Slide
Slide
Slide
previous arrow
next arrow

ಇಂದಿನಿಂದ ಬೃಹತ್ ಮಲೆನಾಡು ಮೆಗಾ ಉತ್ಸವ ಆರಂಭ

300x250 AD

ಶಿರಸಿ: ಗೃಹೋದ್ಯಮ ಮತ್ತು ನವೋದ್ಯಮಕ್ಕೆ ಪೂರಕವಾಗಿ ಬೃಹತ್ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಓಜಸ್ ಹೆಲ್ತ್ ಬೂಸ್ಟರ್ ಹಾಗೂ ಶಿರಸಿ ರುಚಿ ಪ್ರಾಯೋಜಕತ್ವದಲ್ಲಿ ನ.30, ಗುರುವಾರದಿಂದ ಡಿ.3, ಭಾನುವಾರದವರೆಗೆ 4 ದಿನಗಳ ಕಾಲ ಇಲ್ಲಿನ ವಿಕಾಸ ಆಶ್ರಮ ಬಯಲು ರಂಗ ಮಂದಿರದ ಆವಾರದಲ್ಲಿ ಬೃಹತ್ ಮಲೆನಾಡು ಮೆಗಾ ಉತ್ಸವ ನಡೆಯಲಿದೆ.

ಆಯೋಜಕರು ಬೃಹತ್ ಮಲೆನಾಡು ಮೆಗಾ ಉತ್ಸವಕ್ಕೆ ಸಕಲ ಸಿದ್ಧತೆಗಳನ್ನು ನಡೆಸಿಕೊಂಡಿದ್ದು, 100 ಸ್ಟಾಲ್‌ಗಳು ಸಿದ್ಧವಾಗಿದೆ. ಇಂದು ಸಾಯಂಕಾಲ ಈ ಉತ್ಸವಕ್ಕೆ ಚಾಲನೆ ದೊರೆಯಲಿದ್ದು, ಮಾಜಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸಲಿದ್ದಾರೆ. ಈ ಉತ್ಸವವು ನಾಲ್ಕು ದಿನಗಳ ಕಾಲ ನಡೆಯಲಿದ್ದು, ಜಾತ್ರೆಯ ವಾತಾವರಣ ನಿರ್ಮಿಸಲಿದೆ.

300x250 AD

ಮಲೆನಾಡು ಉತ್ಸವಕ್ಕೆ ಜಿಲ್ಲೆಯ ಜನರು ಹಾಗೂ ಇನ್ನಿತರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಉತ್ಸವಕ್ಕೆ ಮೆರಗು ನೀಡುವಂತೆ ಆಯೋಜಕರು‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ‌

Share This
300x250 AD
300x250 AD
300x250 AD
Back to top