Slide
Slide
Slide
previous arrow
next arrow

ಡಿ.1ಕ್ಕೆ ಉಚಿತ ಐಎಎಸ್ ಓರಿಯೆಂಟೆಷನ್ ಕಾರ್ಯಕ್ರಮ

300x250 AD

ಶಿರಸಿ: ಐಎಎಸ್, ಐಪಿಎಸ್, ಕೆಎಎಸ್ ಸೇರಿದಂತೆ ಯುಪಿಎಸ್ಸಿ ಸಂಬಂಧಿತ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಉತ್ತರ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳಿಗೆ ಉಚಿತ ಓರಿಯೆಂಟೆಷನ್ ಕಾರ್ಯಕ್ರಮ ಡಿ.1, ಶುಕ್ರವಾರ ನಗರದ ಎಂ.ಇ.ಎಸ್ ವಾಣಿಜ್ಯ ಮಹಾವಿದ್ಯಾಲಯದಲ್ಲಿ ನಡೆಯಲಿದೆ.

ಎಂ.ಇ.ಎಸ್ ವಾಣಿಜ್ಯ ಮಹಾವಿದ್ಯಾಲಯ ಶಿರಸಿ ಹಾಗು ಸಮುತ್ಕರ್ಷ ಐಎಎಸ್ ಕೋಚಿಂಗ್ ಅಕಾಡೆಮಿ ಹುಬ್ಬಳ್ಳಿಯವರ ಸಹಯೋಗದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಯುಪಿಎಸ್ಸಿ ಸಂಬಂಧಿತ ಪರೀಕ್ಷಾ ತಯಾರಿ ನಡೆಸುತ್ತಿರುವವರಿಗಾಗಿ ಅಂದು ಬೆಳಿಗ್ಗೆ 10.30 ರಿಂದ 12.30 ರ ವರೆಗೆ ಎರಡು ಗಂಟೆಗಳ ಕಾಲ ಐಎಎಸ್ ಪರೀಕ್ಷೆಯನ್ನು ಎದುರಿಸಿ, ಉತ್ತೀರ್ಣರಾಗುವುದು ಹೇಗೆ? ಎಂಬ ವಿಷಯದ ಮೇಲೆ ಉಚಿತ ಓರಿಯೆಂಟೆಷನ್ ಕಾರ್ಯಕ್ರಮ ನಡೆಯಲಿದೆ. ಪದವಿ ಮುಗಿಸಿರುವ ಅಥವಾ ಅಂತಿಮ ವರ್ಷದಲ್ಲಿ ಪದವಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಆಗಮಿಸಲು ಅವಕಾಶವಿದೆ. ಹೆಚ್ಚಿನ ಮಾಹಿತಿಗಾಗಿ 9663400284 ಸಂಪರ್ಕಿಸಬಹುದಾಗಿದೆ.

300x250 AD
Share This
300x250 AD
300x250 AD
300x250 AD
Back to top