Slide
Slide
Slide
previous arrow
next arrow

ಕಲಾಪದ ವೇಳೆ ಅಶ್ರುವಾಯು ಸಿಡಿಸಿದ ಇಬ್ಬರು ವಶಕ್ಕೆ

300x250 AD

ನವದೆಹಲಿ: ಲೋಕಸಭೆ ಪ್ರವೇಶಿಸಿ ಇದ್ದಕ್ಕಿದ್ದಂತೆಯೇ ಅಶ್ರುವಾಯು ಸಿಡಿಸಿ ಆತಂಕ ಸೃಷ್ಟಿಸಿದ್ದ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆಯಲಾದ ಘಟನೆ ವರದಿಯಾಗಿದೆ.

ಇಬ್ಬರು ಯುವಕರು ಗ್ಯಾಲರಿಯಿಂದ ಜಿಗಿದು ಅನಿಲ ಹೊರಸೂಸುವಂಥ ವಸ್ತುವನ್ನು ಎಸೆದಿದ್ದಾರೆ. ಇದರಿಂದಾಗಿ ಆತಂಕ ಸೃಷ್ಟಿಯಾಗಿದ್ದು, ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಗಿದೆ. ಇದು ಭದ್ರತಾ ಲೋಕ ಎಂದು ಕಾಂಗ್ರೆಸ್ ನಾಯಕ ಅಧೀ‌ರ್ ರಂಜನ್ ಚೌಧರಿ ಹೇಳಿದ್ದಾರೆ.

300x250 AD

ಒಬ್ಬ ವ್ಯಕ್ತಿಯ ಹೆಸರು ಸಾಗರ್ ಎಂದು ಬಿಎಸ್‌ಪಿ ಸಂಸದ ಡ್ಯಾನಿಷ್ ಅಲಿ ಮಾಹಿತಿ ನೀಡಿದ್ದಾರೆ.೨೦ ವರ್ಷದ ಯುವಕರಿಬ್ಬರು ಇದ್ದಕ್ಕಿದ್ದಂತೆಯೇ ಸಂದರ್ಶಕರ ಗ್ಯಾಲರಿಯಿಂದ ಹೊರಬಂದಿದ್ದಾರೆ. ಸ್ಪೀಕರ್ ಕುರ್ಚಿ ಬಳಿ ಹೋಗಲು ಯತ್ನಿಸಿದ್ದಾರೆ. ಆ ಹೊಗೆ ವಿಷಕಾರಿಯೂ ಇರಬಹುದು ಎಂದು ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಆತಂಕ ವ್ಯಕ್ತಪಡಿಸಿದ್ದಾರೆ.

Share This
300x250 AD
300x250 AD
300x250 AD
Back to top