Slide
Slide
Slide
previous arrow
next arrow

ಅನಮೋಡ ಅಬಕಾರಿ ಪೊಲೀಸರಿಂದ‌ ಭರ್ಜರಿ ಬೇಟೆ : ಅಕ್ರಮ ಗೋವಾ ಮದ್ಯ ಸಾಗಿಸುತ್ತಿದ್ದ ವ್ಯಕ್ತಿಯ ಬಂಧನ

300x250 AD

ಜೋಯಿಡಾ: ತಾಲೂಕಿನ ಅನಮೋಡ ಅಬಕಾರಿ ಚೆಕ್ ಪೋಸ್ಟ್ ಬಳಿ ಖಚಿತ ಮಾಹಿತಿಯ ಆದಾರದ ಮೇಲೆ ಅಕ್ರಮವಾಗಿ ಗೋವಾ ಸಾರಾಯಿಯನ್ನು ಸಾಗಿಸುತ್ತಿದ್ದ ವ್ಯಕ್ತಿಯೊರ್ವನ್ನು ಬಂಧಿಸಿ, ಸಾರಾಯಿ ಮತ್ತು ವಾಹನವನ್ನು ವಶಪಡಿಸಿಕೊಂಡ ಘಟನೆ ಭಾನುವಾರ ನಸುಕಿನ ವೇಳೆಯಲ್ಲಿ ನಡೆದಿದೆ.

ಅನಮೋಡ ಅಬಕಾರಿ ತನಿಖಾ ಠಾಣೆಯಲ್ಲಿ ವಾಹನಗಳ ತಪಾಸಣೆಯ ಸಂದರ್ಭದಲ್ಲಿ AP-39-UK-3745 ನೋಂದಣಿ ಸಂಖ್ಯೆಯ ಈಚರ್ ವಾಹನದ ಹಿಂಭಾಗದಲ್ಲಿ ಪ್ಲಾಟ್ ಫಾರ್ಮ್‌ಗೆ ಅನಧಿಕೃತ ಕಂಪಾರ್ಟ್ಮೆಂಟ್ ನಿರ್ಮಿಸಿ, ಅದರೊಳಗಡೆ ಗೋವಾ ತಯಾರಿಕೆಯ ಪ್ರತಿಯೊಂದರಲ್ಲಿ ತಲಾ180 ಎಮ್ಎಲ್‌ನ 48 ಬಾಟಲಿಗಳಿರುವ ಮೆನ್ಶನ್ ಹೌಸ್ ಬ್ರಾಂಡಿಯ 34 ಬಾಕ್ಸ್ ಗಳು ಹಾಗೂ ರಾಯಲ್ ಸ್ಟ್ಯಾಗ್ ವಿಸ್ಕಿಯ 02 ಲೀಟರ್‌ನ 06 ಬಾಟಲಿಗಳು ಮತ್ತು ರಾಯಲ್ ಸ್ಟ್ಯಾಗ್ ವಿಸ್ಕಿಯ 750 ಎಮ್ಎಲ್‌ನ 20 ಬಾಟಲಿ (ಒಟ್ಟೂ 320.760 ಲೀಟರ್) ಗಳನ್ನು ವಾಟರ್ ಪ್ರೂಫ್ ಕಾಂಪೌಂಡ್ ಸ್ಲಾಬ್ ಕೋಟ್ ಮತ್ತು ಕಂಪೌಂಡೆಡ್ ರಬ್ಬರ್ ಹಾಗೂ ವಾಟರ್ ಪ್ರೂಫಿಂಗ್ ಕೋಟ್ ಡಬ್ಬಗಳ ಜೊತೆಯಲ್ಲಿ ಮರೆಮಾಚಿ ಸಾಗಿಸುತ್ತಿದ್ದುದನ್ನು ಅಬಕಾರಿ ಪೋಲಿಸರು ಸೆರೆ ಹಿಡಿದಿದ್ದಾರೆ.

ಅಕ್ರಮ ಸಾರಾಯಿ ರೂ. 4,28740 ಇತರೆ ಸರಕಿನ ಮೌಲ್ಯ ರೂ. 5,84,813 ಗಳು ಹಾಗೂ ವಾಹನದ ಮೌಲ್ಯ ರೂ. 14,00,000 ಆಗಿದ್ದು, ಒಟ್ಟೂ ಮೌಲ್ಯ ರೂ. 24,13,553 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಆಂದ್ರಪ್ರದೇಶ ರಾಜ್ಯದ ಕರ್ನೂಲ್ ಜಿಲ್ಲೆಯ ಡೋಣಾ, ಕೊಂಡಾಪೇಟ್ ನಿವಾಸಿ ಜಂಗಿಲಿ ರಾಮು ಜೆ. ಪಾಮನ್ನಾ ಈತನನ್ನು ಬಂಧಿಸಿ, ದಸ್ತಗೀರ್ ಮಾಡಲಾಗಿದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ‌.

300x250 AD

ಅಬಕಾರಿ ಜಂಟಿ ಆಯುಕ್ತರ ನಿರ್ದೇಶನದ ಮೇರೆಗೆ ಅಬಕಾರಿ ಉಪ ಆಯುಕ್ತರ ಮಾರ್ಗದರ್ಶನದಂತೆ ಅಬಕಾರಿ ಉಪ ಅಧೀಕ್ಷಕರು ಯಲ್ಲಾಪುರ ಉಪ -ವಿಭಾಗದ ಸೂಚನೆಯಂತೆ ಈ ಕಾರ್ಯಚರಣೆಯಲ್ಲಿ ಅನಮೋಡ ಅಬಕಾರಿ ಠಾಣೆಯ ಪಿ.ಎಸ್.ಐಗಳಾದ ಮಹೇಂದ್ರ ಎಸ್. ನಾಯ್ಕ, ಮಂಜುಕುಮಾರ ನಾಯಕ, ಟಿ. ಬಿ. ಮಲ್ಲಣ್ಣವರ್, ಸಿಬ್ಬಂದಿಗಳಾದ ಆರ್.ಎನ್.ನಾಯಕ, ಎನ್.ಜಿ.ಜೋಗಳೆಕರ, ಬಾಲಕೃಷ್ಣ ಕುಪ್ಪಸ್ವಾಮಿ ಹಾಗೂ ದೀಪಕ ಬಾರಾಮತಿ ಇದ್ದರು‌.

Share This
300x250 AD
300x250 AD
300x250 AD
Back to top