ಹಳಿಯಾಳ : ಪಟ್ಟಣದ ಶ್ರೀ.ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ನ ವಿಮಲ ವಿ. ದೇಶಪಾಂಡೆ ಸ್ಕೂಲ್ ಆಫ್ ಎಕ್ಸಲೆನ್ಸ್ ನ ವಿದ್ಯಾರ್ಥಿಗಳು ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನ ವೀಕ್ಷಿಸಲು ಸುವರ್ಣಸೌಧಕ್ಕೆ ಆಗಮಿಸಿದ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಶಾಸಕರಾದ ಆರ್.ವಿ.ದೇಶಪಾಂಡೆ ಸಂವಾದ ನಡೆಸಿದರು.
ಈ ಸಂದರ್ಭದಲ್ಲಿ ಶಾಸಕಾಂಗ ಕಲಾಪದ ಕುರಿತು ಅರಿವು ಮೂಡಿಸುವುದರೊಂದಿಗೆ ಮಕ್ಕಳಲ್ಲಿನ ಕುತೂಹಲಗಳಿಗೆ ಆರ್.ವಿ.ದೇಶಪಾಂಡೆಯವರು ಉತ್ತರಿಸಿ ವಿಧಾನಸಭಾ ಕಲಾಪದ ಸಂಕ್ಷಿಪ್ತ ಚಿತ್ರಣ ನೀಡಿದರು.
ಈ ವೇಳೆಯಲ್ಲಿ ಸ್ಕೂಲ್ ಸಿಬ್ಬಂದಿಗಳಾದ ಸಂಗೀತಾ ಮೇಲಗೇರಿ, ನೆಲ್ಸಿ ಗೊನ್ಸಲೀಸ್ ಹಾಗೂ ಪ್ರಸ್ಸನ್ನ ನಾಯ್ಕ ಉಪಸ್ಥಿತರಿದ್ದರು.