Slide
Slide
Slide
previous arrow
next arrow

‘ವ್ಯಕ್ತಿ ಶಕ್ತಿ’ ಕೇವಲ ಕೃತಿಯಲ್ಲ, ಆಕೃತಿ ಹಾಗೂ ಒಂದು ದರ್ಶನ : ಉಮಾಕಾಂತ ಭಟ್ಟ

300x250 AD

ಪತ್ರಕರ್ತ ರಾಜು ಅಡಕಳ್ಳಿ ಅವರ ‘ವ್ಯಕ್ತಿ ಶಕ್ತಿ’ ಅಂಕಣಗಳ‌ ಸಂಕಲನ ಬಿಡುಗಡೆ

ಶಿರಸಿ: ವ್ಯಕ್ತಿ ಶಕ್ತಿ ಕೇವಲ ಕೃತಿಯಲ್ಲ, ಅದೊಂದು ಆಕೃತಿ ಹಾಗೂ ಒಂದು ದರ್ಶನವಾಗಿದೆ ಎಂದು ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೇಕೈ ಬಣ್ಣಿಸಿದರು.

ಅವರು ಬುಧವಾರ ನಗರದ ರಂಗಧಾಮದಲ್ಲಿ ಹಿರಿಯ ಪತ್ರಕರ್ತ ರಾಜು ಅಡಕಳ್ಳಿ ಅವರು ಬರೆದ ವ್ಯಕ್ತಿ ಶಕ್ತಿ ಅಂಕಣಗಳ‌ ಸಂಕಲನ ಬಿಡುಗಡೆಗೊಳಿಸಿ‌, ಮಾತನಾಡಿದರು. ಮರೆಯಬಾರದ, ಮರೆಯಲಾರದ ವ್ಯಕ್ತಿಗಳ ಪರಿಚಯ ಇಲ್ಲಿದೆ. ಮರೆಯಬಾರದ ವ್ಯಕ್ತಿಗಳನ್ನು ನಿರ್ಣಯಿಸುವದು ಸಮಾಜ. ಉತ್ತರ ಕನ್ನಡದಲ್ಲಿ ಮರೆಯಬಾರದ ವ್ಯಕ್ತಿಗಳು ಸಾವಿರಾರು ಜನರಿದ್ದಾರೆ. ಆದರೆ, ನಾವು ನೆನಪಿಸಿಕೊಳ್ಳುತ್ತಿಲ್ಲ. ನಮ್ಮ ನೆಲದ‌ ಋಣ ತೀರಿಸಲು ಸಾಧಕರ ಚಿಕ್ಕ ಚಿಕ್ಕ ಹೊತ್ತಿಗೆ ಆಗಬೇಕು‌ ಎಂದರು.

ಬದುಕಿದ್ದಾಗ ಮಾತಾಗುವದು ಬೇರೆ. ಮಾತು ಬದುಕಾಗಿಸಬೇಕು. ಮಾತು ಜ್ಯೋತಿ ಎಂದು
ಮಾತು ಬೆಳಕಾಗಬೇಕು. ಬೆಳಕಿನಲ್ಲಿ‌ ಮಾತಾಗುವ ಅನೇಕ ದೇಶಗಳು ಇವೆ. ಆದರೆ, ಮಾತು ಎಂಬ ಜ್ಯೋತಿರರ್ಲಿಂಗ ಎಂಬ ಮಾತಿದೆ. ಅಂಥ ಅಪರೂಪದ ಅಕ್ಷರ ರೂಪ‌ ಇಲ್ಲಿದೆ. ನಮಗೆಲ್ಲ ಮಾತು ಕಲಿಸಿದ ಮಾತೆ, ಬದುಕು ಕಲಿಸಿದ್ದೂ ಮಾತೆ. ಮಾತಿಗೂ ಒಂದು ಬೆಲೆ ಬರಬೇಕು ಎಂದ ಅವರು ಹಿತದ ಜೊತೆ ಸಾಹಿತ್ಯ ಇದ್ದಾಗ ಆಪ್ತವಾಗುತ್ತದೆ ಎಂದರು.

ವಿಶ್ವವಾಣಿ‌ ಪತ್ರಿಕೆ ಸಂಪಾದಕ ವಿಶ್ವೇಶ್ವರ ಭಟ್ಟ ಮಾತನಾಡಿ, ಪುಸ್ತಕ ಸಾಹಿತ್ಯ ಲೋಕ ಶ್ರೀಮಂತಗೊಳಿಸುವ ಜೊತೆಗೆ ನಮ್ಮೊಳಗಿನ ಅಕ್ಷರ ಶಕ್ತಿ ಬೆಳೆಸುತ್ತದೆ. ಯಾವುದೇ ದೇಶದಲ್ಲಿ ಇರದೇ ಇರುವಷ್ಟು ಮಹತ್ವ ನಮ್ಮ ನೆಲದ‌ಲ್ಲಿನ‌ ಪುಸ್ತಕ ಬಿಡುಗಡೆ ಸಮಾರಂಭಕ್ಕಿದೆ. ವ್ಯಕ್ತಿ ಶಕ್ತಿ ಅಂಕಣ ಬರೆಯುವುದು ಸುಲಭವಲ್ಲ ಎಂದರು.

300x250 AD

ಲೇಖಕ ರಾಜು ಅಡಕಳ್ಳಿ ಮಾತನಾಡಿ, ಪರಿಸರವಾದಿ, ಕೈಗಾರಿಕೋದ್ಯಮ, ಸಾಂಸ್ಕೃತಿಕ ಎಲ್ಲ‌ ಕ್ಷೇತ್ರದ ಸಾಧಕರನ್ನು ಪರಿಚಯಿಸಲು ಅವಕಾಶ ಸಿಕ್ಕಿದೆ‌. ಸಾಧಕರ ಪರಿಚಯಿಸುತ್ತಲೇ ಅವರನ್ನು ಅರಿಯಲು ಅವಕಾಶ ಸಿಕ್ಕಿದೆ ಎಂದ ಅವರು ಫೇಸ್‌ಬುಕ್, ವಾಟ್ಸಾಪ್ ಬಂದ ಬಳಿಕ ಸಹನೆ ಕಡಿಮೆ ಆಗಿದೆ. ಓದು, ಬರಹ ಎರಡೂ ಬೇಕು ಎಂದರು.

ಲೋಕಧ್ವನಿ ದೈನಿಕದ ಸಂಪಾದಕ‌ ರಾಧಾಕೃಷ್ಣ ಭಡ್ತಿ, ರಾಜು ಅಡಕಳ್ಳಿ ಅವರು ಜಿಲ್ಲೆಯ ಪ್ರತಿಭಾವಂತರನ್ನು, ಸದ್ದಿಲ್ಲದೇ ಕೆಲಸ ಮಾಡುತ್ತಿದ್ದವರನ್ನು ಪರಿಚಯಿಸಿದವರು. ರಾಜ್ಯ, ರಾಷ್ಟ್ರ ಮಟ್ಟದ ಕಲಾವಿದರು, ಸಾಧಕರನ್ನೂ ಪರಿಚಯಿಸಿದ್ದಾರೆ ಎಂದರು.

ನಾಗರಾಜ ಮತ್ತಿಗಾರ ನಿರ್ವಹಿಸಿದರು. ವಿನುತಾ ಹೆಗಡೆ ಕಾನಗೋಡ ವಂದಿಸಿದರು. ಜಯಂತ ಭಟ್ಟ ಇತರರು ಇದ್ದರು.

Share This
300x250 AD
300x250 AD
300x250 AD
Back to top