ಶಿರಸಿ: ನಗರದ ಮಾರಿಕಾಂಬಾ ಕ್ರೀಡಾಂಗಣದಲ್ಲಿ ಮಾರ್ನಿಗ್ ಕ್ರಿಕೆಟ್ ಕ್ಲಬ್ ವತಿಯಿಂದ ಹಮ್ಮಿಕೊಂಡ ಎಂಸಿಸಿ ದ್ವಾದಶಮಾನೋತ್ಸವ ಟ್ರೋಫಿಯಲ್ಲಿಎಂಸಿಸಿ ಲಯನ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿತು.
ಇಲಾಖೆಯ ಅಧಿಕಾರಿಗಳು ಸಂಘಟಿಸಿದ್ದ ಕ್ರಿಕೆಟ್ ಪಂದ್ಯಾವಳಲ್ಲಿ ಎಂಸಿಸಿ ಟೈಗರ್ ರನ್ನರಪ್, ಎಂಸಿಸಿ ಜಾಗ್ವಾರ್ ತಂಡ ತೃತೀಯ ಸ್ಥಾನ ಪಡೆಯಿತು. ಟ್ರೋಫಿ ವಿತರಿಸಿ, ಸಿಪಿಐ ರಾಮಚಂದ್ರ ನಾಯಕ ಮಾತನಾಡಿ, ದಿನನಿತ್ಯದ ಜಂಜಾಟದ ನಡುವೆ ಕ್ರೀಡೆ ಮನಸ್ಸಿಗೆ ಹಾಗೂ ದೇಹಕ್ಕೆ ನೆಮ್ಮದಿಯನ್ನು ನೀಡುತ್ತದೆ. ಕ್ರೀಡೆಯಲ್ಲಿ ಸೋಲು-ಗೆಲುವು ಸಹಜ. ಆದರೆ ಪಾಲ್ಗೊಂಡಿದ್ದೇವೆ ಎಂಬ ಹಮ್ಮೆ ನಮಗಿರಬೇಕು. ಆಟಗಾರರಿಗೆ ತರಬೇತಿ ನೀಡುತ್ತಿರುವ ಈ ಸಂಸ್ಥೆ ಇನ್ನೂ ಬೆಳಗಲಿ ಎಂದು ಶುಭ ಹಾರೈಸಿದರು.
ಪಂಡಿತ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಗಜಾನನ ಭಟ್ಟ, ಹೆಸ್ಕಾಂ ಸಹಾಯಕ ಅಭಿಯಂತರ ನಾಗರಾಜ ಪಾಟೀಲ, ನಗರ ಠಾಣೆಯ ಪಿ.ಎಸ್.ಐ ರಾಜಕುಮಾರ ಉಕ್ಕಲಿ, ತಾಲೂಕಾ ಕ್ರೀಡಾಧಿಕಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ವ್ಯವಸ್ಥಾಪಕ ಎಸ್.ಐ.ನಾಯ್ಕ, ತಾಲೂಕಾ ಕ್ರೀಡಾಧಿಕಾರಿ ಕಿರಣ ನಾಯ್ಕ ಸೇರಿದಂತೆ ಮತ್ತಿತರರು ಇದ್ದರು. ಪಂದ್ಯ ಪುರುಷೋತ್ತಮ ಭಾನುಪ್ರಕಾಶ, ಬೆಷ್ಟ್ ಫಿಲ್ಡರ್ ಆದರ್ಶ, ಬೆಸ್ಟ್ ಬಾಲರ್ ಪ್ರಶಾಂತ.ಎಸ್.ಎಚ್, ಬೆಸ್ಟ್ ಬ್ಯಾಟ್ಸ್‌ಮಾನ್ ಭಾನುಪ್ರಕಾಶ ಟ್ರೋಫಿ ಪಡೆದುಕೊಂಡರು.