Slide
Slide
Slide
previous arrow
next arrow

ಸಂಸ್ಕೃತಿ, ಸಂಸ್ಕಾರದ ಜೊತೆ ಮಹಿಳೆಯರನ್ನು ಸಂಘಟಿಸುವ ಮಹತ್ಕಾರ್ಯ ಶ್ಲಾಘನೀಯ: ಎಂ.ಗುರುರಾಜ

300x250 AD

ಯಲ್ಲಾಪುರ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹಿಳೆಯರನ್ನು ಸಂಘಟಿತರಾಗಿಸುವಲ್ಲಿ ಹಾಗೂ ಸ್ವಾವಲಂಬಿಯಾಗಿಸುವಲ್ಲಿ ಶ್ರಮಿಸುತ್ತಿದೆ ಎಂದು ತಹಸೀಲ್ದಾರ ಎಂ. ಗುರುರಾಜ ಹೇಳಿದರು.

ಅವರು ಪಟ್ಟಣದ ಅಡಕೆ ಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದ ಅಡಿಯಲ್ಲಿ ಆಯೋಜಿಸಿದ್ದ ಮಹಿಳಾ ವಿಚಾರ ಗೋಷ್ಠಿ ಉದ್ಘಾಟಿಸಿ ಮಾತನಾಡಿದರು. ಸಂಸ್ಕೃತಿ, ಸಂಸ್ಕಾರದಿಂದ ಕೂಡಿದ ಬದುಕು ನಮ್ಮದಾಗಬೇಕು. ಅಂತಹ ಸಂಸ್ಕೃತಿ, ಸಂಸ್ಕಾರದ ಜತೆಗೆ ಮಹಿಳೆಯರನ್ನು ಸಂಘಟಿಸುವ ಮಹತ್ಕಾರ್ಯವನ್ನು ಯೋಜನೆ ಮಾಡುತ್ತಿರುವುದು ಶ್ಲಾಘನೀಯ ಎಂದರು.

ವಿಶ್ವ ಮಾನವ ಹಕ್ಕು ಆಯೋಗ ಆರ್.ಕೆ.ಫೌಂಡೇಷನ್ ಜಿಲ್ಲಾಧ್ಯಕ್ಷೆ ಅರ್ಚನಾ ನಾಯಕ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಮಾತನಾಡಿ ಮಹಿಳೆಯರಿಗೆ ಎಲ್ಲೇ ಅನ್ಯಾಯ ಆದರೂ ಕಾನೂನಾತ್ಮಕವಾಗಿ ನ್ಯಾಯ ದೊರಕಿಸಿಕೊಡಲು ನಮ್ಮ ತಂಡ ಶ್ರಮಿಸುತ್ತಿದೆ. ಮಹಿಳೆಯರು ಕಾನೂನಿನ ಕುರಿತು ಸರಿಯಾದ ತಿಳುವಳಿಕೆ ಹೊಂದಬೇಕು. ಮಹಿಳೆಯರು ಒಗ್ಗಟ್ಟಾದಾಗ ಮಾತ್ರ ಸಮಾಜದಲ್ಲಿ ಗೌರವಯುತವಾದ ಜೀವನ ನಡೆಸಲು ಸಾಧ್ಯ ಎಂದರು. ಕಾನೂನು ಅರಿವು ಮತ್ತು ಮಹಿಳಾ ಸಬಲೀಕರಣದಲ್ಲಿ ಮಹಿಳೆಯರ ಪಾತ್ರದ ಕುರಿತು ವಿವರಿಸಿದರು.
ಪ.ಪಂ ಮಾಜಿ ಅಧ್ಯಕ್ಷೆ ಸುನಂದಾ ದಾಸ್ ಅಧ್ಯಕ್ಷತೆ ವಹಿಸಿದ್ದರು. ಯೋಜನೆಯ ಜಿಲ್ಲಾ ನಿರ್ದೇಶಕ ಎ.ಬಾಬು ನಾಯ್ಕ ಮಾತನಾಡಿ, ಮಹಿಳೆಯರ ಸಬಲೀಕರಣಕ್ಕೆ ಯೋಜನೆಯಿಂದ ಕೈಗೊಳ್ಳುತ್ತಿರುವ ಕಾರ್ಯಕ್ರಮಗಳ ಬಗೆಗೆ ವಿವರಿಸಿದರು. ಇಂದೂರು ಆರ್.ಕೆ.ಎನ್ ಕಾನ್ವೆಂಟ್ ಸ್ಕೂಲ್ ಮುಖ್ಯಾಧ್ಯಾಪಕಿ ಸಿಂಧು ನಾಯರ್ ಅವರು ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯ ಪಾತ್ರದ ಕುರಿತು ಮಾತನಾಡಿದರು.

300x250 AD

ಸಿಪಿಐ ರಂಗನಾಥ ನೀಲಮ್ಮನವರ್, ತಾ.ಪಂ ಮಾಜಿ ಅಧ್ಯಕ್ಷೆ ಚಂದ್ರಕಲಾ ಭಟ್ಟ, ಪಿಎಸ್ಐ ನಸ್ರೀನ್ ತಾಜ್ ಚಟ್ಟರಕಿ, ನೇತ್ರ ತಜ್ಞೆ ಡಾ.ಸೌಮ್ಯಾ ಕೆ.ವಿ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಬಸವರಾಜ ನಡುವಿನಮನಿ, ಯೋಜನಾಧಿಕಾರಿ ಹನುಮಂತ ನಾಯ್ಕ ಇದ್ದರು. ವೆಂಕಟೇಶ ಗೌಡ ನಿರ್ವಹಿಸಿದರು.
ಕಾರ್ಯಕ್ರಮದ ಪ್ರಯುಕ್ತ ಪುಷ್ಪಗುಚ್ಛ ಸ್ಪರ್ಧೆ, ಆರತಿ ತಟ್ಟೆ ಸ್ಪರ್ಧೆ, ಸ್ವ ಉದ್ಯೋಗ ಮಳಿಗೆಗಳು ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

Share This
300x250 AD
300x250 AD
300x250 AD
Back to top