ಅಂಕೋಲಾ: ರಾಷ್ಟ್ರ ಸೇವಿಕಾ ಸಮಿತಿಯಲ್ಲಿ ಸಕ್ರಿಯರಾಗಿದ್ದ ತೆಂಕಣಕೇರಿಯ ಶಾರದಾಬಾಯಿ ಅನಂತ ರಾಯ್ಕರ್ ತೆಂಕಣಕೇರಿ ಇವರು ನ. 25 ರಂದು ನಿಧನರಾಗಿದ್ದಾರೆ.
ಬೆಳಗಾವಿಯಲ್ಲಿ 12 ಡಿಸೆಂಬರ್ 1933 ರಂದು ಜನಿಸಿದ ಶಾರದಾಬಾಯಿ ಅವರು ತೆಂಕಣಕೇರಿಯ ಆರೆಸ್ಸೆಸ್‌ನ ಹಿರಿಯ ಕಾರ್ಯಕರ್ತರು, ಜವಳಿ ವ್ಯಾಪಾರಿ ಆಗಿದ್ದ ದಿ. ಅನಂತ ರಾಯ್ಕರ ಅವರ ಪತ್ನಿ. ದಿ.ರಾಯಪ್ಪ ರಾಯ್ಕರ ಕುಟುಂಬದ ಎಂಟನೇ ಸೊಸೆ. ಇವರು 6 ಗಂಡು ಮಕ್ಕಳು, ಸೊಸೆಯಂದಿರು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಇವರು ಬಾಲ್ಯದಿಂದಲೇ ಬೆಳಗಾವಿಯಲ್ಲಿ ರಾಷ್ಟ್ರ ಸೇವಿಕಾ ಸಮಿತಿಯಲ್ಲಿ ಸಕ್ರಿಯರಾಗಿದ್ದರು. ಸಂಘ ಪರಿವಾರದ ಮನೆ ಗ್ರಹಿಣಿಯಾದ ಇವರು ಸಂಘ ಪರಿವಾರದ ಅನೇಕ ಮುಖಂಡರು, ಸ್ವಯಂಸೇವಕರು ಮತ್ತು ಕಾರ್ಯಕರ್ತರಿಗೆ ಊಟ ಉಣಬಡಿಸಿದ ಮಹಾತಾಯಿಯಾಗಿದ್ದರು. ಇವರ ನಿಧನಕ್ಕೆ ವಿಧಾನಸಭಾ ಮಾಜಿ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಶಾಸಕಿ ರೂಪಾಲಿ ನಾಯ್ಕ, ಬಿಜೆಪಿ ಘಟಕ, ಸಂಘದ ಪ್ರಮುಖರು, ವ್ಯಾಪಾರಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.