ಶಿರಸಿ: ಶಿಕ್ಷಣ ಇಲಾಖೆಯ ವತಿಯಿಂದ 14 ವರ್ಷ ವಯೋಮಿತಿಯೊಳಗಿನ ಬಾಲಕ ಬಾಲಕಿಯರ ರಾಜ್ಯಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾವಳಿಯನ್ನು ಸಿರಸಿಯ ಪುಗಭವನ ಒಳಾಂಗಣ ಕ್ರೀಡಾಂಗಣದಲ್ಲಿ ಡಿಸೆಂಬರ್ 5, 6, 7 ರಂದು ಹಮ್ಮಿಕೊಳ್ಳಲಾಗಿತ್ತು.
ಬಾಲಕರ ವಿಭಾಗದಲ್ಲಿ ಶಿರಸಿ ಲಯನ್ಸ ಆಂಗ್ಲ ಮಾಧ್ಯಮ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿಗಳಾದ ಶ್ರವಣ ಮಾದರ್ ಮತ್ತು ಹರ್ಷಿತ್ ಜೋಗಳೇಕರ್ ಟೇಬಲ್ ಟೆನ್ನಿಸ್ ನಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ಸಾಧನೆ ಗೈದಿದ್ದಾರೆ.
ಹಾಗೆಯೇ ಅಂಬೇಡ್ಕರ್ ಸಭಾಭವನದಲ್ಲಿ ನಡೆದ ಟೇಬಲ್ ಟೆನಿಸ್ ಆಟದ ಉದ್ಘಾಟನಾ ಸಮಾರಂಭದಲ್ಲಿ ,ರಾಜ್ಯ ಮಟ್ಟದ ಎತ್ತರ ಜಿಗಿತ ಪಂದ್ಯಾವಳಿಯಲ್ಲಿ 3ನೇ ಸ್ಥಾನ ಪಡೆದ ಶಿರಸಿ ಲಯನ್ಸ್ ಶಾಲೆಯ ವಿದ್ಯಾರ್ಥಿ 7ನೇ ತರಗತಿಯ ಹಿತೇಶ್ ಸುತಾರ್ ನನ್ನು ಶಾಸಕ ಭೀಮಣ್ಣ ನಾಯ್ಕ ಸನ್ಮಾನಿಸಿದರು.
ಸಾಧನೆಗೈದ ವಿದ್ಯಾರ್ಥಿಗಳಿಗೆ, ಇವರ ಸಾಧನೆಗೆ ಬೆನ್ನೆಲುಬಾಗಿ ನಿಂತ ಪಾಲಕರಿಗೆ , ತರಬೇತುದಾರರಿಗೆ, ಶಿರಸಿ ಲಯನ್ಸ ಎಜುಕೇಷನ್ ಸೊಸೈಟಿಯ, ಹಾಗೂ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು, ಲಯನ್ ಸಮೂಹ ಶಾಲೆಗಳ ಪ್ರಾಚಾರ್ಯರು , ಶಿಕ್ಷಕ-ಶಿಕ್ಷಕೇತರ ವೃಂದ, ಶಿರಸಿ ಲಯನ್ಸ್ ಕ್ಲಬ್ ಬಳಗ ಆಶೀರ್ವಾದಪೂರ್ವಕವಾಗಿ ಅಭಿನಂದಿಸಿ, ಶುಭ ಹಾರೈಸಿದ್ದಾರೆ.