ಯಲ್ಲಾಪುರ: ಶಿಕ್ಷಣ ಇಲಾಖೆಯಿಂದ ನಡೆದ ಜಿಲ್ಲಾ ಮಟ್ಟದ ವಿಕಲಚೇತನ ಮಕ್ಕಳ ಕ್ರೀಡಾಕೂಟದಲ್ಲಿ ತಾಲೂಕಿನ 6 ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಸಾಧನೆ ಮಾಡಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವೈಟಿಎಸ್ಎಸ್ ಪ್ರೌಢಶಾಲೆಯ ಜಯಶ್ರೀ ಮಂಜುನಾಥ ಮೈಲಾರ ಗುಂಡು ಎಸೆತ ಮತ್ತು ಭರ್ಜಿ ಎಸೆತದಲ್ಲಿ ಪ್ರಥಮ, ಪಟ್ಟಣದ ಸರ್ಕಾರಿ ಮಾದರಿ ಶಾಲೆಯ ಜೈಬುನ್ನಿಸಾ ಅಬ್ದುಲ್ ಕರೀಂ ಖಾನ್ ಉದ್ದ ಜಿಗಿತದಲ್ಲಿ ಪ್ರಥಮ, 50 ಮೀಟರ್ ಓಟದಲ್ಲಿ ದ್ವಿತೀಯ, ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸೃಷ್ಟಿ ವಿನಾಯಕ ಗೌಡ ಭರ್ಜಿ ಎಸೆತದಲ್ಲಿ ಪ್ರಥಮ, ಗುಂಡು ಎಸೆತದಲ್ಲಿ ದ್ವಿತೀಯ, ಮದರ್ ತೆರೆಸಾ ಶಾಲೆಯ ಅಬ್ದುಲ್ ಮತೀನ್ ಸಲೀಂ ಶೇಖ್ ಉದ್ದ ಜಿಗಿತದಲ್ಲಿ ಪ್ರಥಮ, 50 ಮೀ ಓಟದಲ್ಲಿ ದ್ವಿತೀಯ, ಕಿರವತ್ತಿ ಕೆಪಿಎಸ್ ಪ್ರೌಢಶಾಲೆಯ ಕಾಮಾಕ್ಷಿ ಶಿವಾಜಿ ಕಾಂಬಳೆ ಗುಂಡು ಎಸೆತದಲ್ಲಿ ಪ್ರಥಮ, ಭರ್ಜಿ ಎಸೆತದಲ್ಲಿ ದ್ವಿತೀಯ, ವೈಟಿಎಸ್ಎಸ್ ಪ್ರೌಢಶಾಲೆಯ ಸುಮಾನ ಮುಲ್ಲಾ ಸಮೀರ್ ಗುಂಡು ಎಸೆತ ಹಾಗೂ ಭರ್ಜಿ ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ರಾಜ್ಯಮಟ್ಟದ ಕ್ರೀಡಾಕೂಟದಲ್ಲಿಯೂ ಈ ವಿದ್ಯಾರ್ಥಿಗಳು ಸಾಧನೆ ಮಾಡಲೆಂದು ಬಿಇಒ ಎನ್.ಆರ್.ಹೆಗಡೆ, ದೈಹಿಕ ಶಿಕ್ಷಣ ಪರಿವೀಕ್ಷಕ ಪ್ರಕಾಶ ತಾರೀಕೊಪ್ಪ, ಬಿ ಆರ್ ಸಿ ಸಮನ್ವಯಾಧಿಕಾರಿ ಸಂತೋಷಕುಮಾರ ಜಿಗಳೂರ, ಬಿಐಇಆರ್.ಟಿಗಳಾದ ದಿಲೀಪ ದೊಡ್ಮನಿ, ಎಂ.ಎ.ಬಾಗೇವಾಡಿ ಇತರರು ಹಾರೈಸಿದ್ದಾರೆ.