Slide
Slide
Slide
previous arrow
next arrow

ಸಿಂಗಪೂರ್‌ನಲ್ಲಿ ನಡೆಯುವ 2ನೇ ವಿಶ್ವಕನ್ನಡ ಹಬ್ಬ: ಕದಂಬ ಕಲಾ ವೇದಿಕೆಯ ಇಬ್ಬರು ಗಾಯಕರು ಆಯ್ಕೆ

300x250 AD

ಶಿರಸಿ: ಸಿಂಗಪೂರ್‌ನಲ್ಲಿ ನಡೆಯುವ ಎರಡನೇ ವಿಶ್ವಕನ್ನಡ ಹಬ್ಬಕ್ಕೆ ಶಿರಸಿಯ ಕದಂಬ ಕಲಾ ವೇದಿಕೆಯ ಇಬ್ಬರು ಗಾಯಕರು ಆಯ್ಕೆಯಾಗಿದ್ದು, ಉ.ಕ ಜಿಲ್ಲೆಯನ್ನು ಪ್ರತಿನಿಧಿಸಲು ನಮಗೆ ಅವಕಾಶ ದೊರೆತಿರುವುದು ಸಂತಸದ ಸಂಗತಿ ಎಂದು ಕದಂಬ ಕಲಾ ವೇದಿಕೆಯ ಅಧ್ಯಕ್ಷ ರತ್ನಾಕರ ನಾಯ್ಕ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ಬುಧವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಕುರಿತು ಮಾಹಿತಿ ನೀಡಿದರು. ಸಾವಿರಾರು ಜನ ಕನ್ನಡಿಗರ ಕೂಡುವಿಕೆಯಲ್ಲಿ ಕಳೆದ ಬಾರಿ ದುಬೈನಲ್ಲಿ ಆಯೋಜಿಸಲಾಗಿದ್ದ ಮೊದಲನೇ ವಿಶ್ವಕನ್ನಡ ಸಮ್ಮೇಳನವು ಅತ್ಯಂತ ಯಶಸ್ವಿಯಾದ ಹಿನ್ನಲೆಯಲ್ಲಿ, ಈ ಬಾರಿಯೂ ಕೂಡ ಬೆಂಗಳೂರಿನ ಕರ್ನಾಟಕ ಪ್ರೆಸ್‌ಕ್ಲಬ್‌ ಕೌನ್ಸಿಲ್ ವತಿಯಿಂದ ಸಿಂಗಪೂರದಲ್ಲಿ ಎರಡನೇ ವಿಶ್ವಕನ್ನಡ ಹಬ್ಬವನ್ನು ಏಪ್ರಿಲ್‌ನಲ್ಲಿ ಆಯೋಜಿಸಲಾಗಿದೆ ಎಂದರು.

ಈ ಅಭೂತಪೂರ್ವ ಕಾರ್ಯಕ್ರಮಕ್ಕೆ ಜಿಲ್ಲೆಯಿಂದ ಶಿರಸಿಯ ಕದಂಬ ಕಲಾ ವೇದಿಕೆ ತಂಡದ ಸುಗಮ ಸಂಗೀತ ಹಾಗೂ ಚಲನಚಿತ್ರ ಗಾಯಕರಾದ ಶಿರಸಿ ರತ್ನಾಕರ ಹಾಗೂ ದಿವ್ಯಾ ಶೇಟ್‌ ಆಯ್ಕೆಯಾಗಿದ್ದು, ಸಿಂಗಪೂರ್‌ನಲ್ಲಿ ನಡೆಯುವ ವಿಶ್ವಕನ್ನಡ ಸಮ್ಮೇಳನದಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಿ, ಗಾಯನ ಮಾಡಲಿದ್ದೇವೆ ಎಂದು ತಿಳಿಸಿದರು.

ಈ ಸಮ್ಮೇಳನದಲ್ಲಿ ಖ್ಯಾತ ತತ್ವಜ್ಞಾನಿ ಶ್ರೀ ಸದ್ಗುರು ವಾಸುದೇವ, ಮೈಸೂರು ಮಹಾರಾಜರು, ಖ್ಯಾತ ಚಲನಚಿತ್ರ ನಟ ಡಾ.ಶಿವರಾಜಕುಮಾರ ಮುಂತಾದ ಅನೇಕ ಗಣ್ಯರು ಪಾಲ್ಗೊಳ್ಳಲ್ಲಿದ್ದು, ನಾಡಿನ ಸುಪ್ರಸಿದ್ದ ಗಾಯಕರು, ಕವಿ-ಸಾಹಿತಿಗಳು, ವಾದ್ಯಗಾರರು ಸೇರಿದಂತೆ 300 ಕ್ಕೂ ಅಧಿಕ ಕಲಾವಿದರು ಈ ವಿಶ್ವಕನ್ನಡ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

300x250 AD

ಇದೇ ಬರುವ ಡಿ.27 ರಂದು ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ವಿಶ್ವಕನ್ನಡ ಹಬ್ಬದ ಲೋಗೋವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಿಡುಗಡೆಗೊಳಿಸಲಿದ್ದಾರೆ. ಶಿರಸಿಯಲ್ಲಿಯೂ ಕೂಡ ವಿಶ್ವಕನ್ನಡ ಹಬ್ಬದ ಪೋಸ್ಟರ್‌ ಬಿಡುಗಡೆಗೊಳಿಸಲಿದ್ದೇವೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕದಂಬ ಕಲಾ ವೇದಿಕೆಯ ಖ್ಯಾತ ಗಾಯಕಿ ದಿವ್ಯಾ ಶೇಟ್, ಪ್ರಮುಖರಾದ ವಿಘ್ನೇಶ್ವರ ಹೆಗಡೆ, ಜ್ಯೋತಿ ರತ್ನಾಕರ, ಲಕ್ಷ್ಮಣ ಶೇಟ್, ನಯನಾ ನಾಯ್ಕ ಇದ್ದರು.

Share This
300x250 AD
300x250 AD
300x250 AD
Back to top