Slide
Slide
Slide
previous arrow
next arrow

ಅಥ್ಲೆಟಿಕ್ಸ್: ಸುಪ್ರೀಯಾ ಗೌಡ ರಾಷ್ಟ್ರಮಟ್ಟಕ್ಕೆ ಆಯ್ಕೆ

300x250 AD

ಕುಮಟಾ; ದಕ್ಷಿಣ ಕನ್ನಡದ ರಾಮಕೃಷ್ಣ ಪ್ರೌಢಶಾಲೆ ಕೊಂಬಿಟ್ಟು ಪುತ್ತೂರು ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ 17 ವರ್ಷ ವಯೋಮಿತಿ ಒಳಗಿನ ಪ್ರೌಢ ಶಾಲೆಗಳ ಇಲಾಖಾ ಕ್ರೀಡಾಕೂಟದಲ್ಲಿ ಮೂರೂರಿನ ಪ್ರಗತಿ ವಿದ್ಯಾಲಯದ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿಯಾದ ಸುಪ್ರಿಯಾ ಶಂಕರ್ ಗೌಡ ಅಥ್ಲೆಟಿಕ್ ವಿಭಾಗದ 400 ಮೀಟರ್ ಓಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಓಟದ ಗುರಿಯನ್ನು ಒಂದು ನಿಮಿಷ 02.3 ಸೆಕೆಂಡ್ ನಲ್ಲಿ ದಾಖಲಿಸಿ ಗುರಿ ತಲುಪಿದ್ದಾಳೆ. ಕಳೆದ ವರ್ಷ 200 ಮತ್ತು 400 ಮೀಟರ್ ವಿಭಾಗದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಳು. ಈ ಮೂಲಕ ಸತತ ಎರಡನೇ ಬಾರಿ ರಾಷ್ಟ್ರಮಟ್ಟದಲ್ಲಿ ರಾಜ್ಯವನ್ನು ಪ್ರತಿನಿಧಿಸಿದ ಕೀರ್ತಿ ಸುಪ್ರಿಯ ಶಂಕರ್ ಗೌಡರದ್ದು. ಅವರ ಸಾಧನೆಗೆ ಕುಮಟಾ ಶಾಸಕರಾದ ದಿನಕರ ಶೆಟ್ಟಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಗಜಾನನ್ ಪೈ, ಕುಮಟಾ ಹಾಲಕ್ಕಿ ಒಕ್ಕಲಿಗರ ಸಂಘದ ಅಧ್ಯಕ್ಷ ಗೋವಿಂದ ಗೌಡ, ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಆರ್.ಜಿ.ಭಟ್, ಕ್ಷೇತ್ರ ಶಿಕ್ಷಣಾಧಿಕಾರಿ ಆರ್ ಎಲ್ ಭಟ್, ಶಾಲೆಯ ಮುಖ್ಯೋಪಾಧ್ಯಾಯರು, ಮತ್ತು ಶಿಕ್ಷಕವೃಂದ ಸಂತಸ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.
ಶಾಲೆಯ ಶಿಕ್ಷಕರ ಜೊತೆಗೆ ಕಮಲಾ ಬಾಳಿಗಾ ಪ್ರಶಿಕ್ಷಣ ಕಾಲೇಜಿನ ದೈಹಿಕ ಶಿಕ್ಷಕ ಜಿ.ಡಿ.ಭಟ್ ರಿಂದ ವಿಶೇಷ ತರಬೇತಿ ಮತ್ತು ಮಾರ್ಗದರ್ಶನ ಪಡೆದಿದ್ದಳು. ಇವರು ಅಂತ್ರವಳ್ಳಿ ಗುಳ್ಳೆಬೈಲಿನ ಪ್ರಗತಿಪರ ಕೃಷಿಕ ಎಸ್.ಟಿ.ಗೌಡ ಮತ್ತು ಭಾರತಿ ದಂಪತಿಯರ ಮಗಳಾಗಿದ್ದಾಳೆ.

300x250 AD
Share This
300x250 AD
300x250 AD
300x250 AD
Back to top