ಹೊನ್ನಾವರ : ತಾಲೂಕಿನ ಗುಣವಂತೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾಳ್ಕೋಡ್ ಗುಣವಂತೆ ರಸ್ತೆಯಿಂದ ಮಾರುತಿ ಸುಜುಕಿ ಕಾರೊಂದು, ಹೊನ್ನಾವರ ಕಡೆ ನುಗ್ಗಿದಾಗ ಮಂಗಳೂರಿನ ಕಡೆಯಿಂದ ಬರುತ್ತಿರುವ ಗ್ಯಾಸ್ ಟ್ಯಾಂಕರ್ ಕಾರಿಗೆ ಗುದ್ದಿದ ಪರಿಣಾಮ ಟ್ಯಾಂಕರ್ ಅಲ್ಲೇ ಪಲ್ಟಿಯಾಗಿದ್ದು, ಅಲ್ಲೇ ರಸ್ತೆಯ ಪಕ್ಕದಲ್ಲಿ ನಿಂತಿದ್ದ 3 ವಾಹನಗಳಿಗೆ ತಾಗಿ ಅವು ಪರಸ್ಪರ ಗುದ್ದಿಕೊಂಡಿದೆ.
ಗುಣವಂತೆ ಜನನಿಬೀಡಿನ ಪ್ರದೇಶವಾಗಿದ್ದು, ವ್ಯಾಪಾರ ವ್ಯವಹಾರ, ಪ್ರಯಾಣಕ್ಕೆ ಜನರು ಓಡಾಡುತ್ತಿರುತ್ತಾರೆ. ಹೀಗಿರುವಾಗ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಆಗಿಲ್ಲ. ಟ್ಯಾಂಕರ್ ಚಾಲನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಹೊನ್ನಾವರದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ರಸ್ತೆಯ ಪಕ್ಕದಲ್ಲಿ ನಿಂತ ಉಳಿದ 3 ವಾಹನದ ಚಾಲಕರು ಹಾಗೂ ಹಮಾಲಿಗಳು ಊಟಕ್ಕೆ ಹೋಗಿದ್ದ ಕಾರಣ ಬಚಾವ್ ಆಗಿದ್ದಾರೆ. ಕಾರಿನೊಳಗಿದ್ದ ಕಾರವಾರ ಹಲ್ಕಾರಿನ ಒಂದಿಷ್ಟು ಜನ ಪ್ರಾಣಪಾಯದಿಂದ ಬಚಾವ್ ಆಗಿದ್ದಾರೆ. ತುಂಬಿದ ಗ್ಯಾಸ್ ಟ್ಯಾಂಕ್ ಇದಾಗಿದ್ದು ಮಂಗಳೂರಿನಿಂದ ಗೋವಾಕ್ಕೆ ಹೋಗುತಿತ್ತು. ತುಂಬಿದ ಟ್ಯಾಂಕರ್ ಪಲ್ಟಿ ಹೊಡೆದರು ಯಾವುದೇ ಹೆಚ್ಚಿನ ಅಪಾಯ ಆಗದೇ ಗುಣವಂತೆಯಲ್ಲಿ ಬಾರಿ ಅನಾಹುತ ತಪ್ಪಿದೆ. ಸ್ಥಳಕ್ಕೆ ಮಂಕಿ ಠಾಣೆಯ ಪೊಲೀಸ್ ಸಿಬ್ಬಂದಿಗಳು, ಅಗ್ನಿಶಾಮಕ ಸಿಬ್ಬಂದಿ ತಂಡ ಸ್ಥಳಕ್ಕೆ ಆಗಮಿಸಿದೆ. ಹೆಚ್ಚಿನ ಸುರಕ್ಷತೆಯ ಕಾರಣಕ್ಕೆ ಅಕ್ಕ ಪಕ್ಕದ ಅಂಗಡಿ ಬಾಗಿಲು ಹಾಕಿಸಲಾಗಿದೆ.