Slide
Slide
Slide
previous arrow
next arrow

ಲೋಕಾಭಿಪ್ರಾಯ – 2024: ಬಿಜೆಪಿಯಿಂದ ನಾಗರಾಜ ನಾಯಕ ಲೋಕಸಭೆಗೆ ಅಭ್ಯರ್ಥಿಯಾಗಲಿ

300x250 AD

ಲೋಕಾಭಿಪ್ರಾಯ – 2024 : ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಅನಂತಕುಮಾರ ಮುಂದಿನ ಸಂಸತ್ ಚುನಾವಣೆಗೆ ನಿಲ್ಲುವುದಿಲ್ಲ ಎಂಬ ಮಾತಿಗಳು ಕೇಳಿಬರುತ್ತಿವೆ. ಈ ನಡುವೆ ಮುಂದಿನ ಸಂಸದ ಸದಸ್ಯರು ಯಾರಾಗಬೇಕು ಎಂಬ ಬಗ್ಗೆ ಪತ್ರಿಕೆಗಳಲ್ಲಿ ಮತ್ತು ಸಾಮಾಜಿಕ ಜಾಲ ತಾಣಗಳಲ್ಲಿ ಜೋರಾಗಿ ಚರ್ಚೆಗಳು ಪ್ರಾರಂಭವಾಗಿದೆ. ಅನೇಕ ಬಿಜೆಪಿ ನಾಯಕರ ಹೆಸರು ಬರುತ್ತಿದೆಯಾದರೂ ಬಿಜೆಪಿ ಜಿಲ್ಲಾವಕ್ತಾರ ನ್ಯಾಯವಾದಿ ನಾಗರಾಜ ನಾಯಕರ ಹೆಸರು ಜಿಲ್ಲೆಯ ಎಲ್ಲಾ ಭಾಗಗಳಿಂದ ಗಟ್ಟಿಯಾಗಿ ಕೇಳಿ ಬರುತ್ತಿದೆ. ಸಾಮಾಜಿಕ ಜಾಲ ತಾಣಗಳ ಮೂಲಕವೂ ಸಹ ಯುವಕರು ನಾಗರಾಜ ನಾಯಕರ ಹೆಸರನ್ನು ಪಠಿಸುತ್ತಿದ್ದಾರೆ.

ಈ ರೀತಿ ನಾಗರಾಜ ನಾಯಕರ ಹೆಸರು ಜನ ಹೇಳಲು ಕಾರಣವೂ ಬಲವಾಗಿದೆ. ಹಿಂದೂ ಹುಲಿ ಎಂದೇ ಪ್ರಖ್ಯಾತರಾಗಿರುವ ಅನಂತಕುಮಾರ ರೀತಿಯ ಪ್ರಖರ ಹಿಂದುತ್ವವಾದಿಯಾಗಿರುವ ಇವರು ಜಿಲ್ಲೆಯಲ್ಲಿ ಗೋ ಕಳ್ಳತನ ಆಗುತ್ತಿರುವ ಬಗ್ಗೆ ಸದಾ ಆತಂಕ ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಸರ್ಕಾರ ಗೋಕಳ್ಳರಿಗೆ ಬೆಂಬಲವಾಗಿ ನಿಂತಿದೆ ಎಂದು ಬಹಿರಂಗವಾಗಿ ಬೊಬ್ಬೆ ಹೊಡೆದಿದ್ದರು. ಸನಾತನ ಧರ್ಮ ನಾಶವಾಗಬೇಕು ಎಂದು ಉದಯ ನಿಧಿ ಸ್ಥಾಲಿನ ಹೇಳಿದಾಗ ಅವರ ಮೇಲೆಯೇ ಠಾಣೆಗೆ ಹೋಗಿ ಫಿರ್ಯಾದು ಸಲ್ಲಿಸಿ ಬಂದಿರುವ ಇವರು ಹಿಂದುತ್ವದ ವಿಷಯದಲ್ಲಿ ರಾಜಿಯೇ ಇಲ್ಲಾ ಎಂಬ ಧೋರಣೆ ಇದ್ದವರು ಎಂಬುದು ಇವರ ಅಭಿಮಾನಿಗಳ ಮಾತಾಗಿದೆ.

300x250 AD

ಹಿಂದುತ್ವದ ವಿಷಯದಲ್ಲಿ ಪ್ರಕರಣಗಳು ಆದಾಗ ಹಿಂದೂ ಕಾರ್ಯಕರ್ತರ ಪರವಾಗಿ ನ್ಯಾಯಾಲಯದಲ್ಲಿ ವಾದಿಸಿ ಹಣ ಸಹ ಪಡೆಯದೇ ಕಾರ್ಯಕರ್ತರನ್ನು ಕಾರಾಗ್ರಹದಿಂದ ಹೊರ ತಂದಿದ್ದಾರೆ. ಹಿಂದುತ್ವಕ್ಕೆ ಯಾವದೇ ರೀತಿಯ ತೊಂದರೆ ಆದಾಗ ಹಿಂದುತ್ವದ ಪರವಾಗಿ ಜಿಲ್ಲೆಯಲ್ಲಿ ಮೊದಲ ಧ್ವನಿ ಎತ್ತುವವರೇ ನ್ಯಾಯವಾದಿ ನಾಗರಾಜ ನಾಯಕ. ಪಕ್ಷದ ಮಟ್ಟದಲ್ಲಿ ಏನಿದೆಯೋ, ಆದರೆ ಜನಮಾನಸದಿಂದ ನಾಗರಾಜ ನಾಯಕ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಹೊರ ಹೊಮ್ಮತ್ತಿದ್ದಾರೆ. ಇದರ ಆಚೆಗೆ ಜಿಲ್ಲೆಯ ಎಲ್ಲಾ ಭಾಗಗಳಲ್ಲಿ ಸಹ ಪ್ರಚಲಿತರಾಗಿದ್ದಾರೆ. ನ್ಯಾಯವಾದಿಯಾಗಿ, ಅಂಕಣಕಾರರಾಗಿ, ಹೋರಾಟಗಾರನಾಗಿ, ಸಂಘಟಕನಾಗಿ, ವಾಗ್ಮಿಯಾಗಿ ಇವರು ಜಿಲ್ಲೆಯಾದ್ಯಂತ ಪ್ರಚಲಿತರು. ಸಂಸದನಾಗುವ ಎಲ್ಲಾ ಲಕ್ಷಣಗಳನ್ನು ಹೊಂದಿರುವ ನಾಗರಾಜ ನಾಯಕರು ಬಿಜೆಪಿಯಿಂದ ಲೋಕಸಭಾ ಅಭ್ಯರ್ಥಿಯಾದರೆ, ಗೆಲ್ಲುವ ವಿಶ್ವಾಸ ನಮ್ಮದು.

  • ನವೀನ ಶೇಟ್, ಅಂಕೋಲಾ (ಖಾಸಗಿ ಉದ್ಯೋಗಿ)
Share This
300x250 AD
300x250 AD
300x250 AD
Back to top