ಕಾರವಾರ: ಇಲ್ಲಿನ ರವೀಂದ್ರನಾಥ ಟ್ಯಾಗೋರ ಕಡಲ ತೀರದಲ್ಲಿ ಡಿ. 20ರಿಂದ 24ವರೆಗೆ “ಕರಾವಳಿ ಸಾಂಸ್ಕೃತಿಕ ಉತ್ಸವ” ಆಯೋಜಿಸಲಾಗಿದೆ ಎಂದು ಜನಸ್ಪಂದನ ಸೇವಾ ಸಂಘದ ಅಧ್ಯಕ್ಷ ಗೌರೀಶ ನಾಯ್ಕ ಹೇಳಿದರು.
ಅವರು ನಗರದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಸ್ಥಳೀಯ ಜನಸ್ಪಂದನ ಸೇವಾ ಸಂಘ ಹಾಗೂ ಕರಾವಳಿ ಸಾಂಸ್ಕೃತಿಕ ಉತ್ಸವ ಸಮಿತಿಯು ಆಯೋಜಿಸಿದ್ದು, 5 ದಿನ ಉತ್ಸವ ನಡೆಯಲಿದೆ. ಇದಕ್ಕೂ ಪೂರ್ವ ಡಿ. 10 ರಿಂದ ಒಂದು ತಿಂಗಳವರೆಗೆ ಟ್ಯಾಗೋರ್ ಕಡಲತೀರದಲ್ಲಿ ಅತ್ಯಾಕರ್ಷಕ ಅಮ್ಯುಸ್ಟೆಂಟ್ ಪಾರ್ಕ್ ಹಾಗೂ ಅಂಗಡಿ ಮಳಿಗೆಗಳನ್ನು ನಿರ್ಮಾಣ ಮಾಡಲಾಗುತ್ತದೆ ಎಂದರು.
ಬಾಲಿವುಡ್ ಪ್ಲೇ ಬ್ಯಾಕ್ ಸಿಂಗರ್ ಹಾಗೂ ಇಂಡಿಯನ್ ಐಡಲ್ ಖ್ಯಾತಿಯ ನಿಹಾಲ್ ತೌರೋ ಮುಂಬೈ ಅವರಿಂದ, ಬಾರಿಸು ಕನ್ನಡ ಡಿಂಡಿಮವ ಖ್ಯಾತಿಯ ಕನ್ನಡ ಪ್ಲೇ ಬ್ಯಾಕ್ ಸಿಂಗರ್ ಪಂಚಮ ಜೀವಾ ಅವರಿಂದ, ಬಾಲಿವುಡ್ ಜೋಸ್ನಾ ಮುಂಬೈ ಮತ್ತು ತಂಡದಿಂದ, ಕನ್ನಡದ ಕೋಗಿಲೆ ಖ್ಯಾತಿಯ ದಿವ್ಯ ರಾಮಚಂದ್ರ ಹಾಗೂ ಅವರ ತಂಡದವರಿಂದ ಗಾಯನ ಕಾರ್ಯಕ್ರಮ ಇರುತ್ತದೆ. ಮಂಗಳೂರು, ಉಡುಪಿ, ಕುಂದಾಪುರ, ಗೋವಾ, ಕೇರಳದ ರಾಷ್ಟ್ರಮಟ್ಟ ನೃತ್ಯ ಕಲಾ ತಂಡದವರಿಂದ “ಡಾನ್ಸ್ ಧಮಾಕಾ”, ಸ್ಥಳಿಯ ಕಲಾವಿದರಿಂದ ಕಾಲ ಪ್ರದರ್ಶನ, ಜಿಲ್ಲಾ ಮಟ್ಟದ ಗಾಯನ ಸ್ಪರ್ಧೆ, ಭರತನಾಟ್ಯ ಯಕ್ಷಗಾನ ಹಾಗೂ ಉತ್ತರ ಕನ್ನಡ ಜಿಲ್ಲೆಯ ಸಂಸ್ಕೃತಿಯ ಅನುಗುಣವಾಗಿ ರೂಪಕ ನೃತ್ಯ ಕೂಡ ಈ ಒಂದು ಐದು ದಿನದ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ರೂಪದಲ್ಲಿ ಕಲೆಯ ಪ್ರದರ್ಶನ ಉತ್ತರ ಕನ್ನಡದ ಜಿಲ್ಲೆಯ ಜನರಿಗಾಗಿ ನಡೆಸಲಾಗುವುದು ಎಂದು ಹೇಳಿದರು.
ಕರಾವಳಿ ಸಾಂಸ್ಕೃತಿಕ ಉತ್ಸವದ ಗೌರವಧ್ಯಕ್ಷರಾಗಿ ಸ್ಥಳೀಯ ಶಾಸಕ ಸತೀಶ್ ಸೈಲ್ ವಹಿಸಿಕೊಂಡಿದ್ದು, ಉಸ್ತುವಾರಿ ಸಚಿವ ಹಾಗೂ ಮೀನುಗಾರಿಕಾ ಹಾಗೂ ಬಂದರು ಇಲಾಖೆ ಸಚಿವ ಮಂಕಾಳ ವೈದ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅಧ್ಯಕ್ಷರಾಗಿ ಎಂಎಲ್‌ಸಿ ಗಣಪತಿ ಉಳ್ವೇಕರ್ ಆಗಮಿಸಲಿದ್ದಾರೆ. ಸ್ಥಳೀಯ ಕಲಾವಿದರು ತಮ್ಮ ಕಲಾ ಪ್ರದರ್ಶನ ಪ್ರದರ್ಶಿಸಲು ಇಚ್ಛೆ ಉಳ್ಳವರು ಹಾಗೂ ಜಿಲ್ಲಾಮಟ್ಟದ ಗಾಯನ ಸ್ಪರ್ಧೆಗೆ ನೋಂದಣಿಯನ್ನು ಪಡೆಯಲುTel:+919483613834,Tel:+919632013442 ದೂರವಾಣಿ ಸಂಪರ್ಕಿಸಲು ಕೋರಿದರು.
ಅಭಿಲಾಷ ತಾಮ್ಸೆ, ಪ್ರೀತೇಷ ವಾಲ್ಮಿಕಿ, ಕಿರಣ ಬಡಗೇರ, ಚಂದ್ರಕಾಂತ ನಾಗೊಳ್ಳಿ, ರಮೇಶ, ಪ್ರೇಮ್ ಪಡ್ನೆಕರ, ಸುಭಾಸ ನಾಯ್ಕೋಡಿ, ಪ್ರಜ್ವಲ್ ಕೊಳಂಬಕರ ಇದ್ದರು.