Slide
Slide
Slide
previous arrow
next arrow

ಕಲೋತ್ಸವ: ಲಯನ್ಸ್  ಮಡಿಲಿಗೆ ಬಹುಮಾನಗಳ  ಸುರಿಮಳೆ

300x250 AD

ಶಿರಸಿ: ಭಾರತ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಸಚಿವಾಲಯ 9 ನೇ ತರಗತಿಯಿಂದ 12ನೇ ತರಗತಿಯ ಮಕ್ಕಳಿಗಾಗಿ ರಾಷ್ಟ್ರಮಟ್ಟದಲ್ಲಿ ನಡೆಸುವ ಕಲಾ ಉತ್ಸವ 2023-24ನೇ ಸಾಲಿನ ಜಿಲ್ಲಾ ಮಟ್ಟದ ಫಲಿತಾಂಶಗಳು ಪ್ರಕಟವಾಗಿದ್ದು
ಶಿರಸಿ ಲಯನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ದಾಖಲಾರ್ಹ ಸಾಧನೆ ಮೆರೆದಿದ್ದಾರೆ. 10 ಸ್ಪರ್ಧೆಗಳಲ್ಲಿ ಭಾಗವಹಿಸಿ 10 ಬಹುಮಾನಗಳನ್ನು  ತಮ್ಮದಾಗಿಸಿಕೊಂಡಿದ್ದು, 7 ಪ್ರಥಮ ಸ್ಥಾನ ಮತ್ತು 3 ದ್ವಿತೀಯ  ಸ್ಥಾನ ಪಡೆದಿದ್ದಾರೆ.

ದೃಶ್ಯ ಕಲೆಯಲ್ಲಿ(ಮೂರು ಆಯಾಮ) ಧನುಷ್ ನಾಯ್ಕ ಪ್ರಥಮ, ರಿಷಿಕಾ ಪ್ರಥಮ, ದೇಶೀಯ ಆಟಿಕೆ ತಯಾರಿಕೆಯಲ್ಲಿ ಧ್ರುವ ಪ್ರಥಮ ಸ್ಥಾನ, ನಾಟಕದಲ್ಲಿ ವಿಭವ್  ಭಾಗ್ವತ್ ಪ್ರಥಮ ಸ್ಥಾನ, ಜನಪದ ನೃತ್ಯದಲ್ಲಿ ಪೃಥ್ವಿ ಶೆಟ್ಟಿ ಪ್ರಥಮ, ಶ್ರೇಯಾ ಬಡಿಗೇರ್ ಪ್ರಥಮ, ವಾದ್ಯಸಂಗೀತದಲ್ಲಿ ಸಿಂಚನಾ ಶೆಟ್ಟಿ ಪ್ರಥಮ, ಆದರ್ಶ ದ್ವಿತೀಯ ಸ್ಥಾನ, ಭರತನಾಟ್ಯದಲ್ಲಿ ಭುವನಾ ಹೆಗಡೆ ದ್ವಿತೀಯ ಸ್ಥಾನ,ದೇಶೀಯ ಆಟಿಕೆ ತಯಾರಿಕೆಯಲ್ಲಿ ಅನನ್ಯಾ ಅಶ್ವಥ್ ಹೆಗಡೆ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.

300x250 AD

ಸಾಧನೆಗೈದ ಎಲ್ಲಾ ವಿದ್ಯಾರ್ಥಿಗಳಿಗೆ, ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆಗೆ ಬೆನ್ನೆಲುಬಾಗಿ ನಿಂತಿರುವ ಪಾಲಕರಿಗೆ, ಮಾರ್ಗದರ್ಶನ ನೀಡಿದ ಸಹ ಶಿಕ್ಷಕಿ ಶ್ರೀಮತಿ ಮುಕ್ತಾ ನಾಯ್ಕ, ಚೇತನಾ ಹೆಗಡೆ, ವಿನಾಯಕ ಇವರಿಗೆ ಲಯನ್ಸ ಎಜುಕೇಷನ್ ಸೊಸೈಟಿಯ
ಶಿಕ್ಷಣ ಸಂಸ್ಥೆಯ  ಅಧ್ಯಕ್ಷರು ಹಾಗೂ ಸರ್ವ  ಸದಸ್ಯರು, ಲಯನ್ ಸಮೂಹ ಶಾಲೆಗಳ ಪ್ರಾಚಾರ್ಯರು , ಶಿಕ್ಷಕ-ಶಿಕ್ಷಕೇತರ ವೃಂದ,ಶಿರಸಿ ಲಯನ್ಸ್ ಕ್ಲಬ್ ಬಳಗ  ಆಶೀರ್ವಾದಪೂರ್ವಕವಾಗಿ ಅಭಿನಂದಿಸಿ, ಶುಭ ಹಾರೈಸಿದ್ದಾರೆ.

Share This
300x250 AD
300x250 AD
300x250 AD
Back to top