ಕಾರವಾರ: ಜಿಲ್ಲೆಯಲ್ಲಿ 227 ಗ್ರಾಮ ಪಂಚಾಯತಗಳಿದ್ದು, ಅದರಲ್ಲಿ 212 ಪಂಚಾಯತಗಳಲ್ಲಿ ಗ್ರಾಮ ಒನ್ ಕೇಂದ್ರ ಅನುಷ್ಠಾನಗೊಂಡು ಕಾರ್ಯರಂಭಿಸಲಾಗಿದೆ. ಉಳಿದ 15 ಗ್ರಾಮ ಪಂಚಾಯತಗಳಲ್ಲಿ ಹೊಸದಾಗಿ ಗ್ರಾಮ ಒನ್ ಕೇಂದ್ರ ಅನುಷ್ಠಾನಗೊಳ್ಳಬೇಕಾಗಿರುವುದರಿಂದ ಗ್ರಾಮಗಳಲ್ಲಿ ಸಮಗ್ರ ನಾಗರಿಕೆ ಸೇವಾ ಕೇಂದ್ರ ಗ್ರಾಮ ಒನ್ ಆರಂಭಿಸಲು ಉದೇಶಿಸಿದ್ದು, ಪ್ರಾಂಚೈಂಸಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಗ್ರಾಮ ಪಂಚಾಯತಗಳ ವಿವರ: ಕಾರವಾರ ತಾಲ್ಲೂಕಿನ ದೇವಳಮಕ್ಕಿ, ಗೊಟೆಗಾಳಿ, ಕುಮಟಾ ತಾಲ್ಲೂಕಿನ ಗೋಕರ್ಣ, ಯಡಳ್ಳಿ, ಶಿರಸಿ ತಾಲ್ಲೂಕಿನ ಮಂಜಗುಣಿ, ಗುಡ್ನಾಪುರ, ಬದನಗೊಡ, ಮೇಲಿನ ಓಣಿಕೇರಿ, ಜೋಯಿಡಾ ತಾಲ್ಲೂಕಿನ ಅಣಶಿ, ಬಜಾರ್ಕುನಾಂಗ್, ನಗೊಡಾ, ನಂದಿಗದ್ದೆ, ಹಾಗೂ ಯಲ್ಲಾಪುರ ತಾಲ್ಲೂಕಿನ ಹಾಸಂಗಿ, ದೇಹಳ್ಳಿ ಗ್ರಾಮ ಪಂಚಾಯತಗಳಲ್ಲಿ ಒಟ್ಟು 15 ಗ್ರಾಮ ಪಂಚಾಯತಗಳಲ್ಲಿ ಹೊಸದಾಗಿ ಗ್ರಾಮ ಒನ್ ಕೇಂದ್ರ ಆರಂಭಿಸಲು ಆಸಕ್ತ ಪ್ರಾಂಚೈಂಸಿಗಳು ಡಿ.15 ರೊಳಗಾಗಿ https://www.karnatakaone.gov.in/Public/GramOneFrnchiseeTerms ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕಿನ ತಹಶೀಲ್ದಾರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಅಪರ ಜಿಲ್ಲಾಧಿಕಾರಿ ಹಾಗೂ ಗ್ರಾಮ ಒನ್ ಯೋಜನೆಯ ಸದಸ್ಯ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.