Slide
Slide
Slide
previous arrow
next arrow

ಅಣಲಗಾರಿನಲ್ಲಿ ಯಕ್ಷಗಾನ, ಸನ್ಮಾನ, ಸಂಗೀತ ಕಾರ್ಯಕ್ರಮ ಯಶಸ್ವಿ

300x250 AD

ಯಲ್ಲಾಪುರ: ತಾಲೂಕಿನ ಅಣಲಗಾರ ಶ್ರೀಗೋಪಾಲಕೃಷ್ಣ ದೇವಾಲಯದಲ್ಲಿ ಯಕ್ಷಗಾನ ಪ್ರದರ್ಶನ, ಸನ್ಮಾನ ಹಾಗೂ ಸಂಗೀತ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಹಿರಿಯರಾದ ಸುಬ್ರಾಯ ಭಾಗ್ವತ್ ಗುಡ್ನಮನೆಯವರನ್ನು ದೇವಾಲಯದ ಆಡಳಿತ ಮಂಡಳಿ ಹಾಗೂ ಸಾರ್ವಜನಿಕರ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ಪತ್ರಕರ್ತ ಜಿ.ಎನ್.ಭಟ್ ತಟ್ಟಿಗದ್ದೆ ಅಭಿನಂದನಾ ನುಡಿಗಳನ್ನಾಡಿ, ಸುಬ್ರಾಯ ಭಾಗ್ವತ್ ಅವರು ಶ್ರೇಷ್ಠ ಕೃಷಿಕರಾಗಿ, ಸದ್ಗೃಹಸ್ಥರಾಗಿ, ಅನೇಕ ದಶಕಗಳಿಂದ ಅಣಲಗಾರ ದೇವಾಲಯದ ಎಲ್ಲ ಕೆಲಸ ಕಾರ್ಯಗಳಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಅವರ ಕುಟುಂಬದವರೂ ಸಹ ಈಗ ಇದೇ ರೀತಿಯ ಸೇವಾ ಮನೋಭಾವನೆಯನ್ನು ಹೊಂದಿದ್ದಾರೆ. ಇಂತಹ ಮಹನೀಯರ ಸೇವೆ, ಆದರ್ಶಗಳು ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿ ಎಂಬ ಆಶಯದೊಂದಿಗೆ ಸನ್ಮಾನಿಸಿ ಗೌರವಿಸಲಾಗುತ್ತಿದೆ ಎಂದರು.

ಹಿರಿಯರಾದ ರಾಮಕೃಷ್ಣ ಭಟ್ ಬಿದ್ರೇಪಾಲ,ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ನಾರಾಯಣ ಭಟ್ ಬಿದ್ರೇಪಾಲ, ಮೊಕ್ತೇಸರ ಗೋಪಾಲಕೃಷ್ಣ ಭಟ್ ವೈದಿಕರಮನೆ, ಸಮಿತಿಯ ಕಾರ್ಯದರ್ಶಿ ವಿನಾಯಕ ಭಾಗ್ವತ್, ಕಾರ್ಯಕ್ರಮದ ಆಯೋಜಕರಾದ ವಿಶ್ವನಾಥ ಭಟ್ ತಟ್ಟಿಗದ್ದೆ, ಲತಾ ಭಟ್ ಮುಂತಾದವರು ಇದ್ದರು. ಸಂಗೀತ ಹಾಗೂ ತಬಲಾ ಸೋಲೋ ಕಾರ್ಯಕ್ರಮವನ್ನು ವಿ.ರಾಜೇಂದ್ರ ಭಾಗ್ವತ್, ವೀಕ್ಷಾ ಭಟ್, ರಂಜಿತಾ ಕೋಟೆಮನೆ ನಡೆಸಿಕೊಟ್ಟರು.

300x250 AD

ರಂಜಿಸಿದ ವೀರಮಣಿ ಕಾಳಗ ಯಕ್ಷಗಾನ ಪ್ರದರ್ಶನ:
ಸಭಾ ಕಾರ್ಯಕ್ರಮ ನಂತರ ಖ್ಯಾತ ಕಲಾವಿದರಿಂದ ನಡೆದ ವೀರಮಣಿ ಕಾಳಗ ಯಕ್ಷಗಾನ ಪ್ರದರ್ಶನ ಪ್ರೇಕ್ಷಕರನ್ನು ರಂಜಿಸಿತು. ಹಿಮ್ಮೇಳದಲ್ಲಿ ಭಾಗವತರಾಗಿ ರಾಮಕೃಷ್ಣ ಹೆಗಡೆ ಹಿಲ್ಲೂರು, ಮದ್ದಳೆವಾದಕರಾಗಿ ಪರಮೇಶ್ವರ ಭಂಡಾರಿ ಕರ್ಕಿ, ಚಂಡೆವಾದಕರಾಗಿ ಪ್ರಸನ್ನ ಹೆಗ್ಗಾರ್ ಪಾಲ್ಗೊಂಡಿದ್ದರು. ಮುಮ್ಮೇಳದಲ್ಲಿ ವೀರಮಣಿಯಾಗಿ ರಾಮಚಂದ್ರ ಹೆಗಡೆ ಕೊಂಡದಕುಳಿ, ಶತ್ರುಘ್ನನಾಗಿ ಕೃಷ್ಣ ಯಾಜಿ ಬಳ್ಕೂರು, ಹನೂಮಂತನಾಗಿ ಗಣಪತಿ ಹೆಗಡೆ ತೋಟಿಮನೆ, ಈಶ್ವರನಾಗಿ ವಿನಾಯಕ ಭಟ್ಟ ಶೇಡಿಮನೆ, ರುಕ್ಮಾಂಗನಾಗಿ ದೀಪಕ ಕುಂಕಿ,ಶುಭಾಂಗನಾಗಿ ಶ್ರೀಧರ ಅಣಲಗಾರ ಪಾತ್ರಗಳನ್ನು ನಿರ್ವಹಿಸಿದರು.
ವಿಶ್ವನಾಥ ಭಟ್ ತಟ್ಟಿಗದ್ದೆ ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು

Share This
300x250 AD
300x250 AD
300x250 AD
Back to top