Slide
Slide
Slide
previous arrow
next arrow

ದಲಿತ ಸಿಎಂ-ಹೈಕಮಾಂಡ್ ನಿರ್ಣಯವೇ ಅಂತಿಮ: ಸಚಿವ ಜಾರಕಿಹೊಳಿ

300x250 AD

ಶಿರಸಿ: ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಮಾಡಲು ಕಾಲ ಇನ್ನೂ ಪಕ್ವ ಆಗಿಲ್ಲ. ಅದರ ಬಗ್ಗೆ ಹೈಕಮಾಂಡ್ ನಿರ್ಧಾರವೇ ಅಂತಿಮ. ಯಾರನ್ನೂ ಜಾತಿ ಆಧಾರದ ಮೇಲೆ ಮುಖ್ಯಮಂತ್ರಿ ಮಾಡಲು ಆಗದು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ದಲಿತ ಮುಖ್ಯಮಂತ್ರಿ ಬಗ್ಗೆ ನಾವು ಪಕ್ಷದ ವರಿಷ್ಠರ ಜೊತೆ ಚರ್ಚಿಸುತ್ತೇವೆ. ಆದರೆ, ಪಕ್ಷದ ಹೈಕಮಾಂಡ್ ಕೈಗೊಳ್ಳುವ ನಿರ್ಣಯವೇ ಅಂತಿಮ ಎಂದು ತಿಳಿಸಿದರು.

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ ಅವರ ಕಡೆಗಣನೆ ಮಾಡಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 30 ವರ್ಷಗಳಿಂದ ರಾಜಕಾರಣದಲ್ಲಿ ಇರುವ ಹರಿಪ್ರಸಾದ ಅವರನ್ನು ಕಡೆಗಣನೆ ಮಾಡುವ ಪ್ರಶ್ನೆಯೇ ಇಲ್ಲ. ಅವರೊಂದಿಗೆ ಚರ್ಚಿಸಲಾಗುವುದು ಎಂದರು.

300x250 AD

ಬಹಳಷ್ಟು ಹಿರಿಯ ನಾಯಕರಿಗೆ ಸ್ಥಾನ ನೀಡಿಲ್ಲ. ಅವಕಾಶ ಬಂದಾಗ, ಅವರಿಗೂ ಸ್ಥಾನಮಾನ ಸಿಗಲಿದೆ. 25 ಶಾಸಕರಿಗೆ ನಿಗಮ ಮಂಡಳಿಯಲ್ಲಿ ಸ್ಥಾನ ನೀಡಲಾಗುವುದು. ಹಂತಹಂತವಾಗಿ ಎಲ್ಲರನ್ನೂ ಸಮಾಧಾನ ಮಾಡಲಾಗುವುದು. ಯಾರೂ ಅಸಮಾಧಾನ ಪಡಬೇಕಿಲ್ಲ ಎಂದರು.

ಗುತ್ತಿಗೆದಾರರಿಗೆ ಹಣ ನೀಡಲು ಆಯಾ ಇಲಾಖೆಯವರು ಕ್ರಮವಹಿಸುತ್ತಾರೆ. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು 6 ತಿಂಗಳಾಯಿತು. 11,500 ಕೋಟಿ ಅನುದಾನ ಇಲಾಖೆಗೆ ಮಂಜೂರಾದರೆ, ಅದಕ್ಕೂ ದುಪ್ಪಟ್ಟು ಕಾಮಗಾರಿ ಮಂಜೂರು ಆಗಿರುವುದೇ ಗುತ್ತಿಗೆದಾರರ ಸಮಸ್ಯೆಗೆ ಕಾರಣ ಎಂದರು.

Share This
300x250 AD
300x250 AD
300x250 AD
Back to top