Slide
Slide
Slide
previous arrow
next arrow

ಶಿಕ್ಷಕರ ಪ್ರತಿಭೆಯ ಅನಾವರಣಕ್ಕೆ ಸಹಪಠ್ಯ ಚಟುವಟಿಕೆ ಸ್ಪರ್ಧೆ ಉತ್ತಮ ವೇದಿಕೆ: ಭಾಸ್ಕರ ಗಾಂವ್ಕರ್

300x250 AD

ಅಂಕೋಲಾ: ಜಿಲ್ಲಾ ಪಂಚಾಯತ್ ಉತ್ತರ ಕನ್ನಡ, ಶಾಲಾ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಾರ್ಯಾಲಯ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಇವರ ಸಂಯುಕ್ತ ಆಶ್ರಯದಲ್ಲಿ ಗುರುವಾರ ಅಂಕೋಲಾ ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ತಾಲ್ಲೂಕು ಮಟ್ಟದ ಸಹಪಠ್ಯ ಚಟುವಟಿಕೆ ಸ್ಪರ್ಧೆ ಏರ್ಪಡಿಸಲಾಯಿತು.

ಸರ್ಕಾರಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಭಾಸ್ಕರ ಗಾಂವಕರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಕರಲ್ಲಿ ಹಲವು ವಿಶೇಷ ಪ್ರತಿಭೆಗಳಿವೆ. ದಿನನಿತ್ಯವಾಗಿ ಶಾಲೆಯಲ್ಲಿ ಮತ್ತು ವಿದ್ಯಾರ್ಥಿಗಳಿಗೆ ಅವುಗಳ ಪರಿಚಯವಿದ್ದರೂ ಸಮಾಜಕ್ಕೆ ಶಿಕ್ಷಕರ ಪ್ರತಿಭೆಯ ಅನಾವರಣಕ್ಕೆ ಇಂತಹ ಕಾರ್ಯಕ್ರಮಗಳು ಮಾತ್ರ ಅವಕಾಶ ನೀಡುತ್ತವೆ. ಹಾಗಾಗಿ ಇದೊಂದು ವಿಶೇಷ ಕಾರ್ಯಕ್ರಮ. ಕಳೆದ ವರ್ಷಕ್ಕಿಂತ ಈ ಬಾರಿ ಸ್ಪರ್ಧಾಳುಗಳ ಸಂಖ್ಯೆ ಹೆಚ್ಚಾಗಿದೆ. ಶಿಕ್ಷಕರು ಸಕ್ರಿಯವಾಗಿ ಸ್ಪರ್ದೆಯಲ್ಲಿ ಪಾಲ್ಗೊಂಡು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಎಂದರು.

ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಮಂಜುನಾಥ ನಾಯಕ ಕಾರ್ಯಕ್ರಮ ಉದ್ಘಾಟಿಸಿ ಶುಭಕೋರಿದರು. ಶಿಕ್ಷಣ ಸಂಯೋಜಕ ಬಿ.ಎಲ್.ನಾಯ್ಕ ವೇದಿಕೆಯಲ್ಲಿದ್ದರು. ಬಿಆರ್ ಸಿ ರಾಘವೇಂದ್ರ ನಾಯ್ಕ್, ವಿವಿಧ ಸ್ಪರ್ಧೆಗಳ ವಿವರ ಹಾಗೂ ನಿಯಮಗಳ ಕುರಿತು ವಿವರಣೆ ನೀಡಿದರು. ಬಿಆರ್ ಪಿ ಮಂಜುನಾಥ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದ ಸಂಘಟಕಿ ಶಿಕ್ಷಣ ಸಂಯೋಜಕಿ ರಚನಾ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶಿಕ್ಷಕಿ ರೇಖಾ ದೊಡ್ಮನಿ ಪ್ರಾರ್ಥಿಸಿದರು. ರಾಘವೇಂದ್ರ ನಾಯ್ಕ್ ವಂದಿಸಿದರು.

300x250 AD

ಒಬ್ಬರಿಗೆ ಒಂದೇ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದ್ದು, ಆಶುಭಾಷಣ, ಪ್ರಬಂದ, ಚಿತ್ರಕಲೆ, ಜಾನಪದ ಗೀತೆ, ಪಾಠೋಪಕರಣ ತಯಾರಿಕೆ, ರಸಪ್ರಶ್ನೆ ಮತ್ತು ವಿಜ್ಞಾನ ರಸಪ್ರಶ್ನೆ ಸೇರಿದಂತೆ ಏಳು ಸ್ಪರ್ಧೆಗಳಲ್ಲಿ ಶಿಕ್ಷಕರು ಆಸಕ್ತಿಯಿಂದ ಪಾಲ್ಗೊಂಡು ಪ್ರತಿಭೆ ಅನಾವರಣಗೊಳಿಸಿದರು. ವಿವಿಧ ಶಾಲೆಗಳ ನೂರಾರು ಶಿಕ್ಷಕರು ಉಪಸ್ಥಿತರಿದ್ದರು

Share This
300x250 AD
300x250 AD
300x250 AD
Back to top