳದಾನಿಗಳ ಸಂಸ್ಮರಣೆ,ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರುಗಳಿಗೆ ಸನ್ಮಾನ ನಡೆಯಲಿದೆ. ಮಧ್ಯಾಹ್ನ 4 ಗಂಟೆಯಿಂದ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ. ರಾತ್ರಿ 8ರಿಂದ ಸ್ಥಳೀಯ ಕಲಾವಿದರಿಂದ ರಸಮಂಜರಿ,ರಾತ್ರಿ 9 ರಿಂದ ಹವ್ಯಾಸಿ ಮತ್ತು ಅತಿಥಿ ಕಲಾವಿದರಿಂದ ನಾಟಕ ನಡೆಯಲಿದ್ದು ಅದ್ದೂರಿಯಾಗಿ ಶತ ಸಂಭ್ರಮ ಆಚರಣೆ ನಡೆಯಲಿದೆ ಎಂದು ಕಾರ್ಯಕ್ರಮದ ವಿವರ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ಶ್ರೀಧರ್ ನಾಯ್ಕ, ಶತಮಾನೋತ್ಸವ ಸಮಿತಿ ಪದಾಧಿಕಾರಿಗಳಾದ ಗಜಾನನ ನಾಯ್ಕ,ಜೇಮ್ಸ್ ಲೋಪಿಸ್, ಸತ್ಯಪ್ಪ ನಾಯ್ಕ, ನಾರಾಯಣ ಗೌಡ, ಸತೀಶ್ ನಾಯ್ಕ, ತಿಲಕ್ ನಾಯ್ಕ, ಮಹಾಬಲೇಶ್ವರ ನಾಯ್ಕ, ರಾಮಕೃಷ್ಣ ನಾಯ್ಕ,ಗಣಪತಿ ಹಳ್ಳೇರ, ಪ್ರಕಾಶ್ ಡಯಾಸ್, ಮುಕ್ತರ್ ಲಕ್ಷ್ಮಣ ನಾಯ್ಕ ಮತ್ತಿತರಿದ್ದರು.

Share This
300x250 AD
300x250 AD
300x250 AD
Back to top